ಡಬಲ್ ಎಲಿಮಿನೇಷನ್: ಶನಿವಾರ ಇಶಾನಿ, ಭಾನುವಾರ ಹೊರಹೋಗಿದ್ಯಾರು?

Bigg Boss: ಈ ವೀಕೆಂಡ್​ಗೆ ಡಬಲ್ ಎಲಿಮಿನೇಷನ್ ಇತ್ತು. ಶನಿವಾರ ಇಶಾನಿ ಬಿಗ್​ಬಾಸ್ ಮನೆಯಿಂದ ಹೊರಗೆ ಹೋದರು. ಭಾನುವಾರ ಹೊರಗೆ ಹೋಗಿದ್ದು ಯಾರು?

ಡಬಲ್ ಎಲಿಮಿನೇಷನ್: ಶನಿವಾರ ಇಶಾನಿ, ಭಾನುವಾರ ಹೊರಹೋಗಿದ್ಯಾರು?
Follow us
|

Updated on: Nov 19, 2023 | 10:57 PM

ಬಿಗ್​ಬಾಸ್​ ಕನ್ನಡ ಸೀಸನ್ 10ರಲ್ಲಿ (Bigg Boss) ಈ ವಾರ ಡಬಲ್ ಎಲಿಮಿನೇಷನ್ (Elimination). ಸಾಮಾನ್ಯವಾಗಿ ಭಾನುವಾರದ ಎಪಿಸೋಡ್​ನ ಕೊನೆಯಲ್ಲಿ ಮನೆಯಿಂದ ಹೊರ ಹೋಗುವವರ ಹೆಸರನ್ನು ಸುದೀಪ್ ಘೋಷಿಸುವುದು ಸಾಮಾನ್ಯ, ಆದರೆ ಈ ವಾರ ಡಬಲ್ ಎಲಿಮಿನೇಷನ್ ಇದ್ದ ಕಾರಣ, ಶನಿವಾರ ಒಬ್ಬರು ಮನೆಯಿಂದ ಎಲಿಮಿನೇಟ್ ಆಗಿದ್ದು, ಭಾನುವಾರವೂ ಒಬ್ಬರು ಎಲಿಮಿನೇಟ್ ಆಗಿದ್ದಾರೆ.

ಶನಿವಾರದ ಎಪಸೋಡ್​ನಲ್ಲಿ ಇಶಾನಿ ಮನೆಯಿಂದ ಎಲಿಮಿನೇಟ್ ಆದರೆ ಭಾನುವಾರದ ಎಪಿಸೋಡ್​ನಲ್ಲಿ ನಟಿ ಭಾಗ್ಯಶ್ರೀ ಎಲಿಮಿನೇಟ್ ಆಗಿದ್ದಾರೆ. ಭಾಗ್ಯಶ್ರೀ ದಸರಾ ಹಬ್ಬದ ಸಂದರ್ಭದಲ್ಲಿಯೇ ಮನೆಯಿಂದ ಎಲಿಮಿನೇಟ್ ಆಗಿದ್ದರು. ಆದರೆ ಹಬ್ಬದ ಸಮಯವಾದ್ದರಿಂದ ಆ ವಾರ ಭಾಗ್ಯಶ್ರೀ ಅವರ ಎಲಿಮಿನೇಷನ್ ಅನ್ನು ರದ್ದು ಮಾಡಲಾಯ್ತು. ಹಾಗಾಗಿ ಭಾಗ್ಯಶ್ರೀ ಮನೆಯಲ್ಲಿಯೇ ಉಳಿದುಕೊಂಡರು.

ದಸರಾ ಹಬ್ಬದ ಬಳಿಕ ಭಾಗ್ಯಶ್ರೀ ಆಟದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿತ್ತು. ಅಲ್ಲದೆ ಡ್ರೋನ್ ಪ್ರತಾಪ್ ಅವರಿಂದಾಗಿಯೂ ಒಮ್ಮೊ ನಾಮಿನೇಷನ್​ನಿಂದ ಭಾಗ್ಯಶ್ರೀ ಉಳಿದುಕೊಂಡರು. ಹಾಗಾಗಿ ಮೊದಲ ಮೂರನೇ ವಾರಕ್ಕೆ ಮನೆಯಿಂದ ಹೊರಗೆ ಬೇಕಾಗಿದ್ದ ಭಾಗ್ಯಶ್ರೀ ಆರು ವಾರಗಳ ವರೆಗೆ ಬಿಗ್​ಬಾಸ್ ಮನೆಯಲ್ಲಿ ಉಳಿದುಕೊಂಡರು. ಆದರೆ ಅಂತಿಮವಾಗಿ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ.

ಇದನ್ನೂ ಓದಿ:ಹಿಂದಿ ಬಿಗ್​ಬಾಸ್​ನಲ್ಲಿ ಕ್ರಿಕೆಟ್ ಮೇನಿಯಾ, ಕನ್ನಡ ಬಿಗ್​ಬಾಸ್ ಸ್ಪರ್ಧಿಗಳಿಗೆ ವಿಶ್ವಕಪ್ ಫೈನಲ್ ನೋಡೊ ಭಾಗ್ಯ ಇಲ್ಲವಾ?

ಭಾಗ್ಯಶ್ರೀ, ಆರಂಭದಿಂದಲೂ ಮನೆಯ ಯುವ ಸದಸ್ಯರೊಟ್ಟಿಗೆ ಹೊಂದಿಕೊಳ್ಳಲು ಕಷ್ಟಪಟ್ಟರು. ಮಧ್ಯ ವಯಸ್ಸಿನ ಭಾಗ್ಯಶ್ರೀ ಟಾಸ್ಕ್​ನಲ್ಲಿಯೂ ನಿಧಾನವಾಗಿದ್ದರು. ಮಾತ್ರವಲ್ಲದೆ ಮನೆಯ ಇತರೆ ಸದಸ್ಯರೊಟ್ಟಿಗೆ ಅವರ ಆಲೋಚನೆಗಳು, ಯೋಚನಾಕ್ರಮವೂ ಮ್ಯಾಚ್ ಆಗುತ್ತಿರಲಿಲ್ಲ. ಹೀಗಾಗಿ ಸದಾ ಬಹುತೇಕ ತಮ್ಮದೇ ವಯಸ್ಸಿನವರಾದ ನಟಿ ಸಿರಿ ಅವರೊಟ್ಟಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಈಗ ಕೊನೆಗೂ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

ಈ ವರೆಗೆ ಬಿಗ್​ಬಾಸ್ ಮನೆಯಿಂದ ಸ್ನೇಕ್ ಶ್ಯಾಮ್, ರಕ್ಷಕ್, ಗೌರೀಶ್ ಅಕ್ಕಿ, ಇಶಾನಿ, ಭಾಗ್ಯಶ್ರೀ ಅವರುಗಳು ಹೊರಗೆ ಹೋಗಿದ್ದಾರೆ. ಸಿರಿ, ವಿನಯ್, ನಮ್ರತಾ, ತನಿಷಾ, ಸಂಗೀತಾ, ಕಾರ್ತಿಕ್, ಸ್ನೇಹಿತ್, ತುಕಾಲಿ ಸಂತೋಷ್, ನೀತು, ವರ್ತೂರು ಸಂತೋಷ್ ಅವರುಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ಮುಂದಿನ ವಾರ ಯಾರು ಹೊರಗೆ ಹೋಗುತ್ತಾರೆ ಎಂಬುದು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ಮಾಜಿ ಸಿಎಂಗಳಾದ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರದ್ದು ಒಂದೇ ಮಾತು!
ಮಾಜಿ ಸಿಎಂಗಳಾದ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರದ್ದು ಒಂದೇ ಮಾತು!
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ
ಗೆಳೆಯ ದರ್ಶನ್ ಕಾಣಲು ಬಂದು ನಿರಾಶರಾಗಿ ತೆರಳಿದ ಸಾಧು
ಗೆಳೆಯ ದರ್ಶನ್ ಕಾಣಲು ಬಂದು ನಿರಾಶರಾಗಿ ತೆರಳಿದ ಸಾಧು