ಬಿಗ್​ಬಾಸ್ ಇತಿಹಾಸದಲ್ಲೇ ಮೊದಲು, ಮನೆಯ ಕ್ಯಾಪ್ಟನ್ನೇ ಹೊರಗೆ

Bigg Boss: ಈ ಬಾರಿ ಬಿಗ್​ಬಾಸ್ ಮನೆಯಲ್ಲಿ ಹಲವು ವಿಶೇಷತೆಗಳು ನಡೆದಿವೆ. ವಿವಾದದಿಂದಲೂ, ಒಳ್ಳೆಯ ಮನೊರಂಜನೆ ಎರಡರಿಂದಲೂ ಬಿಗ್​ಬಾಸ್ ಗಮನ ಸೆಳೆದಿದೆ. ಏಳನೇ ವಾರದ ಎಲಿಮಿನೇಷನ್​ನಲ್ಲಿ ಬಿಗ್​ಬಾಸ್ ಇತಿಹಾಸದಲ್ಲಿ ನಡೆಯದಿದ್ದ ಘಟನೆಯೊಂದು ನಡೆದಿದೆ.

ಬಿಗ್​ಬಾಸ್ ಇತಿಹಾಸದಲ್ಲೇ ಮೊದಲು, ಮನೆಯ ಕ್ಯಾಪ್ಟನ್ನೇ ಹೊರಗೆ
Bigg Boss 10 Kannada
Follow us
|

Updated on: Nov 26, 2023 | 11:17 PM

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10 ಹಲವು ಅಪರೂಪದ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಆರಂಭದಲ್ಲಿ ವರ್ತೂರು ಸಂತೋಷ್ ಪ್ರಕರಣದಿಂದ ಸುದ್ದಿಯಾಯ್ತು. ಬಳಿಕ ಬಿಗ್​ಬಾಸ್ ಮನೆಯಲ್ಲಿ ಮಹಿಳೆಯರಿಗೆ, ಮಹಿಳೆ ಧರಿಸುವ ಬಳೆಗೆ ಅಪಮಾನ ಮಾಡಲಾಯ್ತು ಅದೂ ಸಹ ಹೊರಗೆ ಚರ್ಚೆಗೆ ಕಾರಣವಾಯ್ತು. ಅದಾದ ಬಳಿಕ ತನಿಷಾರ ಮಾತೊಂದರ ವಿರುದ್ಧ ದೂರು ದಾಖಲಾಯ್ತು. ಇವೆಲ್ಲದರ ನಡುವೆ ಮನೆಯ ಒಳಗೂ ಕೆಲವು ಅಪರೂಪದ ಘಟನೆಗಳು ನಡೆದವು. ಬಿಗ್​ಬಾಸ್ ಇತಿಹಾಸದಲ್ಲಿ ಇದೇ ಮೊದಲನೇ ಬಾರಿಗೆ ಮನೆಯ ಕ್ಯಾಪ್ಟನ್ ಎಲಿಮಿನೇಟ್ ಆಗಿದ್ದಾರೆ.

ಈ ವಾರ ನೀತು ವನಜಾಕ್ಷಿ ಅವರು ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ ಈ ಬಾರಿ ಅವರೇ ಮನೆಯಿಂದ ಹೊರಗೆ ಹೋಗಿದ್ದಾರೆ. ಬಿಗ್​ಬಾಸ್ ನಿಯಮದ ಪ್ರಕಾರ, ಯಾರು ಕ್ಯಾಪ್ಟನ್ ಆಗಿರುತ್ತಾರೋ ಅವರು ಮುಂದಿನ ವಾರ ನಾಮಿನೇಷನ್​ನಿಂದ ಹೊರಗೆ ಇರುತ್ತಾರೆ. ಹಾಗಾಗಿ ನೀತು ಈ ಒಂದು ವಾರ ಉಳಿದುಕೊಂಡಿದ್ದರೆ ಇನ್ನೂ ಎರಡು ವಾರಗಳ ಕಾಲ ಮನೆಯಲ್ಲಿ ಕಳೆಯಬಹುದಿತ್ತು ಆದರೆ ಅವರ ಅದೃಷ್ಟ ಸರಿಯಿರಲಿಲ್ಲ. ಒಂದೇ ಸೀಸನ್​ನಲ್ಲಿ ಎರಡು ಬಾರಿ ಮನೆಯ ಕ್ಯಾಪ್ಟನ್ ಆದ ಮಹಿಳಾ ಸ್ಪರ್ಧಿಯಾಗಿರುವ ನೀತು ಕ್ಯಾಪ್ಟನ್ ಆಗಿದ್ದಾಗಲೇ ಮನೆಯಿಂದ ಹೊರ ಹೊಗಬೇಕಾಯ್ತು.

ಇದನ್ನೂ ಓದಿ:ಬಿಗ್​ಬಾಸ್ ಏಳನೇ ವಾರದಲ್ಲಿ ಯಾರಿಗೆ ಹೆಚ್ಚು ಮತ? ಸಂಗೀತಾಗೆ ಎಷ್ಟನೇ ಸ್ಥಾನ?

ಈ ವಾರ ನಾಮಿನೇಟ್ ಆದವರಿಗೆ ಜನರು ಹಾಕಿರುವ ಮತಗಳ ಆಧಾರದಲ್ಲಿ ನಾಮಿನೇಷನ್​ನಿಂದ ಸೇಫ್ ಮಾಡಲಾಯ್ತು. ಅತಿ ಹೆಚ್ಚು ಮತ ಗಳಿಸಿದ್ದ ಡ್ರೋನ್ ಪ್ರತಾಪ್, ತನಿಷಾ, ಸಂಗೀತಾ, ವಿನಯ್ ಅವರುಗಳು ಶನಿವಾರದ ಎಪಿಸೋಡ್​ನಲ್ಲಿಯೇ ಸೇಫ್ ಆದರು. ಭಾನುವಾರದ ಎಪಿಸೋಡ್​ನಲ್ಲಿ ಸ್ನೇಹಿತ್, ನಮ್ರತಾ, ತುಕಾಲಿ, ಸಿರಿ, ನೀತು ಅವರುಗಳು ಉಳಿದುಕೊಂಡಿದ್ದರು.

ಮತಗಳ ಆಧಾರದಲ್ಲಿ ಮೊದಲು ನಮ್ರತಾ ಸೇಫ್ ಆದರು, ಬಳಿಕ ತುಕಾಲಿ ಸೇಫ್ ಆದರು. ಆ ಬಳಿಕ ಸ್ನೇಹಿತ್ ಸೇಫ್ ಅಂತಿಮವಾಗಿ ಸಿರಿ ಹಾಗೂ ನೀತು ಬಾಕಿ ಉಳಿದರು. ಕೊನೆಗೆ ಕಡಿಮೆ ಮತ ಗಳಿಸಿದ್ದ ನೀತು ಮನೆಯಿಂದ ಹೊರಗೆ ಹೋಗಲೇ ಬೇಕಾಯ್ತು. ನೀತು ಹೊರಗೆ ಹೋಗುವ ಸಮಯದಲ್ಲಿ ಡ್ರೋನ್ ಪ್ರತಾಪ್ ಬಹಳ ಅತ್ತರು. ಹೋಗಬೇಡಿ ಎಂದು ಗೋಗರೆದರು. ನೀತು ಸಹ ಬಹಳ ಭಾವುಕರಾದರು. ನೀತು ಈ ವಾರ ಕ್ಯಾಪ್ಟನ್ ಸಹ ಆಗಿದ್ದರಿಂದ, ತಮ್ಮ ಕ್ಯಾಪ್ಟೆನ್ಸಿಯನ್ನು ಮೈಖಲ್​ಗೆ ವರ್ಗಾವಣೆ ಮಾಡಿ ಮನೆಯಿಂದ ಹೊರಗೆ ನಡೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?