AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namratha Gowda: ‘ನಾನು ಹೇಟ್ ಮಾಡುವವರೇ ಜನರಿಗೆ ಇಷ್ಟವಾಗ್ತಿದ್ದಾರೆ’; ಕಣ್ಣೀರು ಹಾಕಿದ ನಮ್ರತಾ ಗೌಡ

ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಅವರು ಡ್ರೋನ್ ಪ್ರತಾಪ್, ತನಿಷಾ, ಸಂಗೀತಾ ಹಾಗೂ ವಿನಯ್ ಅವರನ್ನು ಸೇಫ್ ಮಾಡಿದರು. ನಮ್ರತಾ ಇನ್ನೂ ನಾಮಿನೇಷನ್ ಸಾಲಿನಲ್ಲೇ ಇದ್ದರು. ಇದು ಅವರ ಕೋಪಕ್ಕೆ ಕಾರಣ ಆಗಿದೆ.

Namratha Gowda: ‘ನಾನು ಹೇಟ್ ಮಾಡುವವರೇ ಜನರಿಗೆ ಇಷ್ಟವಾಗ್ತಿದ್ದಾರೆ’; ಕಣ್ಣೀರು ಹಾಕಿದ ನಮ್ರತಾ ಗೌಡ
ನಮ್ರತಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Nov 27, 2023 | 8:38 AM

Share

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ (Namratha Gowda) ಅವರು ಹಲವು ಬಾರಿ ಕಿಚ್ಚನಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿನಯ್, ಸ್ನೇಹಿತ್ ಜೊತೆ ಸೇರಿ ಅವರು ಗ್ರೂಪಿಸಂ ಮಾಡುತ್ತಿದ್ದಾರೆ ಎಂಬುದು ಎದ್ದು ಕಾಣುತ್ತಿದೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರು ಹೇಟ್ ಮಾಡುವ ಪ್ರತಾಪ್ ಅವರು ಹೆಚ್ಚು ವೋಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಇದು ನಮ್ರತಾ ಬೇಸರಕ್ಕೆ ಕಾರಣ ಆಗಿದೆ. ಈ ಕಾರಣಕ್ಕೆ ಅವರು ವೀಕೆಂಡ್​ನಲ್ಲಿ ಕಣ್ಣೀರು ಹಾಕಿದ್ದಾರೆ. ಮನೆಯಿಂದ ಹೊರಹೋಗಬೇಕು ಎಂದು ಅವರಿಗೆ ಬಹುವಾಗಿ ಕಾಡಿದೆ.

ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಅವರು ಡ್ರೋನ್ ಪ್ರತಾಪ್, ತನಿಷಾ, ಸಂಗೀತಾ ಹಾಗೂ ವಿನಯ್ ಅವರನ್ನು ಸೇಫ್ ಮಾಡಿದರು. ನಮ್ರತಾ ಇನ್ನೂ ನಾಮಿನೇಷನ್ ಸಾಲಿನಲ್ಲೇ ಇದ್ದರು. ಇದು ಅವರ ಕೋಪಕ್ಕೆ ಕಾರಣ ಆಗಿದೆ. ನಮ್ರತಾ ಹೇಟ್ ಮಾಡುವ, ಪ್ರತಿಸ್ಪರ್ಧಿಗಳೇ ಅಲ್ಲ ಎಂದುಕೊಂಡವರು ಮೊದಲು ಸೇಫ್​ ಆಗುತ್ತಿದ್ದಾರಲ್ಲ ಎನ್ನುವ ಚಿಂತೆ ಅವರನ್ನು ಕಾಡಿದೆ. ಜನರಿಗೆ ತಾವು ಯಾಕೆ ಇಷ್ಟ ಆಗುತ್ತಿಲ್ಲ ಎನ್ನುವ ಪ್ರಶ್ನೆ ಅವರಿಗೆ ಕಾಡಿದೆ. ಈ ವೇಳೆ ನಮ್ರತಾ ಕಣ್ಣೀರು ಹಾಕಿದ್ದಾರೆ.

‘ನಾನು ಪ್ರತೀ ವಾರ ವೀಕ್ ಆಗ್ತಾ ಇದೀನಿ. ನನಗೆ ಭಯ ಆಗ್ತಾ ಇದೆ. ಅವರು ತಪ್ಪು, ಇರಿಟೇಷನ್ ಎಂದುಕೊಂಡವರೇ ಜನರಿಗೆ ಇಷ್ಟ ಆಗ್ತಾ ಇದಾರೆ. ಜೋರು ಧ್ವನಿಯಲ್ಲಿ ಕೂಗಲು ಇಷ್ಟವಿಲ್ಲ. ನನಗೆ ಮನೆಗೆ ಹೋಗಬೇಕು. ನನಗೆ ಇಲ್ಲಿ ಇರಲು ಇಷ್ಟ ಇಲ್ಲ’ ಎಂದು ಕಣ್ಣೀರು ಹಾಕಿದ್ದಾರೆ ನಮ್ರತಾ. ಈ ವೇಳೆ ಅವರನ್ನು ಸಂಗೀತಾ ಹಾಗೂ ವಿನಯ್ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಆದಾಗ್ಯೂ ಅವರ ಕಣ್ಣೀರು ನಿಲ್ಲಲಿಲ್ಲ. ಪ್ರತಾಪ್​ ಅವರನ್ನು ನಮ್ರತಾ ಹೇಟ್ ಮಾಡುತ್ತಾರೆ. ಆದರೆ, ಅವರೇ ಮೊದಲು ಸೇಫ್ ಆಗಿದ್ದಾರೆ.

‘ನನಗೆ ಕೋಪ ಇದೆ. ನಾನು ತಪ್ಪ, ಅವರು ಸರಿನಾ? ಜನರು ಯಾವ ರೀತಿ ಜಡ್ಜ್ ಮಾಡ್ತಾ ಇದಾರೆ. ನಾನು ಕಳಪೆ ಅಲ್ಲ, ಉತ್ತಮ ಅಲ್ಲ, ಕ್ಯಾಪ್ಟನ್ ಅಲ್ಲ, ಕಿಚ್ಚನ ಚಪ್ಪಾಳೆ ಇಲ್ಲ. ನನಗೆ ನಟನೆ ಬರುತ್ತದೆ. ಹೊರಗೆ ಹೋಗಿ ಆ್ಯಕ್ಟಿಂಗ್ ಮಾಡ್ತೀನಿ. ನನಗೆ ಇಲ್ಲಿ ಪ್ರತಿ ವಾರ ಅವಮಾನ ಆಗುತ್ತಿದೆ’ ಎಂದು ಬೇಸರ ಹೊರಹಾಕಿದರು ನಮ್ರತಾ.

‘ಎಲಿಮಿನೇಟ್ ಆಗುತ್ತಿಲ್ಲವಲ್ಲ. ಅದಕ್ಕೆ ಖುಷಿ ಪಡು’ ಎಂದರು ಸಂಗೀತಾ. ‘ಎಲಿಮಿನೇಟ್ ಆಗಿಲ್ಲ. ಆದರೆ, ಅದರ ಸನಿಹದಲ್ಲಿದ್ದೇನೆ. ಒಂದೊಮ್ಮೆ ಎಲಿಮಿನೇಟ್ ಆದರೂ ನನಗೆ ಬೇಸರ ಆಗುವುದಿಲ್ಲ’ ಎಂದರು ನಮ್ರತಾ.

ನಮ್ರತಾ, ವಿನಯ್ ಹಾಗೂ ಸ್ನೇಹಿತ್ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಅವರು ಮಾಡುವ ಹೇಟ್ ಗೇಮ್​ ಒಂದು ವರ್ಗದ ಜನರಿಗೆ ಇಷ್ಟ ಆಗುತ್ತಿಲ್ಲ. ನಮ್ರತಾ ಬಿಗ್ ಬಾಸ್ ಮನೆಯಲ್ಲಿ ಆಟ ಆಡುತ್ತಿಲ್ಲ ಎನ್ನುವ ಆರೋಪವನ್ನು ಕೆಲವರು ಮಾಡಿದ್ದಾರೆ. ಈ ವಾರದಿಂದ ಅವರು ಆಟದ ವೈಖರಿ ಬದಲಿಸಿಕೊಳ್ಳಲೇ ಬೇಕಿದೆ. ಅವರು ವಿನಯ್, ಸ್ನೇಹಿತ್, ಸಂಗೀತಾ ಗ್ರೂಪ್​ನಿಂದ ಹೊರ ಬಂದು ಸ್ವಂತ ಐಡೆಂಟಿಟಿ ತೋರಿಸಬೇಕಿದೆ. ಇಲ್ಲವಾದರೆ ಸ್ಪರ್ಧೆಯಿಂದ ಅವರು ಹೊರಹೋಗಬೇಕಾಗುತ್ತದೆ.

ಇದನ್ನೂ ಓದಿ: ‘ನಾನು ಇಲ್ಲಿರೋಕೆ ಅರ್ಹನಲ್ಲ’; ಬಿಗ್ ಬಾಸ್ ಬಿಟ್ಟು ಹೋಗುವ ಆಲೋಚನೆ ಮಾಡಿದ ವಿನಯ್

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಇನ್ನು, 24 ಗಂಟೆ ಲೈವ್ ನೋಡೋ ಅವಕಾಶ ಜಿಯೋ ಸಿನಿಮಾದಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:31 am, Mon, 27 November 23

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?