ಸುದೀಪ್ ಎದುರೇ ಒಡೆದು ಹೋಯ್ತು ಸ್ನೇಹಿತ್ ಹೃದಯ; ಕಿಚ್ಚ ಈ ರೀತಿ ಮಾಡಬಾರದಿತ್ತು..
ಸ್ನೇಹಿತ್ ಬಿಗ್ ಬಾಸ್ ಮನೆ ಒಳಗೆ ಬಂದಾಗ ಸಂಗೀತಾ ಜೊತೆ ಕ್ಲೋಸ್ ಆಗೋಕೆ ನೋಡಿದ್ದರು. ಆದರೆ ಈ ವೇಳೆ ಕಾರ್ತಿಕ್ ಎಂಟ್ರಿ ಆಯಿತು. ಆ ಬಳಿಕ ಈಶಾನಿ ಜೊತೆ ಫ್ರೆಂಡ್ಶಿಪ್ ಬೆಳೆಸಿಕೊಳ್ಳಲು ಹೋದರು. ಆಗ ಮೈಕೆಲ್ ಅವರು ಬಂದರು. ಈಗ ನಮ್ರತಾ ಗೌಡ ಜೊತೆ ಕ್ಲೋಸ್ ಆಗಲು ಪ್ರಯತ್ನಿಸುತ್ತಿದ್ದಾರೆ.
ಬಿಗ್ ಬಾಸ್ನಲ್ಲಿ ನಮ್ರತಾ ಗೌಡ (Namrata Gowda) ಜೊತೆ ಸ್ನೇಹಿತ್ ಸದಾ ಫ್ಲರ್ಟ್ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಇದು ಇಡೀ ಮನೆಗೆ ಗೊತ್ತಿದೆ. ‘ನನಗೆ ಈ ಬಗ್ಗೆ ಆಸಕ್ತಿ ಇಲ್ಲ’ ಎಂದು ನಮ್ರತಾ ಎಷ್ಟೋ ಬಾರಿ ಹೇಳಿಕೊಂಡಿದ್ದಿದೆ. ಆದರೆ, ಸ್ನೇಹಿತ್ ಮಾತ್ರ ಪ್ರಯತ್ನ ನಿಲ್ಲಿಸಲೇ ಇಲ್ಲ. ಈಗ ಸುದೀಪ್ ಆಡಿದ ಒಂದು ಮಾತಿನಿಂದ ಸ್ನೇಹಿತ್ ಹೃದಯವೇ ಒಡೆದು ಹೋಗಿದೆ. ಈ ಮಾತಿನಿಂದ ಮನೆ ಮಂದಿ ಸಖತ್ ನಕ್ಕಿದ್ದಾರೆ.
ಸ್ನೇಹಿತ್ ಗೌಡ ಅವರು ನಮ್ರತಾ ಜೊತೆ ಸಾಕಷ್ಟು ಫ್ಲರ್ಟ್ ಮಾಡಿದ್ದಾರೆ. ‘ನನ್ನ ಜಾಗದಲ್ಲಿ ಬೇರೆ ಹುಡುಗಿ ಇದ್ದಿದ್ದರೆ ಬಹುಶಃ ನಿಮ್ಮ ಮಾತಿಗೆ ಒಲಿಯುತ್ತಿದ್ದರೇನೋ’ ಎಂದು ನಮ್ರತಾ ಈ ಮೊದಲು ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಸ್ನೇಹಿತ್, ‘ನಮ್ಮ ಪ್ರಯತ್ನ ನಾವು ಮಾಡುತ್ತಾ ಇರಬೇಕು. ಎಲ್ಲಾ ದೇವರ ಇಚ್ಛೆ ಅಂತೆ ಆಗುತ್ತದೆ’ ಎಂದು ಹೇಳಿದ್ದರು. ಈಗ ನಮ್ರತಾ ಹಾಗೂ ಸ್ನೇಹಿತ್ ಮಧ್ಯೆ ಅಣ್ಣ ತಂಗಿ ಸಂಬಂಧ ಕಲ್ಪಿಸಿದ್ದಾರೆ ಸುದೀಪ್.
ನಮ್ರತಾ ಅವರನ್ನು ಮಾತನಾಡಿಸುತ್ತಾ, ‘ನಿಮ್ಮ ಅಣ್ಣ ಹೇಗಿದ್ದಾರೆ, ಅವರನ್ನು ಇನ್ನಮುಂದೆ ನೀವು ಅಣ್ಣ ಎಂದೇ ಕರೆಯಬೇಕು’ ಎಂದರು ಸುದೀಪ್. ಇದಕ್ಕೆ ಉತ್ತರಿಸಿದ ನಮ್ರತಾ, ‘ಅವರಿಗೆ ಹಾಗೆ ಕರೆಯೋದು ಇಷ್ಟವಿಲ್ಲವಂತೆ’ ಎಂದರು. ‘ಇರಲಿಬಿಡಿ, ಇನ್ಮುಂದೆ ಹಾಗೆಯೇ ಕರೆಯಿರಿ. ಅಣ್ಣ, ಸ್ನೇಹಿತ್ ಅಣ್ಣ ಎಂದು ಜೋರಾಗಿ ಕರೆದರೆ ಸಾಕು ಅವರು ಪ್ರತ್ಯಕ್ಷರಾಗಿಬಿಡುತ್ತಾರೆ’ ಎಂದರು ಸುದೀಪ್. ಈ ವೇಳೆ ಕೆಲವರು, ‘ಬಹುಶಃ ಸ್ನೇಹಿತ್ ಹೃದಯ ಒಡೆದು ಹೋಯಿತು’ ಎಂದು ಮಾತನಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸುದೀಪ್ ಬುದ್ಧಿವಾದಕ್ಕೂ ಇಲ್ಲ ಬೆಲೆ; ನಳಿಕೆ ತೆಗೆದ ಬಳಿಕ ಮೊದಲಿನಂತೇ ಆದ ನಮ್ರತಾ ಗೌಡ
ಸ್ನೇಹಿತ್ ಬಿಗ್ ಬಾಸ್ ಮನೆ ಒಳಗೆ ಬಂದಾಗ ಸಂಗೀತಾ ಜೊತೆ ಕ್ಲೋಸ್ ಆಗೋಕೆ ನೋಡಿದ್ದರು. ಆದರೆ ಈ ವೇಳೆ ಕಾರ್ತಿಕ್ ಎಂಟ್ರಿ ಆಯಿತು. ಆ ಬಳಿಕ ಈಶಾನಿ ಜೊತೆ ಫ್ರೆಂಡ್ಶಿಪ್ ಬೆಳೆಸಿಕೊಳ್ಳಲು ಹೋದರು. ಆಗ ಮೈಕೆಲ್ ಅವರು ಬಂದರು. ಈಗ ನಮ್ರತಾ ಗೌಡ ಜೊತೆ ಕ್ಲೋಸ್ ಆಗಲು ಪ್ರಯತ್ನಿಸುತ್ತಿದ್ದಾರೆ. ಸದಾ ಅವರ ಜೊತೆಯೇ ಸುತ್ತಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ