ಬಿಗ್ ಬಾಸ್ಗೆ ಹೋಗಲು ಚಾನ್ಸ್ ಕೇಳಿಕೊಂಡು ಎತ್ತಿನ ಗಾಡಿಯಲ್ಲಿ ಸುದೀಪ್ ಮನೆಗೆ ಬಂದ ‘ಅವಿದ್ಯಾವಂತ ರೈತ’
ವ್ಯಕ್ತಿಯೊಬ್ಬರು ಎತ್ತಿನ ಗಾಡಿನಲ್ಲಿ ಬೆಂಗಳೂರಿಗೆ ಬಂದು ಕಿಚ್ಚ ಸುದೀಪ್ ನಿವಾಸದ ಎದುರಿನಲ್ಲಿ ಹೈಡ್ರಾಮಾ ಮಾಡಿದ್ದಾರೆ. ‘ನಮ್ಮ ನಡಿಗೆ ಬಿಗ್ ಬಾಸ್ ಕಡೆಗೆ. ಅವಿದ್ಯಾವಂತ ರೈತರಿಗೆ ಒಂದು ಅವಕಾಶ ಕೊಡಿ’ ಎಂಬ ಬ್ಯಾನರ್ ಅನ್ನು ಎತ್ತಿನ ಗಾಡಿಗೆ ಕಟ್ಟಿಕೊಂಡು ಅವರು ಬಂದಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ..
ಬಿಗ್ ಬಾಸ್ (Bigg Boss Kannada) ಶೋನಲ್ಲಿ ಸ್ಪರ್ಧಿಸಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಆದರೆ ಎಲ್ಲರಿಗೂ ಚಾನ್ಸ್ ಸಿಗುವುದಿಲ್ಲ. ಅವಕಾಶಕ್ಕಾಗಿ ಕೆಲವರು ಹಲವಾರು ಬಗೆಯ ಸರ್ಕಸ್ ಮಾಡುತ್ತಾರೆ. ವಿವಿಧ ರೀತಿಯಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಈಗ ವ್ಯಕ್ತಿಯೊಬ್ಬರು ಎತ್ತಿನ ಗಾಡಿನಲ್ಲಿ ಬೆಂಗಳೂರಿಗೆ ಬಂದು ಕಿಚ್ಚ ಸುದೀಪ್ (Kichcha Sudeep) ಅವರ ಮನೆಯ ಎದುರಿನಲ್ಲಿ ಹೈಡ್ರಾಮಾ ಮಾಡಿದ್ದಾರೆ. ‘ನಮ್ಮ ನಡಿಗೆ ಬಿಗ್ ಬಾಸ್ ಕಡೆಗೆ. ಅವಿದ್ಯಾವಂತ ರೈತರಿಗೆ ಒಂದು ಅವಕಾಶ ಕೊಡಿ’ ಎಂಬ ಬ್ಯಾನರ್ ಅನ್ನು ಎತ್ತಿನ ಗಾಡಿಗೆ ಕಟ್ಟಿಕೊಂಡು ಅವರು ಬಂದಿದ್ದಾರೆ. ತಾವು ಟಿ. ನರಸೀಪುರದಿಂದ ಬಂದಿರುವುದಾಗಿ ಈ ವ್ಯಕ್ತಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸುದೀಪ್ ಮನೆಯ (Kichcha Sudeep House) ಭದ್ರತಾ ಸಿಬ್ಬಂದಿ ಈ ರೈತನಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್

