‘ನಾನು ಇಲ್ಲಿರೋಕೆ ಅರ್ಹನಲ್ಲ’; ಬಿಗ್ ಬಾಸ್ ಬಿಟ್ಟು ಹೋಗುವ ಆಲೋಚನೆ ಮಾಡಿದ ವಿನಯ್
ವಿನಯ್, ನಮ್ರತಾ, ಸ್ನೇಹಿತ್ ಸದಾ ಒಟ್ಟಿಗೆ ಇರುತ್ತಾರೆ. ಅವರು ಸದಾ ಬೇರೆಯವರ ವಿಚಾರಗಳನ್ನೇ ಮಾತನಾಡುತ್ತಾ ಕಾಲ ಕಳೆಯುತ್ತಾರೆ. ಯಾರನ್ನು ಯಾವಾಗ ಬೀಳಿಸಬೇಕು ಎಂದು ಚರ್ಚೆ ಮಾಡುತ್ತಾ ಇರುತ್ತಾರೆ. ಇನ್ನು, ಕಳಪೆ, ಉತ್ತಮ ವಿಚಾರದಲ್ಲೂ ಅವರು ಮಾಡೋದು ಅದನ್ನೇ. ಮಾತನಾಡಿಕೊಂಡು ಕಳಪೆ ಹಾಗೂ ಉತ್ತಮ ನೀಡುತ್ತಾರೆ.
‘ಬಿಗ್ ಬಾಸ್’ (Bigg Boss Kannada) ಮನೆ ಹೊರಗಿನಿಂದ ನೋಡೋಕೆ ಒಂದು ರೀತಿ ಕಾಣುತ್ತದೆ. ಒಳಗೆ ಹೋದಮೇಲೆ ನಿಜವಾದ ಆಟ ಏನು ಎಂದು ಗೊತ್ತಾಗೋದು. ಸ್ಟ್ರಾಟಜಿ ಹಾಕಿಕೊಂಡು ಬಿಗ್ ಬಾಸ್ ಮನೆಗೆ ಕೆಲವರು ಹೋಗುತ್ತಾರೆ. ಆದರೆ ಅಲ್ಲಿಗೆ ಹೋದ ಬಳಿಕ ಈ ಲೆಕ್ಕಾಚಾರವೇ ಉಲ್ಟಾ ಆಗಿ ಬಿಡುತ್ತದೆ. ಅವರು ಅಂದುಕೊಳ್ಳುವುದು ಒಂದು, ಆ ಬಳಿಕ ಆಗೋದು ಇನ್ನೊಂದು. ವಿನಯ್ ಗೌಡ (Vinay Gowda) ಅವರಿಗೂ ಹಾಗೆಯೇ ಆಗಿದೆ. ಅವರು ಬಿಗ್ ಬಾಸ್ನ ಹೊರಗಿನಿಂದ ನೋಡಿದ್ದೇ ಒಂದು, ಒಳಗೆ ಆಗಿದ್ದೇ ಇನ್ನೊಂದು ಎಂದಾಗಿದೆ. ಇದನ್ನು ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ.
ವಿನಯ್, ನಮ್ರತಾ, ಸ್ನೇಹಿತ್ ಸದಾ ಒಟ್ಟಿಗೆ ಇರುತ್ತಾರೆ. ಅವರು ಸದಾ ಹುಳುಕು ವಿಚಾರಗಳನ್ನೇ ಮಾತನಾಡುತ್ತಾ ಕಾಲ ಕಳೆಯುತ್ತಾರೆ. ಯಾರನ್ನು ಯಾವಾಗ ಬೀಳಿಸಬೇಕು ಎಂದು ಚರ್ಚೆ ಮಾಡುತ್ತಾ ಇರುತ್ತಾರೆ. ಇನ್ನು, ಕಳಪೆ, ಉತ್ತಮ ವಿಚಾರದಲ್ಲೂ ಅವರು ಮಾಡೋದು ಅದನ್ನೇ. ಮಾತನಾಡಿಕೊಂಡು ಕಳಪೆ ಹಾಗೂ ಉತ್ತಮ ನೀಡುತ್ತಾರೆ. ಸ್ನೇಹಿತ್ ಗೌಡ ಈ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಇದನ್ನು ವೀಕ್ಷಕರು ನೋಡುತ್ತಿದ್ದಾರೆ. ಸುದೀಪ್ ಅವರು ವೀಕೆಂಡ್ನಲ್ಲಿ ಈ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
‘ನಿಮ್ಮ ಗ್ಯಾಂಗ್ ನೀಡುವ ಕಳಪೆ, ಉತ್ತಮ ವಿಚಾರದಲ್ಲಿ ಒಂದು ಪ್ಯಾಟರ್ನ್ ಕಾಣುತ್ತಿದೆ. ಯಾರ ವಿಷಯದಲ್ಲೂ ಇದು ಕಾಣುತ್ತಿಲ್ಲ. ಹೊರಗೆ ಇದು ಬೇರೆ ರೀತಿಯೇ ಕಾಣುತ್ತದೆ. ವರ್ತೂರು ಅವರಿಗೆ ಕಳಪೆ ಸಿಕ್ಕಿದೆ. ಅವರದ್ದು ವಿನ್ನಿಂಗ್ ಟೀಂ. ತಂಡದ ಗೆಲುವಿಗೆ ಅವರ ಕೊಡುಗೆ ತುಂಬಾನೇ ಇದೆ. ನಿಮ್ಮ ತಂಡ ಸೋತ ತಂಡ. ಆದಾಗ್ಯೂ ನಿಮ್ಮಲ್ಲಿ ಯಾರೂ ನಿಮಗೆ ಕಳಪೆ ಎಂದು ಅನಿಸಿಲ್ಲವೇ’ ಎನ್ನುವ ಪ್ರಶ್ನೆಯನ್ನು ಸುದೀಪ್ ಅವರು ವಿನಯ್, ಸ್ನೇಹಿತ್ ಹಾಗೂ ನಮ್ರತಾಗೆ ಕೇಳಿದರು. ಈ ಪ್ರಶ್ನೆಗೆ ಎಲ್ಲರೂ ತಮ್ಮದೇ ಆದ ಸಬೂಬು ನೀಡಲು ಹೋದರು.
ಇದನ್ನೂ ಓದಿ: ಎಲಿಮಿನೇಷನ್ನಿಂದ ಬಚಾವ್ ಆಗಿ 8ನೇ ವಾರಕ್ಕೆ ಎಂಟ್ರಿ ಪಡೆದ ತನಿಷಾ ಕುಪ್ಪಂಡ
‘ವಿನಯ್ ತಂಡದಲ್ಲಿ ಒಗ್ಗಟ್ಟಿದೆ. ಆದರೆ ಯಾರೂ ಆಡೋಕೆ ಪ್ರಯತ್ನಿಸಲ್ಲ. ಕಾರ್ತಿಕ್ ತಂಡದಲ್ಲಿ ಎಲ್ಲರೂ ಆಡುತ್ತಾರೆ ಒಗ್ಗಟ್ಟಿಲ್ಲ’ ಎಂದರು ಪ್ರತಾಪ್. ಸುದೀಪ್ ಜೊತೆಗಿನ ಚರ್ಚೆ ಮುಗಿದ ಬಳಿಕ ವಿನಯ್ ಅವರು ಪ್ರತಾಪ್ ಬಳಿ ಈ ಮಾತಿಗೆ ಸ್ಪಷ್ಟನೆ ಕೇಳಿದರು. ‘ನನಗೆ ಅನಿಸಿದ್ದನ್ನು ನಾನು ಹೇಳಿದ್ದೀನಿ’ ಎಂದು ಪ್ರತಾಪ್ ಹೇಳಿದರು. ವಿನಯ್ ಅವರಿಗೆ ಕಿಚ್ಚನ ಕ್ಲಾಸ್ ತುಂಬಾನೇ ಕಾಡಿದೆ. ಅವರು ತಮಗೆ ತಾವು ಕೆಲ ಮಾತನ್ನು ಹೇಳಿಕೊಂಡಿದ್ದಾರೆ. ‘ಜನರು ನಮ್ಮನ್ನು ಇಷ್ಟಪಡ್ತಿಲ್ಲ ಎಂದರೆ ನಾನು ಇಲ್ಲಿಗೆ ಸೇರಿದವನಲ್ಲ. ಪ್ರತಾಪ್, ವರ್ತೂರು ತನಿಷಾ ಈ ವಾರ ಆಟ ಆಡಿಲ್ಲ. ನಾನು ಆಡಿನೂ ಅವಮಾನ ಎದುರಿಸಬೇಕು. ನಾನು ಇಲ್ಲಿಗೆ ಸೇರಿದವನಲ್ಲ. ಗೇಮ್ನ ತಪ್ಪಾಗಿ ಅರ್ಥೈಸಿಕೊಂಡಿದ್ದೆ. ಅಭಿಮಾನಿಗಳನ್ನು ಕೆಳಕ್ಕೆ ಹಾಕಿದ ಭಾವನೆ ಕಾಡುತ್ತಿದೆ. ನಾನು ನಿರಾಸೆಗೊಂಡಿದ್ದೇನೆ’ ಎಂದರು ವಿನಯ್.
ಇದನ್ನೂ ಓದಿ: Bigg Boss Kannada: ಕನ್ನಡದ ಮೇಲೆ ಮೈಕೆಲ್ ಹೊಂದಿರುವ ಪ್ರೀತಿಗೆ ಈ ಘಟನೆ ಸಾಕ್ಷಿ; ಸುದೀಪ್ ಕೂಡ ಫಿದಾ
‘ವಾರ ವಾರ ಸ್ಥಾನಗಳು, ಸಂಖ್ಯೆ, ಪರಿಸ್ಥಿತಿ ಬದಲಾಗುತ್ತದೆ. ಯಾವುದೇ ವಿಚಾರಕ್ಕೂ ಬೇಸರ ಮಾಡಿಕೊಳ್ಳಬೇಡಿ. ಈ ಬಗ್ಗೆ ಬೇಸರ ಮಾಡಿಕೊಳ್ಳುವ ಬದಲು, ಚಾಲೆಂಜ್ ಆಗಿ ತೆಗೆದುಕೊಳ್ಳಿ’ ಎಂದು ವಿನಯ್ಗೆ ಸುದೀಪ್ ಕಿವಿಮಾತು ಹೇಳಿದರು. ‘ನೀವು ನಿಮ್ಮ ಗತ್ತನ್ನು ಬಿಟ್ಟುಕೊಡಬೇಡಿ’ ಎಂದು ಕೂಡ ಸುದೀಪ್ ಸಲಹೆ ನೀಡಿದರು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ 24 ಗಂಟೆ ಲೈವ್ ವೀಕ್ಷಿಸುವ ಮೂಲಕ ಮನೆಯಲ್ಲಿ ಏನಾಗುತ್ತಿದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.