ಬಿಗ್ ಬಾಸ್​ಗೆ ಕಾಲಿಟ್ಟ ಒರಿ; ಸುಮ್ಮನೆ ಸುತ್ತಾಡುವ ಈ ವ್ಯಕ್ತಿಗಿದ್ದಾರೆ ಐದು ಮ್ಯಾನೇಜರ್

‘ಪಾರ್ಟಿ ಅಟೆಂಡ್ ಮಾಡಿದರೆ ನಿಮಗೆ ಹಣ ಸಿಗುತ್ತದೆಯೇ’ ಎಂದು ಕೇಳಿದ್ದಾರೆ ಸಲ್ಲು. ಇದಕ್ಕೆ ಒರಿ ಕೊಟ್ಟ ಉತ್ತರ ಕೇಳಿ ಸಲ್ಮಾನ್ ಖಾನ್ ಶಾಕ್ ಆಗಿದ್ದಾರೆ.

ಬಿಗ್ ಬಾಸ್​ಗೆ ಕಾಲಿಟ್ಟ ಒರಿ; ಸುಮ್ಮನೆ ಸುತ್ತಾಡುವ ಈ ವ್ಯಕ್ತಿಗಿದ್ದಾರೆ ಐದು ಮ್ಯಾನೇಜರ್
ಒರಿ-ಸಲ್ಮಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 25, 2023 | 10:40 AM

ಬಿಗ್ ಬಾಸ್​ನ ಎಲ್ಲಾ ಸೆಲೆಬ್ರಿಟಿಗಳ ಜೊತೆ ಪೋಸ್ ಕೊಡೋದು ಒರ್ಹನ್ ಅವತ್ರಮಣಿ (Orhan Awatramani) ಅಲಿಯಾಸ್ ಒರಿಯ ಕೆಲಸ. ಅವರು ಚಿತ್ರರಂಗ ಹಿನ್ನೆಲೆ ಹೊಂದಿರುವ ವ್ಯಕ್ತಿ ಅಲ್ಲ. ಆದಾಗ್ಯೂ ಅವರು ಎಲ್ಲಾ ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳುತ್ತಾರೆ. ಅವರು ಯಾರು, ಏನು ಕೆಲಸ ಮಾಡುತ್ತಾರೆ ಎಂಬ ಅನೇಕ ಪ್ರಶ್ನೆಗಳಿವೆ. ಹೀಗಿರುವಾಗಲೇ ಅವರು ‘ಹಿಂದಿ ಬಿಗ್ ಬಾಸ್ ಸೀಸನ್ 17’ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ವೇದಿಕೆ ಮೇಲೆ ಸಲ್ಮಾನ್ ಖಾನ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಒರಿಯನ್ನು ಸ್ವಾಗತಿಸಿದ್ದಾರೆ. ‘ಮಿಸ್ಟೀರಿಯಸ್ ವ್ಯಕ್ತಿ, ಸೆಲೆಬ್ರಿಟಿಗಳ ಆಪ್ತ’ ಎಂದು ಒರಿಯನ್ನು ಕರೆದಿದ್ದಾರೆ. ‘ಒರಿ ಏನು ಕೆಲಸ ಮಾಡುತ್ತಾರೆ’ ಎಂದು ಸಲ್ಮಾನ್ ಖಾನ್ ಕೇಳಿದ್ದಾರೆ. ‘ನಾನು ಎಲ್ಲರಂತೆ ಸೂರ್ಯ ಉದಯಿಸುವಾಗ ಏಳುತ್ತೇನೆ. ಚಂದ್ರ ಹುಟ್ಟುವಾಗ ಮಲಗುತ್ತೇನೆ’ ಎಂದಿದ್ದಾರೆ. ‘ಪಾರ್ಟಿ ಅಟೆಂಡ್ ಮಾಡಿದರೆ ನಿಮಗೆ ಹಣ ಸಿಗುತ್ತದೆಯೇ’ ಎಂದು ಕೇಳಿದ್ದಾರೆ ಸಲ್ಲು. ಇದಕ್ಕೆ ಒರಿ ಕೊಟ್ಟ ಉತ್ತರ ಕೇಳಿ ಸಲ್ಮಾನ್ ಖಾನ್ ಶಾಕ್ ಆಗಿದ್ದಾರೆ.

‘ಎಲ್ಲಾ ಸೆಲೆಬ್ರಿಟಿಗಳು ನನ್ನ ಮ್ಯಾನೆಜರ್​ಗೆ ಕರೆ ಮಾಡಿ ಪಾರ್ಟಿಗೆ ಬರುವಂತೆ ಕೇಳುತ್ತಾರೆ’ ಎಂದಿದ್ದಾರೆ ಒರಿ. ‘ನಿಮಗೂ ಮ್ಯಾನೇಜರ್ ಇದ್ದಾರಾ’ ಎಂಬರ್ಥದಲ್ಲಿ ಸಲ್ಲು ಪ್ರಶ್ನೆ ಮಾಡಿದರು. ಇದಕ್ಕೆ ಒರಿ ಉತ್ತರಿಸಿದ್ದಾರೆ. ಅವರ ಬಳಿ ಒಂದಲ್ಲ, ಎರಡಲ್ಲ ಐದು ಮ್ಯಾನೇಜರ್ ಇದ್ದಾರಂತೆ! ಈ ಮಾತನ್ನು ಕೇಳಿ ಸಲ್ಲು ಶಾಕ್ ಆಗಿದ್ದಾರೆ. ‘ಸಲ್ಮಾನ್ ನೀನು ಜೀವನದಲ್ಲಿ ಏನಾದರೂ ಮಾಡಬೇಕು’ ಎಂದು ಸಲ್ಲು ಸಣ್ಣದಾಗಿ ಹೇಳಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಸನ್ನಿ ಡಿಯೋಲ್?

ಬಾಲಿವುಡ್ ಪಾರ್ಟಿಗಳಲ್ಲಿ ಒರಿ ಕಾಣಿಸುತ್ತಾರೆ. ಜಾನ್ವಿ ಕಪೂರ್, ಖುಷಿ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಸಾರಾ ತೆಂಡೂಲ್ಕರ್, ನಿಸಾ ದೇವಗನ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್ ಸೇರಿ ಎಲ್ಲರ ಜೊತೆ ಒರಿ ಕಾಣಿಸಿಕೊಂಡಿದ್ದಾರೆ. ಅವರ ಐಡೆಂಟಿಟಿ ಬಗ್ಗೆ ಯಾರಿಗೂ ಗೊತ್ತಿಲ್ಲ. ಬಿಗ್ ಬಾಸ್​ನಲ್ಲಿ ಹೆಚ್ಚಿನ ವಿಚಾರ ರಿವೀಲ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:44 am, Sat, 25 November 23

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ