ಎಮ್ಮಿ 2023: ಪ್ರಶಸ್ತಿ ಗೆದ್ದವರ ಪೂರ್ಣ ಪಟ್ಟಿ ಇಲ್ಲಿದೆ

Emmy Award 2023: ಈ ಬಾರಿ ಮೂವರು ಭಾರತೀಯರು ಪ್ರಮುಖ ವಿಭಾಗಗಳಲ್ಲಿ ಎಮ್ಮಿ ಸ್ಪರ್ಧೆಗೆ ನಾಮಿನೇಷನ್ ಗಳಿಸಿದ್ದರು. ಇಬ್ಬರು ಭಾರತೀಯರು ಎಮ್ಮಿ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ. ಎಮ್ಮಿ ಪ್ರಶಸ್ತಿ ಪಡೆದವರ ಪೂರ್ಣ ಪಟ್ಟಿ ಇಲ್ಲಿದೆ.

ಎಮ್ಮಿ 2023: ಪ್ರಶಸ್ತಿ ಗೆದ್ದವರ ಪೂರ್ಣ ಪಟ್ಟಿ ಇಲ್ಲಿದೆ
Follow us
ಮಂಜುನಾಥ ಸಿ.
|

Updated on: Nov 21, 2023 | 3:47 PM

ಸಿನಿಮಾಗಳಿಗೆ ಆಸ್ಕರ್ (Oscar) ಇರುವಂತೆ, ಕಿರುತೆರೆಯ ಅತ್ಯುತ್ತಮ ಸರಣಿ, ಡಾಕ್ಯುಮೆಂಟರಿ, ನಟನಟಿಯರ ಪ್ರತಿಭೆ ಗುರುತಿಸಲು ಇರುವುದು ಎಮ್ಮಿ ಪ್ರಶಸ್ತಿ. ಈ ವರ್ಷದ ಎಮ್ಮಿ ಪ್ರಶಸ್ತಿ ಪ್ರಧಾನ ಸಮಾರಂಭ ನ್ಯೂಯಾರ್ಕ್​ನಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಬೆಳಿಗ್ಗೆ ನಡೆದಿದೆ. ಈ ಬಾರಿ ಮೂವರು ಭಾರತೀಯರು ಪ್ರಮುಖ ವಿಭಾಗಗಳಲ್ಲಿ ಸ್ಪರ್ಧೆಗೆ ನಾಮಿನೇಷನ್ ಗಳಿಸಿದ್ದರು. ಇಬ್ಬರು ಭಾರತೀಯರು ಎಮ್ಮಿ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ. ಕಮಿಡಿಯನ್ ವೀರ್​ ದಾಸ್​ಗೆ ವಿಶಿಷ್ಟ ಕಾಮಿಡಿ ವಿಭಾಗದಲ್ಲಿ ಇನ್ನೊಂದು ಶೋ ಜೊತೆಗೆ ಪ್ರಶಸ್ತಿ ನೀಡಲಾಗಿದೆ. ಜೊತೆಗೆ ಏಕ್ತಾ ಕಪೂರ್​ಗೆ ಅವರು ಕಿರುತೆರೆಗೆ ನೀಡಿರುವ ವಿಶೇಷ ಕಾಣ್ಕೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಇವರಿಬ್ಬರ ಹೊರತಾಗಿ ಯಾವ ಶೋಗಳಿಗೆ, ಯಾವ ಯಾವ ನಟರಿಗೆ ಪ್ರಶಸ್ತಿ ಬಂತು ಇಲ್ಲಿದೆ ಪಟ್ಟಿ.

ಅತ್ಯುತ್ತಮ ನಟ: ಮಾರ್ಟಿನ್ ಫ್ರೀಮನ್ (ದಿ ರೆಸ್ಪಾಂಡರ್)

ಅತ್ಯುತ್ತಮ ನಟಿ: ಕಾರ್ಲಾ ಸೌಜ್ (ಡೈವ್)

ಅತ್ಯುತ್ತಮ ಕಾಮಿಡಿ: ವೀರ್ ದಾಸ್ ಮತ್ತು ಡೆರ್ರಿ ಗರ್ಲ್ಸ್​ ಸೀಸನ್ 3

ಅತ್ಯುತ್ತಮ ಮಿನಿ ಸೀರೀಸ್: ಡೈವ್ (ಲಾ ಕೈಡಾ)

ಅತ್ಯುತ್ತಮ ಕಿರು ಸರಣಿ: ಎ ವೆರ್ರಿ ಆರ್ಡಿನರಿ ವರ್ಲ್ಡ್​

ಮಕ್ಕಳಿಗಾಗಿ ಜ್ಞಾನಪೂರ್ಣ ಮನೊರಂಜನಾ ಚಿತ್ರ: ಬಿಲ್ಟ್ ಟು ಸರ್ವೈವ್

ಅತ್ಯುತ್ತಮ ಡಾಕ್ಯುಮೆಂಟರಿ: ಮಾರಿಯೋಪೋಲ್

ಅತ್ಯುತ್ತಮ ಕ್ರೀಡಾ ಡಾಕ್ಯುಮೆಂಟರಿ: ಹಾರ್ಲಿ ಮತ್ತು ಕಾಟ್ಯಾ

ಅತ್ಯುತ್ತಮ ಅನಿಮೇಷನ್: ದಿ ಸ್ಮೆಡ್ಸ್ ಆಂಡ್ ದಿ ಸ್ಮೂಸ್

ಅತ್ಯುತ್ತಮ ಟೆಲಿನೋವೆಲ್: ಯಾರ್ಗಿ

ಅತ್ಯುತ್ತಮ ಡ್ರಾಮಾ ಸೀರೀಸ್: ದಿ ಎಂಪ್ರೆಸ್

ಅತ್ಯುತ್ತಮ ಲೈವ್ ಆಕ್ಷನ್: ಹಾರ್ಟ್ ಬ್ರೇಕ್ ಹೈ

ನಾನ್ ಸ್ಕ್ರಿಪ್ಟೆಡ್ ಎಂಟರ್ಟೈನ್​ಮೆಂಟ್: ಎ ಪೊಂಟೆ; ದಿ ಬ್ರಿಡ್ಜ್ ಬ್ರೆಸಿಲ್

ಆರ್ಟ್ಸ್​ ಪ್ರೋಗ್ರಾಮಿಂಗ್: ಬಫ್ಫಿ-ಸ್ಯಾಂಟಿ-ಮ್ಯಾರಿ: ಕ್ಯಾರಿ ಇಟ್ ಆನ್

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ