ಭಾರತ ವಿಶ್ವಕಪ್ ಸೋತಿದ್ದು ಈ 12 ಜನರಿಗೆ ಇನ್ನೂ ಗೊತ್ತಿಲ್ಲ; ತಿಳಿಯೋದು ಯಾವಾಗ?
‘ಐಸಿಸಿ ವಿಶ್ವಕಪ್ 2023’ ಪಂದ್ಯದಲ್ಲಿ ಭಾರತ ಫೈನಲ್ಗೆ ಹೋಗಿತ್ತು ಎಂಬುದಾಗಲಿ, ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದೆ ಎಂಬುದಾಗಲಿ ಇವರಿಗೆ ತಿಳಿದೇ ಇಲ್ಲ. ಆ ವಿಷಯ ತಿಳಿದರೆ ಖಂಡಿತವಾಗಿಯೂ ಅವರಿಗೆಲ್ಲ ಸಖತ್ ಬೇಸರ ಆಗಲಿದೆ. ಸೂಕ್ತ ಸಮಯ ಬಂದಾಗ ಅವರ ಎದುರು ಸೋಲಿನ ವಿಷಯ ಬಹಿರಂಗ ಆಗಲಿದೆ.
ಈ ಬಾರಿ ಭಾರತ ಖಂಡಿತವಾಗಿಯೂ ವಿಶ್ವಕಪ್ (ICC World Cup) ಗೆಲ್ಲಲ್ಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ಆಸೆ ಈಡೇರಲೇ ಇಲ್ಲ. ಫೈನಲ್ ತನಕ ಸೋಲಿಲ್ಲದ ಸರದಾರರಂತೆ ಮುನ್ನುಗ್ಗಿದ್ದ ಟೀಮ್ ಇಂಡಿಯಾ ಆಟಗಾರರು ಫೈನಲ್ನಲ್ಲಿ ಮುಗ್ಗರಿಸಿದರು. ಇಡೀ ದೇಶಕ್ಕೆ ಇದರಿಂದ ಆಘಾತ ಆಯಿತು. ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (Ind vs Aus) ಪಂದ್ಯವನ್ನು ನೋಡುತ್ತಿದ್ದ ಕೋಟ್ಯಂತರ ಹೃದಯಗಳಿಗೆ ಘಾಸಿ ಆಯಿತು. ಸೋಲಿನ ನೋವಿನಲ್ಲಿ ಕಣ್ಣೀರು ಹಾಕಿದವರಿಗೆ ಲೆಕ್ಕವೇ ಇಲ್ಲ. ಇಷ್ಟೆಲ್ಲ ಆಗಿದ್ದರೂ ಕೂಡ ಕೆಲವರಿಗೆ ಭಾರತ ವಿಶ್ವಕಪ್ ಸೋತಿದೆ ಎಂಬುದು ಇನ್ನೂ ಗೊತ್ತಿಲ್ಲ! ಯಾರು ಅದು? ‘ಬಿಗ್ ಬಾಸ್’ (Bigg Boss Kannada) ಸ್ಪರ್ಧಿಗಳು!
ಬಿಗ್ ಬಾಸ್ ಮನೆಗೆ ಕಾಲಿಡುವವರು ಹೊರ ಜಗತ್ತಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಳ್ಳಬೇಕು. ಮೊಬೈಲ್, ಸೋಶಿಯಲ್ ಮೀಡಿಯಾ ಬಳಸುವಂತಿಲ್ಲ. ಹೊರಗೆ ಏನು ನಡೆಯುತ್ತಿದೆ ಎಂಬುದರ ಅರಿವೇ ಇಲ್ಲದೇ ಆಟ ಆಡಬೇಕು. ಈ ಸಂದರ್ಭದಲ್ಲಿ ನಡೆಯುವ ಪ್ರಮುಖ ಘಟನೆಗಳು ಅವರ ಗಮನಕ್ಕೆ ಬರುವುದಿಲ್ಲ. ಈಗ ಭಾರತ ತಂಡ ವಿಶ್ವಕಪ್ ಫೈನಲ್ಗೆ ಹೋಗಿತ್ತು ಎಂಬುದಾಗಲಿ, ಫೈನಲ್ನಲ್ಲಿ ಸೋತಿದೆ ಎಂಬುದಾಗಲಿ ಬಿಗ್ ಬಾಸ್ ಬಾಸ್ ಮಂದಿಗೆ ತಿಳಿದೇ ಇಲ್ಲ. ಆ ವಿಷಯ ತಿಳಿದರೆ ಖಂಡಿತವಾಗಿಯೂ ಎಲ್ಲರಿಗೂ ಸಖತ್ ಬೇಸರ ಆಗಲಿದೆ.
ಇದನ್ನೂ ಓದಿ: Bigg Boss Kannada: ‘ನೋಡಪ್ಪ.. ಕೇಳಯ್ಯ ಇಲ್ಲಿ’: ಬಿಗ್ ಬಾಸ್ಗೆ ಏಕವಚನದಲ್ಲಿ ಮಾತನಾಡಿಸಿದ ಬ್ರಹ್ಮಾಂಡ ಗುರೂಜಿ
ಪ್ರತಿ ಬಾರಿಯೂ ಬಿಗ್ ಬಾಸ್ ಶೋ ಕೊನೇ ಹಂತವನ್ನು ತಲುಪುವಾಗ ಕೆಲವು ಸುದ್ದಿಗಳನ್ನು ಸ್ಪರ್ಧಿಗಳಿಗೆ ತೋರಿಸಲಾಗುತ್ತದೆ. ಬಿಗ್ ಬಾಸ್ ಶೋ ಆರಂಭ ಆದ ಬಳಿಕ ಇಂದಿನ ತನಕ ಹೊರಜಗತ್ತಿನಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ವಾರ್ತೆಯನ್ನು ತಿಳಿಸಲಾಗುತ್ತದೆ. ಈ ಹಿಂದಿನ ಸೀಸನ್ಗಳಲ್ಲಿ ಈ ರೀತಿ ಮಾಡಲಾಗಿತ್ತು. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲೂ ಆ ರೀತಿ ನ್ಯೂಸ್ ಪ್ರಸಾರ ಮಾಡಿದರೆ ಮಾತ್ರ ಸ್ಪರ್ಧಿಗಳಿಗೆಲ್ಲ ವಿಶ್ವಕಪ್ ಸೋಲಿನ ವಿಷಯ ಗೊತ್ತಾಗಲಿದೆ. ಒಂದು ವೇಳೆ ನ್ಯೂಸ್ ತೋರಿಸದೇ ಇದ್ದರೆ ಬಿಗ್ ಬಾಸ್ ಫಿನಾಲೆ ಆದ ನಂತರವೇ ಆ ವಿಚಾರ ಗೊತ್ತಾಗಬೇಕಷ್ಟೇ.
ಇದನ್ನೂ ಓದಿ: ಬಿಗ್ ಬಾಸ್ಗೆ ಹೋಗಲು ಚಾನ್ಸ್ ಕೇಳಿಕೊಂಡು ಎತ್ತಿನ ಗಾಡಿಯಲ್ಲಿ ಸುದೀಪ್ ಮನೆಗೆ ಬಂದ ‘ಅವಿದ್ಯಾವಂತ ರೈತ’
‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋನಲ್ಲಿ ಈಗ 7ನೇ ವಾರದ ಆಟ ನಡೆಯುತ್ತಿದೆ. ಅಂದರೆ, ಬಹುತೇಕ ಅರ್ಧ ಹಂತಕ್ಕೆ ಬಂದಿದೆ. ಸದ್ಯಕ್ಕೆ ದೊಡ್ಮನೆಯಲ್ಲಿ 12 ಮಂದಿ ಇದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್ ಗೌಡ, ಸ್ನೇಹಿತ್ ಗೌಡ, ನಮ್ರತಾ ಗೌಡ, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ಮೈಕೆಲ್ ಅಜಯ್, ನೀತು ವನಜಾಕ್ಷಿ, ಸಿರಿ ಅವರು ಆಟ ಮುಂದುವರಿಸಿದ್ದಾರೆ. 6ನೇ ವಾರದಲ್ಲಿ ಡಬಲ್ ಎಲಿಮಿಷನ್ ನಡೆದಿತ್ತು ಈಶಾನಿ ಮತ್ತು ಭಾಗ್ಯಶ್ರೀ ಅವರು ಔಟ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.