ಈ ಆಸ್ಕರ್ ವಿಜೇತ ಹಾಲಿವುಡ್ ನಟಿ, ಪ್ರಿಯಾಂಕಾ ಚೋಪ್ರಾರ ಅಭಿಮಾನಿಯಂತೆ
Priyanka Chopra: ಆಸ್ಕರ್ ವಿಜೇತ ಹಾಲಿವುಡ್ ನಟಿಗೆ ಪ್ರಿಯಾಂಕಾ ಚೋಪ್ರಾ ಎಂದರೆ ಬಹಳ ಪ್ರೀತಿ. ಪ್ರತಿದಿನ ಪ್ರಿಯಾಂಕಾ ಚೋಪ್ರಾ ಕುರಿತ ಮಾಹಿತಿಯನ್ನು ಗೂಗಲ್ನಲ್ಲಿ ಹುಡುಕುತ್ತಿದ್ದರಂತೆ ಈ ನಟಿ.
ಸಿನಿಮಾ ನಟ-ನಟಿಯರು ಸಹ ಮತ್ತೊಮ್ಮ ನಟ-ನಟಿಯರಿಗೆ ಅಭಿಮಾನಿಗಳಾಗಿರುತ್ತಾರೆ. ಸಾಮಾನ್ಯವಾಗಿ ತಮಗಿಂತಲೂ ಹಿರಿಯ ನಟ ಅಥವಾ ನಟಿಯರನ್ನು ಅಭಿಮಾನಿಸುತ್ತಾರೆ ಸೆಲೆಬ್ರಿಟಿಗಳು. ಆದರೆ ಕೆಲವರು ಬಿಂಕ ಬಿಟ್ಟು ಪ್ರತಿಭಾವಂತ ಸಹ ನಟ-ನಟಿಯರ ಬಗ್ಗೆಯೂ ಅಭಿಮಾನ ಇಟ್ಟುಕೊಳ್ಳುತ್ತಾರೆ ಮತ್ತು ವ್ಯಕ್ತಪಡಿಸುತ್ತಾರೆ. ತಮ್ಮ ಅದ್ಭುತ ನಟನೆಯಿಂದ ದಶಕದ ಹಿಂದೆಯೇ ಆಸ್ಕರ್ ಗೆದ್ದಿರುವ ಹಾಲಿವುಡ್ನ ಬೇಡಿಕೆಯ ನಟಿಯೊಬ್ಬರು, ತಾವು ಪ್ರಿಯಾಂಕಾ ಚೋಪ್ರಾರ (Priyanka Chopra) ಅಭಿಮಾನಿ ಎಂದಿದ್ದಾರೆ. ಪ್ರತಿದಿನ ತಾವು ಪ್ರಿಯಾಂಕಾ ಚೋಪ್ರಾ ಕುರಿತ ಮಾಹಿತಿಯನ್ನು ಗೂಗಲ್ನಲ್ಲಿ ಹುಡುಕಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಅತ್ಯುತ್ತಮ ನಟಿಯಾಗಿರುವ ಜೊತೆಗೆ ಒಳ್ಳೆಯ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿರುವ ಹಾಲಿವುಡ್ ನಟಿ ಅನ್ನಾ ಹಾಥಾವೇ, ತಾವು ಪ್ರಿಯಾಂಕಾ ಚೋಪ್ರಾರ ಅಂದದ ಅಭಿಮಾನಿ ಎಂದು ಈ ಹಿಂದೆಯೇ ಹೇಳಿಕೊಂಡಿದ್ದರು. ಸಿನಿಮಾ ಒಂದರ ಪ್ರಚಾರದ ಸಮಯದಲ್ಲಿ ಈ ಬಗ್ಗೆ ಮಾತನಾಡಿದ್ದ ಅನ್ನಾ ಹಾಥಾವೇ, ನಾನು ಪ್ರಿಯಾಂಕಾ ಚೋಪ್ರಾರ ತ್ವಚೆ ನೋಡಿ ದಂಗಾಗಿದ್ದೆ, ಅದ್ಭುತವಾದ ತ್ವಚೆ, ಅದ್ಭುತವಾದ ಸೌಂದರ್ಯ ಅವರದ್ದು. ಪ್ರಿಯಾಂಕಾ ಹೇಗೆ ತಮ್ಮ ತ್ವಚೆಯ ರಕ್ಷಣೆ ಮಾಡಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಪ್ರತಿದಿನ ನಾನು ಇಂಟರ್ನೆಟ್ನಲ್ಲಿ ಮಾಹಿತಿ ಹುಡುಕುತ್ತಿದ್ದೆ ಎಂದು ಅನ್ನಾ ಹೇಳಿಕೊಂಡಿದ್ದರು.
ಇದನ್ನೂ ಓದಿ:ತಂಗಿ ಮದುವೆಗೆ ದೂರದಿಂದಲೇ ವಿಶ್ ಮಾಡಿ ಸುಮ್ಮನಾದ ಪ್ರಿಯಾಂಕಾ ಚೋಪ್ರಾ
ಅನ್ನಾ ಹಾಥಾವೇ ಹಾಗೂ ಪ್ರಿಯಾಂಕಾ ಚೋಪ್ರಾ ಇಬ್ಬರು ಒಂದು ಅಂತರಾಷ್ಟ್ರೀಯ ಪ್ರತಿಷ್ಠಿತ ಬ್ರ್ಯಾಂಡ್ನ ರಾಯಭಾರಿಯಾಗಿದ್ದಾರೆ. ಈ ಇಬ್ಬರೂ ಸಹ ಇತ್ತೀಚೆಗೆ ಪ್ಯಾರೀಸ್ನಲ್ಲಿ ಇದೇ ಬ್ರ್ಯಾಂಡ್ನ ಪ್ರಚಾರ ಕಾರ್ಯಕ್ರಮದಲ್ಲಿ ಪರಸ್ಪರ ಭೇಟಿಯಾಗಿದ್ದರು. ಇಬ್ಬರೂ ಸಾಕಷ್ಟು ಸಮಯ ಒಟ್ಟಿಗೆ ಕಾಲ ಕಳೆದಿದ್ದರು. ಒಟ್ಟಿಗೆ ಸಂದರ್ಶನಗಳಲ್ಲಿ ಸಹ ಪಾಲ್ಗೊಂಡಿದ್ದರಲ್ಲದೆ, ಪರಸ್ಪರರ ಬಗ್ಗೆ ಮೆಚ್ಚುಗೆ ಹಾಗೂ ಗೌರವದ ಮಾತುಗಳನ್ನಾಡಿದರು. ಇಬ್ಬರೂ ಸಹ ಒಟ್ಟಿಗೆ ಸಿನಿಮಾಗಳಲ್ಲಿ ಕೆಲಸ ಮಾಡುವ ಇಂಗಿತವನ್ನು ಸಹ ವ್ಯಕ್ತಪಡಿಸಿದರು.
ತಮಿಳು ಸಿನಿಮಾ ಮೂಲಕ ನಟನೆ ಆರಂಭಿಸಿದ ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ತಾರೆಯಾಗಿದ್ದಾರೆ. 2017 ರಲ್ಲಿ ‘ಬೇವಾಚ್’ ಸಿನಿಮಾ ಮೂಲಕ ಹಾಲಿವುಡ್ ಸಿನಿಮಾ ಜರ್ನಿ ಆರಂಭಿಸಿದ ಪ್ರಿಯಾಂಕಾ ಚೋಪ್ರಾ ಹಿಂತಿರುಗಿ ನೋಡಿದ್ದಿಲ್ಲ. ಒಂದರ ಹಿಂದೊಂದು ದೊಡ್ಡ ಪ್ರೊಡಕ್ಷನ್ ಹೌಸ್ನ ಸಿನಿಮಾಗಳನ್ನು ಬಾಚಿಕೊಳ್ಳುತ್ತಲೇ ಸಾಗುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ. ವಿಶ್ವಪ್ರಸಿದ್ಧ ‘ಮೇಟ್ರಿಕ್ಸ್’ ಸಿನಿಮಾ ಸರಣಿಯಲ್ಲಿ ನಟಿಸಿದ್ದ ಪ್ರಿಯಾಂಕಾ ಚೋಪ್ರಾ, ಇದೀಗ ‘ಹೆಡ್ಸ್ ಆಫ್ ಸ್ಟೇಟ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಸಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ