ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು? ಈ ಬಾರಿಯ ಫೈನಲಿಸ್ಟ್ ಯಾರು: ಇಶಾನಿ ಉತ್ತರ

Bigg Boss: ಬಿಗ್​ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿರುವ ಇಶಾನಿ, ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು, ನೈಜತೆಯಿಂದ ಆಡುತ್ತಿರುವುದು ಯಾರು? ಗೆಲ್ಲುವುದು ಯಾರು ಎಂಬ ಬಗ್ಗೆ ಮಾತನಾಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು? ಈ ಬಾರಿಯ ಫೈನಲಿಸ್ಟ್ ಯಾರು: ಇಶಾನಿ ಉತ್ತರ
ಇಶಾನಿ
Follow us
|

Updated on: Nov 20, 2023 | 4:30 PM

ಬಿಗ್​ಬಾಸ್ ಕನ್ನಡ ಸೀಸನ್ 10ರ (Bigg Boss) ಈ ವೀಕೆಂಡ್​ನಲ್ಲಿ ಇಶಾನಿ ಹಾಗೂ ಭಾಗ್ಯಶ್ರೀ ಇಬ್ಬರೂ ಎಲಿಮಿನೇಟ್ ಆಗಿದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಇಶಾನಿ ಎಲಿಮಿನೇಟ್ ಆಗಿದ್ದರೆ, ಭಾನುವಾರದಂದು ಭಾಗ್ಯಶ್ರೀ ಎಲಿಮಿನೇಟ್ ಆಗಿದ್ದಾರೆ. ಆರಂಭದ ಕೆಲ ವಾರ, ಇಶಾನಿ ಒಳ್ಳೆಯ ಸ್ಪರ್ಧಿ ಎನ್ನಲಾಗುತ್ತಿತ್ತು, ಆದರೆ ಬರ-ಬರುತ್ತಾ ಇಶಾನಿ, ಮತ್ತೊಬ್ಬರ ಮೇಲೆ ಡಿಪೆಂಡ್ ಆಗಿ ಆಡುತ್ತಿದ್ದಾರೆ ಅನ್ನಿಸಲಾರಂಭಿಸಿತು. ಅದೃಷ್ಟವಶಾತ್ ಒಂದು ವಾರ ಎಲಿಮಿನೇಷನ್​ನಿಂದ ಬಚಾವ್ ಆಗಿದ್ದ ಇಶಾನಿ ಇದೀಗ ಹೊರ ಬಂದಿದ್ದಾರೆ.

ಮನೆಯಿಂದ ಹೊರಬಂದ ಮೇಲೆ ಸುದೀಪ್ ಜೊತೆಗೆ ಮಾತನಾಡುತ್ತಾ, ತನಗೆ ಇನ್ನೂ ಆಡುವ ಬಯಕೆ ಇದೆ, ನಾನು ಗಟ್ಟಿ ಹುಡುಗಿ, ನನಗೆ ಆಡಲು ಅವಕಾಶ ಕೊಡಿ ಎಂದೇ ಗೋಗರೆದರು. ಆದರೆ ಅದಕ್ಕೆ ಅವಕಾಶ ಇರಲಿಲ್ಲ. ಶೋನಿಂದ ಹೊರ ಬಂದ ಬಳಿಕ ನೀಡಿರುವ ಸಂದರ್ಶನದಲ್ಲಿ, ಬಿಗ್​ಬಾಸ್ ಮನೆಯ ಬಗ್ಗೆ, ಮನೆಯ ಸದಸ್ಯರ ಬಗ್ಗೆ ಇಶಾನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು ಎಂಬ ಪ್ರಶ್ನೆಗೆ, ತುಕಾಲಿ ಸಂತೋಷ್, ಬಿಗ್​ಬಾಸ್ ಮನೆಯ ಫೇಕ್ ಆಟಗಾರ. ನಾನು ಅವರನ್ನು ಊಸರವಳ್ಳಿ ಎಂದು ಕರೆದಿದ್ದು, ಅದು ನಿಜ ಕೂಡ. ಒಮ್ಮೊಮ್ಮೆ ಅವರು ನನ್ನೊಟ್ಟಿಗೆ ಸರಿಯಾಗಿ ಮಾತನಾಡಿದರು, ಅದಾದ ಮೇಲೆ ಬೇರೆ ತಂಡದೊಟ್ಟಿಗೆ ಹೋಗಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಅವರ ಲಾಭಕ್ಕಾಗಿ ಡ್ರಾಮಾ ಕ್ರಿಯೇಟ್ ಮಾಡುತ್ತಿದ್ದರು. ಅದು ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಬಿಗ್​ಬಾಸ್ ಮನೆಯ ಮೊದಲ ಫೇಕ್ ತುಕಾಲಿ ಸಂತು ಎಂದಿದ್ದಾರೆ. ಜೊತೆಗೆ ನೀತು ಬಗ್ಗೆಯೂ ಮಾತನಾಡಿ, ಆಕೆಗೆ ಸರಿಯಾದ ವ್ಯಕ್ತಿತ್ವವೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ:ಹಿಂದಿ ಬಿಗ್​ಬಾಸ್​ನಲ್ಲಿ ಕ್ರಿಕೆಟ್ ಮೇನಿಯಾ, ಕನ್ನಡ ಬಿಗ್​ಬಾಸ್ ಸ್ಪರ್ಧಿಗಳಿಗೆ ವಿಶ್ವಕಪ್ ಫೈನಲ್ ನೋಡೊ ಭಾಗ್ಯ ಇಲ್ಲವಾ?

ಇನ್ನು ಬಿಗ್​ಬಾಸ್ ಮನೆಯ ಜಿನ್ಯೂನ್ ವ್ಯಕ್ತಿ ಯಾರೆಂಬ ಪ್ರಶ್ನೆಗೆ ಗೆಳೆಯ ಮೈಖಲ್ ಹೆಸರು ತೆಗೆದುಕೊಂಡಿದ್ದಾರೆ. ಮೈಖಲ್ ಜಿನ್ಯೂನ್ ವ್ಯಕ್ತಿಯಾಗಿದ್ದಾರೆ. ಆರಂಭದಲ್ಲಿ ನಾನು ಅವರನ್ನು ನಂಬಿರಲಿಲ್ಲ ಆದರೆ ಬರ ಬರುತ್ತಾ ಅವರ ನಿಜಾಯಿತಿ ಅರ್ಥವಾಗುತ್ತಾ ಹೋಯ್ತು. ಮತ್ತೊಮ್ಮೆ ಮನೆಯ ಒಳಗೆ ಹೋಗಲು ಅವಕಾಶ ಸಿಕ್ಕರೆ ಎಲ್ಲದಕ್ಕೂ ನಾನು ಮೈಖಲ್ ಅನ್ನು ಬೆಂಬಲಿಸುತ್ತೀನಿ ಎಂದಿದ್ದಾರೆ ಇಶಾನಿ.

ಬಿಗ್​ಬಾಸ್​ನ ಫೈನಲಿಸ್ಟ್​ಗಳು ಯಾರಾಗಬಹುದು ಎಂಬ ಬಗ್ಗೆ ಮಾತನಾಡಿರುವ ಇಶಾನಿ, ವಿನಯ್, ನಮ್ರತಾ, ಮೈಖಲ್, ಸಂಗೀತಾ, ಕಾರ್ತಿಕ್ ಇವರುಗಳು ಫೈನಲ್ ಹಂತಕ್ಕೆ ಬರುತ್ತಾರೆ. ಇವರಲ್ಲಿ ಯಾರಾದರೂ ಒಬ್ಬರು ಗೆಲ್ಲಬಹುದು ಎಂದಿದ್ದಾರೆ. ತಾವು ವಿನಯ್, ನಮ್ರತಾ, ಸ್ನೇಹಿತ್ ಅವರ ಗುಂಪು ಸೇರಿದ್ದಕ್ಕೆ ತೊಂದರೆಯಾಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಇಶಾನಿ, ಇಲ್ಲ ಅವರು ನನ್ನ ನಿಜವಾದ ಗೆಳೆಯರು. ಅವರಿಂದ ನನಗೆ ತೊಂದರೆಯಾಗಲಿಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ತೈಲ ​​​ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸಿಟಿ ರವಿ ಧರಣಿ
ತೈಲ ​​​ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸಿಟಿ ರವಿ ಧರಣಿ