AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್

Vinay Gowda: ಬಿಗ್​ಬಾಸ್ ಮನೆಯ ಅತ್ಯಂತ ಗಟ್ಟಿ ಸ್ಪರ್ಧಿ, ಆನೆ ಎಂದೆಲ್ಲ ಕರೆಸಿಕೊಂಡಿರುವ ವಿನಯ್ ಗೌಡ, ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ್ದಾರೆ.

ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್
ವಿನಯ್ ಗೌಡ
ಮಂಜುನಾಥ ಸಿ.
|

Updated on: Nov 28, 2023 | 11:32 PM

Share

ಬಿಗ್​ಬಾಸ್ (Bigg Boss) ಮನೆಯಲ್ಲಿ ವಿನಯ್ ಅತ್ಯಂತ ಗಟ್ಟಿ ಸ್ಪರ್ಧಿ ಎಂದು ಆರಂಭದಿಂದಲೂ ನಿರೂಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಬಹಳ ಅಗ್ರೆಸ್ಸಿವ್ ಆಗಿ ಆಟವಾಡುವುದಾಗಲಿ, ತಮ್ಮ ಅಭಿಪ್ರಾಯಗಳನ್ನು ಗಟ್ಟಿಯಾಗಿ ಹೇಳುವುದು, ಮನೆಯ ಇತರೆ ಸದಸ್ಯರ ಮೇಲೆ ಪ್ರಭಾವ ಬೀರುವುದಾಗಲಿ ಮಾಡುತ್ತಲೇ ಬಂದಿದ್ದಾರೆ. ಟಾಸ್ಕ್​ಗಳಲ್ಲಿ ಸಹ ಹಲವು ಬಾರಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಗಟ್ಟಿ ಮನೋಬಲವನ್ನು ಸಹ ಹೊಂದಿದ್ದಾರೆ. ಆದರೆ ಮಂಗಳವಾರ ಪ್ರಸಾರವಾದ ಎಪಿಸೋಡ್​ನಲ್ಲಿ ಮಾತ್ರ ವಿನಯ್ ಕಣ್ಣೀರು ಹಾಕಿದ್ದಾರೆ.

ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೆ. ಅವರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ಸ್ನೇಹಿತ್, ವಿನಯ್ ಹಾಗೂ ಇತತರೊಟ್ಟಿಗೆ ಮಾತನಾಡುತ್ತಿದ್ದರು. ಈ ವೇಳೆ ಸ್ನೇಹಿತ್, ಬಿಗ್​ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗೆ ಯಾವ ರೀತಿಯ ಅಭಿಪ್ರಾಯವಿದೆ ಎಂದು ಪವಿ ಅವರನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಭಾರಿ ಸದ್ದು ಮನೆಯ ಘಟನೆ ಯಾವುದು ಎಂದು ಸ್ನೇಹಿತ್ ಕೇಳಿದಾಗ, ಪವಿ, ಬಳೆಯ ಎಪಿಸೋಡ್ ಭಾರಿ ಸದ್ದು ಮಾಡಿತು ಎಂದರು. ಆ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಾಯಿತು ಎಂದು ಸಹ ಹೇಳಿದರು.

ಪವಿ ಅದನ್ನು ವಿವರವಾಗಿ, ವಿನಯ್​ರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ವಿಷಯವನ್ನು ಸಹ ವಿನಯ್ ಬಳಿ ಹೇಳಿದರು ಆದರೆ ಅದನ್ನು ಇಂದಿನ ಎಪಿಸೋಡ್​ನಲ್ಲಿ ತೋರಿಸಲಿಲ್ಲ. ಆದರೆ ಈ ವಿಷಯ ಕೇಳಿ ವಿನಯ್ ಬಹಳ ಬೇಸರಗೊಂಡರು. ಚೇಂಜಿಂಗ್​ ರೂಂಗೆ ಹೋಗಿ ಕಣ್ಣೀರು ಹಾಕಿದರು. ಅದಾದ ಬಳಿಕ ಸೀಕ್ರೆಟ್ ರೂಂಗೆ ಬಂದು ಬಿಗ್​ಬಾಸ್ ಬಳಿ ತಮ್ಮ ಕುಟುಂಬದ ಯೋಗಕ್ಷೇಮ ವಿಚಾರಿಸಿ ಕಣ್ಣೀರು ಹಾಕಿದರು. ನನ್ನನ್ನು ಕೆಟ್ಟವನು ಅಂದುಕೊಳ್ಳಲಿ ಪರವಾಗಿಲ್ಲ ಆದರೆ ನನ್ನಿಂದ ನನ್ನ ಕುಟುಂಬಕ್ಕೆ ಏನೂ ಆಗಬಾರದು, ನಾನು ಬಾಯಿತಪ್ಪಿ ಆಡಿದ ಮಾತು ಅದಾಗಿತ್ತು ಎಂದು ಕೇಳಿಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಏಳನೇ ವಾರದಲ್ಲಿ ಯಾರಿಗೆ ಹೆಚ್ಚು ಮತ? ಸಂಗೀತಾಗೆ ಎಷ್ಟನೇ ಸ್ಥಾನ?

ವಿನಯ್ ಅವರನ್ನು ಸಮಾಧಾನದಿಂದ ಇರುವಂತೆ ಹೇಳಿದ ಬಿಗ್​ಬಾಸ್, ನೀವು ನಿಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದು ನಮಗೆ ಅರಿವಿದೆ. ಅವರು ಕ್ಷೇಮದಿಂದಲೇ ಇದ್ದಾರೆ. ಅರ್ಥವಿಲ್ಲದ ಮಾತುಗಳಿಗೆ ನೀವು ಕಿವಿಗೊಡಬೇಡಿ, ಅದನ್ನು ನಿಜವೆಂದು ಸಹ ನಂಬಬೇಡಿ ಎಂದು ಬಿಗ್​ಬಾಸ್ ಬುದ್ಧಿ ಹೇಳಿದರು. ಬಿಗ್​ಬಾಸ್ ಮಾತಿನಿಂದ ಧೈರ್ಯ ತಂದುಕೊಂಡ ವಿನಯ್, ನಾನು 100% ಪರಿಶ್ರಮ ಹಾಕಿ ಆಟ ಆಡುತ್ತೀನಿ ಬಿಗ್​ಬಾಸ್ ಎಂದು ಹೇಳಿ ಸೀಕ್ರೆಟ್ ರೂಂನಿಂದ ಹೊರಗೆ ಹೋದರು.

ಸಂಗೀತಾ-ಕಾರ್ತಿಕ್ ಹಾಗೂ ವಿನಯ್ ನಡುವೆ ಟಾಸ್ಕ್ ವಿಷಯಕ್ಕೆ ಜಗಳ ಬಂದಾಗ ವಿನಯ್ ಅತಿರೇಕದ ವರ್ತನೆ ತೋರಿದ್ದರು. ಬಳೆಗಳ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ್ದರು. ವಿನಯ್​ರ ಅತಿರೇಕದ ವರ್ತನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಜನ ಹೀಗಳೆದಿದ್ದರು. ಆ ವೇಳೆ ವಿನಯ್​ರ ಪತ್ನಿಗೂ ಸಾಮಾಜಿಕ ಜಾಲತಾಣದಲ್ಲಿ ಎಂಥಹಾ ಕೆಟ್ಟ ಪತಿಯೊಟ್ಟಿಗೆ ಇದ್ದೀರ ಇತ್ಯಾದಿ ನಿಂದನೆಗಳನ್ನು, ಬೆದರಿಕೆಗಳನ್ನು ಹಾಕಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ