Bigg Boss Kannada: ‘ನೋಡಪ್ಪ.. ಕೇಳಯ್ಯ ಇಲ್ಲಿ’: ಬಿಗ್ ಬಾಸ್ಗೆ ಏಕವಚನದಲ್ಲಿ ಮಾತನಾಡಿಸಿದ ಬ್ರಹ್ಮಾಂಡ ಗುರೂಜಿ
ಎಲ್ಲ ಸ್ಪರ್ಧಿಗಳು ಬಿಗ್ ಬಾಸ್ಗೆ ಬಹಳ ಗೌರವ ನೀಡುತ್ತಾರೆ. ಆದರೆ ಬ್ರಹ್ಮಾಂಡ ಗುರೂಜಿ ಅವರ ವರಸೆಯೇ ಬೇರೆ. ‘ನೋಡಪ್ಪ ಬಿಗ್ ಬಾಸು.. ಕೇಳಯ್ಯ ಇಲ್ಲಿ.. ನನಗೆ ಓಡಾಡೋಕೆ ಆಗಲ್ಲ. ಈಗಲೇ ಹೇಳಿದೀನಿ. ಎಲ್ಲರನ್ನೂ ಒಂದು ಕಡೆ ಕೂರಿಸು’ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ಫನ್ನಿ ವಿಡಿಯೋ ಇಲ್ಲಿದೆ ನೋಡಿ..
ನರೇಂದ್ರ ಬಾಬು ಶರ್ಮಾ ಅಲಿಯಾಸ್ ಬ್ರಹ್ಮಾಂಡ ಗುರೂಜಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಶೋಗೆ ಕಾಲಿಟ್ಟಿದ್ದಾರೆ. ಅತಿಥಿಯಾಗಿ ಬಂದಿರುವ ಅವರಿಗೂ ಬಿಗ್ ಬಾಸ್ನಲ್ಲಿ ಟಾಸ್ಕ್ ನೀಡಲಾಗಿದೆ. ದೊಡ್ಮನೆಯೊಳಗಿನ ಸದಸ್ಯರಿಗೆ ಆಗಾಗ ಬಿಗ್ ಬಾಸ್ (Bigg Boss) ಕಡೆಯಿಂದ ಆದೇಶ ಬರುತ್ತದೆ. ಎಲ್ಲರೂ ಬಿಗ್ ಬಾಸ್ಗೆ ಬಹಳ ಗೌರವ ನೀಡುತ್ತಾರೆ. ‘ಕೇಳಿ, ನೋಡಿ, ಕಳಿಸಿ’ ಎಂದೆಲ್ಲ ಬಹುವಚನದಲ್ಲಿ ಗೌರವದಿಂದ ಸ್ಪರ್ಧಿಗಳು ಮಾತನಾಡುತ್ತಾರೆ. ಆದರೆ ಬ್ರಹ್ಮಾಂಡ ಗುರೂಜಿ ಅವರ ವರಸೆಯೇ ಬೇರೆ. ಸೋಮವಾರದ (ನ.20) ಎಪಿಸೋಡ್ನಲ್ಲಿ ಅವರಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಆ ವೇಳೆ ಅವರು ಕ್ಯಾಮೆರಾ ಇರುವಲ್ಲಿಗೆ ಬಂದು ಬಿಗ್ ಬಾಸ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ‘ನೋಡಪ್ಪ ಬಿಗ್ ಬಾಸು.. ಕೇಳಯ್ಯ ಇಲ್ಲಿ.. ನನಗೆ ಓಡಾಡೋಕೆ ಆಗಲ್ಲ. ಈಗಲೇ ಹೇಳಿದೀನಿ. ಎಲ್ಲರನ್ನೂ ಒಂದು ಕಡೆ ಕೂರಿಸು’ ಎಂದು ಬ್ರಹ್ಮಾಂಡ ಗುರೂಜಿ (Brahmanda Guruji) ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್ ಬಾಸ್ ಶೋ ಬಿತ್ತರ ಆಗುತ್ತದೆ. ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ 24 ಗಂಟೆಯೂ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.