ಸುದೀಪ್ ಬುದ್ಧಿವಾದಕ್ಕೂ ಇಲ್ಲ ಬೆಲೆ; ನಳಿಕೆ ತೆಗೆದ ಬಳಿಕ ಮೊದಲಿನಂತೇ ಆದ ನಮ್ರತಾ ಗೌಡ

ನಮ್ರತಾ ಅವರಿಗೆ ಎರಡು ವಾರದ ಹಿಂದೆ ವೀಕ್ಷಕರ ಕಡೆಯಿಂದ ಚಮಚ ಗಿಫ್ಟ್ ಬಂದಿತ್ತು. ‘ದಾದಾಗಿರಿ ಮಾಡದಿದ್ದರೂ ತೊಂದರೆ ಇಲ್ಲ ಚಮಚಾಗಿರಿ ಮಾಡಬೇಡಿ’ ಎಂದು ಕಿವಿಮಾತು ಹೇಳಿದ್ದರು. ಇದನ್ನು ಅವರು ಗಂಭೀರವಾಗಿ ಸ್ವೀಕರಿಸಿಲ್ಲ.

ಸುದೀಪ್ ಬುದ್ಧಿವಾದಕ್ಕೂ ಇಲ್ಲ ಬೆಲೆ; ನಳಿಕೆ ತೆಗೆದ ಬಳಿಕ ಮೊದಲಿನಂತೇ ಆದ ನಮ್ರತಾ ಗೌಡ
ವಿನಯ್, ನಮ್ರತಾ, ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 07, 2023 | 2:43 PM

ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್​ನಲ್ಲಿ ಯಾಕೋ ಬದಲಾಗುವ ರೀತಿ ಕಾಣುತ್ತಿಲ್ಲ. ಅವರು ಹಳೆಯ ಚಾಳಿಯನ್ನು ಮುಂದುವರಿಸಿಕೊಂಡು ಹೋಗುವ ಸೂಚನೆ ಸಿಕ್ಕಿದೆ. ಕಳೆದ ವಾರ ಸುದೀಪ್ ಅವರು ಶ್ರಮ ಹಾಕಿ, ಸಮಯ ವ್ಯರ್ಥ ಮಾಡಿ ನಮ್ರತಾಗೆ ಬುದ್ಧಿವಾದ ಹೇಳಿದ್ದರು. ಆದರೆ, ಯಾಕೋ ಆ ಬುದ್ಧಿವಾದವನ್ನು ನಮ್ರತಾ ಅವರು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟಂತೆ ಇದೆ. ಅವರು ಚಮಚಾಗಿರಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಗುಂಪು ಕೂಡ ಹಾಗೆಯೇ ಇದೆ. ಈ ಬಗ್ಗೆ ತನಿಷಾ ಅವರು ನಮ್ರತಾಗೆ ಎಚ್ಚರಿಕೆ ನೀಡಿದ್ದಾರೆ.

ನಮ್ರತಾ ಅವರಿಗೆ ಎರಡು ವಾರದ ಹಿಂದೆ ವೀಕ್ಷಕರ ಕಡೆಯಿಂದ ಚಮಚ ಗಿಫ್ಟ್ ಬಂದಿತ್ತು. ‘ದಾದಾಗಿರಿ ಮಾಡದಿದ್ದರೂ ತೊಂದರೆ ಇಲ್ಲ ಚಮಚಾಗಿರಿ ಮಾಡಬೇಡಿ’ ಎಂದು ಕಿವಿಮಾತು ಹೇಳಿದ್ದರು. ಇದನ್ನು ಅವರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಇದರ ಪರಿಣಾಮವನ್ನು ಅವರು ಎದುರಿಸಿದ್ದರು. ಕಳೆದ ವಾರ ನಮ್ರತಾ ಗೌಡ ಅವರು ವಿನಯ್ ಅವರು ಹೇಳಿದ್ದೆಲ್ಲ ಸರಿ ಎಂದು ತಲೆ ಅಲ್ಲಾಡಿಸಿದ್ದರು. ಮೈಕೆಲ್ ಹೆಣ್ಣುಮಕ್ಕಳಿಗೆ ಗೌರವ ನೀಡಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದ ಅವರು, ವಿನಯ್ ಮಹಿಳಾ ಸ್ಪರ್ಧಿಗಳಿಗೆ ಗೌರವ ಕೊಡದೇ ಇದ್ದಾಗ ಸುಮ್ಮನಿದ್ದರು. ಈ ಮೂಲಕ ವಿನಯ ಅವರ ಚಮಚ ಆದರು.

ಕಳೆದ ವೀಕೆಂಡ್​ನಲ್ಲಿ ಇದೇ ವಿಚಾರ ಇಟ್ಟುಕೊಂಡು ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರು. ‘ನಮ್ರತಾ ಅವರೇ ನೀವು ವಿನಯ್ ಪರ ವಹಿಸಿಕೊಂಡು ಮಾತನಾಡಿದಿರಿ. ಅವರು ಹೇಳಿದ್ದೆಲ್ಲವನ್ನೂ ಸರಿ ಎಂದಿರಿ. ಇಡೀ ವಾರ ನಮಗೆ, ವೀಕ್ಷಕರಿಗೆ ಕಂಡಿದ್ದು ನಿಮ್ಮ ಕೈಯಲ್ಲಿರುವ ಚಮಚ ಮಾತ್ರ’ ಎಂದು ಬುದ್ಧಿವಾದ ಹೇಳಿದರು ಸುದೀಪ್. ಇದನ್ನು ತಿದ್ದಿಕೊಳ್ಳುವುದಾಗಿ ನಮ್ರತಾ ಹೇಳಿಕೊಂಡಿದ್ದರು. ಆದರೆ, ಅವರು ಬದಲಾಗಿಲ್ಲ.

ತನಿಷಾ ಹಾಗೂ ವಿನಯ್ ಮಧ್ಯೆ ಮಾತಿನ ಕಿತ್ತಾಟ ನಡೆಯುತ್ತಿತ್ತು. ಧಿಮಾಕಿನಿಂದ ವಿನಯ್ ಮಾತನಾಡುತ್ತಿದ್ದರು. ತನಿಷಾ ಅವರನ್ನು ನೋಡಿ ನಮ್ರತಾ ಜೋರಾಗಿ ನಕ್ಕರು. ಇದಕ್ಕೆ ತನಿಷಾ ಅವರು ಸಿಟ್ಟಾದರು. ‘ಎಕ್ಸ್​ಪ್ರೆಷನ್ ಕೊಡೋರು ಒಂದಿನ ಹಳ್ಳಕ್ಕೆ ಬೀಳ್ತೀರಲ್ಲ ಆಗ ಗೊತ್ತಾಗುತ್ತದೆ. ಆನೆ ಬಾಲ ಹಿಡ್ಕೊಂಡು ಓಡಾಡೋದಲ್ಲ. ಮಾತಾಡೋಕೆ ತಾಕತ್ತು ಬೇಕು’ ಎಂದು ಅವರು ಖಡಕ್ ಆಗಿ ಹೇಳಿದರು.

ಸೋಮವಾರದ ಎಪಿಸೋಡ್ ನೋಡಿದ ಬಳಿಕ ಅನೇಕರಿಗೆ ನಮ್ರತಾ ಬದಲಾಗುವುದಿಲ್ಲ ಅನ್ನೋದು ಪಕ್ಕಾ ಆಗಿದೆ. ಈ ಕಾರಣದಿಂದಲೇ ನಾಮಿನೇಷನ್​ನಲ್ಲಿ ನಮ್ರತಾ ಅವರಿಗೆ ಹೆಚ್ಚು ವೋಟ್ ಬಿದ್ದಿದೆ. ಸುದೀಪ್ ಅವರು ಅಷ್ಟೆಲ್ಲಾ ಶ್ರಮ ಹಾಕಿ ಹೇಳಿದ್ದು ವ್ಯರ್ಥವಾಗುತ್ತಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ನಮ್ರತಾ ಕೈಯಲ್ಲಿ ಈಗ ಉಳಿದಿರೋದು ಚಮಚ ಮಾತ್ರ; ಸುದೀಪ್ ಮಾತಿಗೆ ಮುಖದ ಬಣ್ಣವೇ ಬದಲಾಯ್ತು

ನಮ್ರತಾ ಗೌಡ ಅವರು ಧಾರಾವಾಹಿ ಮೂಲಕ ಫೇಮಸ್ ಆದವರು. ಅವರಿಗೆ ದೊಡ್ಡ ಅಭಿಮಾನಿವರ್ಗ ಇದೆ. ಆದರೆ, ಅವರು ಅದನ್ನು ದೊಡ್ಮನೆಯಲ್ಲಿ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಬೇರೆಯವರ ನೆರಳಲ್ಲಿ ಬೆಳೆಯುತ್ತಿದ್ದಾರೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:44 am, Tue, 7 November 23