Salman Khan: ಸಲ್ಮಾನ್ ಖಾನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಸನ್ನಿ ಡಿಯೋಲ್?

ಸನ್ನಿ ಡಿಯೋಲ್ ಅವರು ಈ ವರ್ಷ ‘ಗದರ್ 2’ ಚಿತ್ರದ ಮೂಲಕ ಗೆದ್ದು ಬೀಗಿದ್ದಾರೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅವರು ಸಲ್ಮಾನ್​ ಖಾನ್​ಗೆ ವಿಶ್ ಮಾಡಿದ್ದಾರೆ.

Salman Khan: ಸಲ್ಮಾನ್ ಖಾನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಸನ್ನಿ ಡಿಯೋಲ್?
ಸನ್ನಿ ಡಿಯೋಲ್
Follow us
ರಾಜೇಶ್ ದುಗ್ಗುಮನೆ
|

Updated on: Nov 21, 2023 | 2:32 PM

ಬಾಲಿವುಡ್​ನಲ್ಲಿ ಹಲವು ಚಿತ್ರಗಳು ಸೂಪರ್ ಹಿಟ್ ಆಗುತ್ತಿವೆ. ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿವೆ. ಈಗ ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ (Tiger 3 Movie) ಯಶಸ್ಸು ಕಂಡಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಗಳಿಕೆ ಮಾಡುವ ಸನಿಹದಲ್ಲಿದೆ. ಈಗ ಯಶಸ್ಸನ್ನು ತಂಡ ಎಂಜಾಯ್ ಮಾಡುತ್ತಿದೆ. ಸಲ್ಮಾನ್ ಖಾನ್ ಅವರು ‘ಟೈಗರ್ 4’ ಮಾಡಲು ಉತ್ಸುಕರಾಗಿದ್ದಾರೆ. ಈಗ ಸಲ್ಮಾನ್ ಖಾನ್​ಗೆ ಸನ್ನಿ ಡಿಯೋಲ್ ಅವರು ಶುಭಾಶಯ ತಿಳಿಸಿದ್ದಾರೆ.

ಸನ್ನಿ ಡಿಯೋಲ್ ಅವರು ಈ ವರ್ಷ ‘ಗದರ್ 2’ ಚಿತ್ರದ ಮೂಲಕ ಗೆದ್ದು ಬೀಗಿದ್ದಾರೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅವರು ಸಲ್ಮಾನ್​ ಖಾನ್​ಗೆ ವಿಶ್ ಮಾಡಿದ್ದಾರೆ. ಸಲ್ಮಾನ್ ಖಾನ್ ಜೊತೆ ಇರುವ ಫೋಟೋ ಪೋಸ್ಟ್ ಮಾಡಿರುವ ಅವರು ‘ಜೀತ್​ ಗಯೇ (ನೀವು ಗೆದ್ದಿರಿ)’ ಎಂದು ಸನ್ನಿ ಡಿಯೋಲ್ ಪೋಸ್ಟ್ ಮಾಡಿದ್ದಾರೆ.

ಸನ್ನಿ ಡಿಯೋಲ್, ಸಲ್ಮಾನ್ ಖಾನ್, ಕರೀಷ್ಮಾ ಕಪೂರ್ ಅವರು ‘ಜೀತ್’ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ರಾಜ್ ಕನ್ವರ್ ನಿರ್ದೇಶನ ಮಾಡಿದ್ದರು. ಈಗ ಕ್ಯಾಪ್ಶನ್​ನಲ್ಲಿ ‘ಜೀತ್’ ಶಬ್ದ ಬಳಕೆ ಮಾಡಿರುವುದರಿಂದ ಅನೇಕರು ‘ಜೀತ್ 2’ ಸಿನಿಮಾ ಬರಬಹುದು ಎಂದು ಊಹಿಸಿದ್ದಾರೆ. ‘ಜೀತ್ ಸಿನಿಮಾಗೆ ಸೀಕ್ವೆಲ್ ಬರುತ್ತಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಜೀತ್ 2 ಲೋಡಿಂಗ್’ ಎಂದು ಬರೆದಿದ್ದಾರೆ.

View this post on Instagram

A post shared by Sunny Deol (@iamsunnydeol)

ಇದನ್ನೂ ಓದಿ: ವಿಶ್ವಕಪ್​ನಿಂದ ‘ಟೈಗರ್ 3’ ಕಲೆಕ್ಷನ್​ಗೆ ಹೊಡೆತ ಬಿತ್ತೆ? ಸಲ್ಮಾನ್ ಹೇಳಿದ್ದು ಹೀಗೆ

‘ಟೈಗರ್ 3’ ಸಿನಿಮಾ ಭಾರತದಲ್ಲಿ 236 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಲ್ಮಾನ್ ಖಾನ್ ಅವರು ಇನ್ನೂ ಹೆಚ್ಚಿನ ನಿರೀಕ್ಷೆ ಮಾಡಿದ್ದರು. ಆದರೆ, ಅಂದುಕೊಂಡಂತೆ ಆಗಲೇ ಇಲ್ಲ. ಸಲ್ಮಾನ್ ಖಾನ್ ಅವರಿಗೆ ಇರೋ ಖ್ಯಾತಿಗೆ ‘ಟೈಗರ್ 3’ ಸಿನಿಮಾ ಕನಿಷ್ಠ 300ರಿಂದ 400 ಕೋಟಿ ರೂಪಾಯಿ ಗಳಿಕೆ ಮಾಡಬೇಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ