ಈ ವಾರ ಭಿನ್ನವಾಗಿತ್ತು ನಾಮಿನೇಷನ್ ಪ್ರಕ್ರಿಯೆ, ನಾಮಿನೇಟ್ ಆದವರು ಯಾರ್ಯಾರು?
Bigg Boss: ಈ ವಾರ ನಾಮಿನೇಷನ್ ಪ್ರಕ್ರಿಯೆ ತುಸು ಭಿನ್ನವಾಗಿ ನಡೆಯಿತು. ಈ ವಾರ ಟಾಸ್ಕ್ ಗೆದ್ದವರು ತಮಗೆ ಬೇಕಾದವರಿಗೆ ನಾಮಿನೇಟ್ ಮಾಡುವ ಅಧಿಕಾರ ನೀಡಬೇಕಿತ್ತು. ಅಂದಹಾಗೆ ಈ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆದವರು ಯಾರು?
ಬಿಗ್ಬಾಸ್ (Bigg Boss) ಮನೆಯಲ್ಲಿ ಟಾಸ್ಕ್ಗಳನ್ನು ಭಿನ್ನವಾಗಿ ನಡೆಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಮನೆಯ ಪ್ರಮುಖ ಟಾಸ್ಕ್ಗಳಲ್ಲಿ ಒಂದು ನಾಮಿನೇಷನ್ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ಪ್ರತಿ ವಾರವೂ ಭಿನ್ನವಾಗಿ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿರುತ್ತಾರೆ ಬಿಗ್ಬಾಸ್. ಈ ಬಾರಿಯೂ ನಾಮಿನೇಷನ್ ಭಿನ್ನವಾಗಿತ್ತು. ಸ್ಪರ್ಧಿಗಳು ಆಟವಾಡಿ, ಗೆದ್ದು ನಾಮಿನೇಟ್ ಮಾಡುವ ಅಧಿಕಾರವನ್ನು ಬೇರೆಯವರಿಗೆ ನೀಡಬೇಕಿತ್ತು.
ಬಿಗ್ಬಾಸ್ನ ಓಪನ್ ಏರಿಯಾನಲ್ಲಿ ಬಾಗಿಲೊಂದನ್ನು ನಿರ್ಮಿಸಲಾಗಿತ್ತು. ಅದಕ್ಕೆ ಬೀಗವನ್ನು ಹಾಕಲಾಗಿತ್ತು. ಮಹಿಳಾ ಸ್ಪರ್ಧಿಗಳು, ಪುರುಷ ಸ್ಪರ್ಧಿಗಳು ಪ್ರತ್ಯೇಕ ಗುಂಪುಗಳನ್ನಾಗಿ ಮಾಡಿಕೊಂಡು, ಪ್ರತಿ ಬಾರಿ ಓಡಿ ಹೋಗಿ ಬೀಗದ ಕೀಲಿಕೈಯನ್ನು ಎತ್ತಿಕೊಳ್ಳಬೇಕಿತ್ತು. ಯಾರು ಕೀಲಿಕೈ ಎತ್ತಿಕೊಳ್ಳುತ್ತಾರೆಯೋ ಅವರು ಬಾಗಿಲ ಹೊರಗೆ ನಿಂತಿರುವ ಇನ್ನೊಂದು ತಂಡದ ಒಬ್ಬರಿಗೆ ಯಾರನ್ನಾದರೂ ಇಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ನೀಡಬೇಕಿತ್ತು.
ಅಂತೆಯೇ ಮಹಿಳಾ ತಂಡದಲ್ಲಿ ಸಂಗೀತಾ, ತನಿಷಾ, ನಮ್ರತಾ ಅವರುಗಳು ಹೆಚ್ಚು ಬಾರಿ ಗೆದ್ದು, ಕಾರ್ತಿಕ್, ವಿನಯ್, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಇನ್ನಿತರರಿಗೆ ನಾಮಿನೇಟ್ ಮಾಡುವ ಅವಕಾಶ ಕೊಟ್ಟರು. ಪುರುಷರ ತಂಡದಿಂದ ಕಾರ್ತಿಕ್, ತುಕಾಲಿ ಇನ್ನಿತರರು ಗೆದ್ದು ಸಂಗೀತಾ, ತನಿಷಾ, ನಮ್ರತಾ ಇನ್ನಿತರೆ ಸ್ಪರ್ಧಿಗಳಿಗೆ ನಾಮಿನೇಟ್ ಮಾಡುವ ಅವಕಾಶ ಮಾಡಿಕೊಟ್ಟರು.
ಇದನ್ನೂ ಓದಿ:ಬಿಗ್ಬಾಸ್: ವಿನಯ್ ಬಗ್ಗೆ ಹೊರಬಂದ ಭಾಗ್ಯಶ್ರೀ ಹೇಳಿದ್ದೇನು?
ನಾಮಿನೇಟ್ ಮಾಡುವ ಅಧಿಕಾರ ಪಡೆದವರು ಮಡಿಕೆಯ ಮೇಲೆ ನಾಮಿನೇಟ್ ಮಾಡುತ್ತಿರುವವರ ಹೆಸರು ಬರೆದು ಆ ಮಡಿಕೆಯನ್ನು ಸ್ವಿಮ್ಮಿಂಗ್ ಪೂಲ್ ಒಳಗೆ ಬಿಸಾಡಬೇಕಿತ್ತು. ಅದರಂತೆ ಅಧಿಕಾರ ಪಡೆದ ಎಲ್ಲ ಸ್ಪರ್ಧಿಗಳು ಮಡಿಕೆಯ ಮೇಲೆ ನಾಮಿನೇಟ್ ಮಾಡಲಿಚ್ಚಿಸುವವರ ಹೆಸರು ಬರೆದು ಸ್ವಿಮ್ಮಿಂಗ್ ಪೂಲ್ಗೆ ಬಿಸಾಡಿದರು. ಈ ಟಾಸ್ಕ್ ಅನ್ನು ಬಿಗ್ಬಾಸ್ ಮನೆಗೆ ಅತಿಥಿಯಾಗಿ ಪ್ರವೇಶಿಸಿದ್ದ ಬಿಗ್ಬಾಸ್ ಮೊದಲ ಸೀಸನ್ನ ಸ್ಪರ್ಧಿಯಾಗಿದ್ದ ಬ್ರಹ್ಮಾಂಡ ಗುರೂಜಿ ಉಸ್ತುವಾರಿ ವಹಿಸಿದ್ದರು.
View this post on Instagram
ಅಂತಿಮವಾಗಿ ಈ ವಾರ ಮನೆಯಿಂದ ಹೊರಗೆ ಹೋಗಲು ತುಕಾಲಿ ಸಂತು, ವಿನಯ್ ಗೌಡ, ನೀತು, ತನಿಷಾ, ಸ್ನೇಹಿತ್, ಸಂಗೀತಾ, ಡ್ರೋನ್ ಪ್ರತಾಪ್, ನಮ್ರತಾ ಹಾಗೂ ಸಿರಿ ಅವರು ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಭಾಗ್ಯಶ್ರೀ ಹಾಗೂ ಇಶಾನಿ ಮನೆಯಿಂದ ಹೊರಗೆ ಹೋಗಿದ್ದರು. ಈ ವಾರ ನೀತು ಅವರು ನಾಮಿನೇಟ್ ಆಗಿದ್ದು, ಅವರೇ ಹೊರಗೆ ಹೋಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ