ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್​ಗಿಲ್ಲ ಧೈರ್ಯ? ಎಲ್ಲರದ್ದೂ ಇದೇ ಅಭಿಪ್ರಾಯ

ಪ್ರತಾಪ್ ಅವರು ಜನರ ಫೇವರಿಟ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೆ, ಅವರು ಧೈರ್ಯದಿಂದ ಅಭಿಪ್ರಾಯವನ್ನು ತಿಳಿಸುವುದಿಲ್ಲ ಎಂದು ಅನೇಕರು ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಸಂಗೀತಾ, ತನಿಷಾ ಮೊದಲಾದವರು ಪ್ರತಾಪ್​ಗೆ ವೋಟ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್​ಗಿಲ್ಲ ಧೈರ್ಯ? ಎಲ್ಲರದ್ದೂ ಇದೇ ಅಭಿಪ್ರಾಯ
ಮಂಜು-ಪ್ರತಾಪ್
Follow us
|

Updated on:Nov 07, 2023 | 9:05 AM

ಬಿಗ್ ಬಾಸ್ ಕನ್ನಡ ಸೀಸನ್ 10’ ಐದನೇ ವಾರಕ್ಕೆ ಕಾಲಿಟ್ಟಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಶೋ ದಿನ ಕಳೆದಂತೆ ರಂಗು ಹೆಚ್ಚಿಸಿಕೊಂಡಿದೆ. ಕೆಲವು ಸ್ಪರ್ಧಿಗಳು ಜನಪ್ರಿಯತೆ ಪಡೆದರೆ ಇನ್ನೂ ಕೆಲವು ಸ್ಪರ್ಧಿಗಳು ಕುಖ್ಯಾತಿ ಪಡೆಯುತ್ತಿದ್ದಾರೆ. ಪ್ರತಾಪ್ (Drone Prathap) ಅವರು ಜನರ ಫೇವರಿಟ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೆ, ಅವರು ಧೈರ್ಯದಿಂದ ಅಭಿಪ್ರಾಯವನ್ನು ತಿಳಿಸುವುದಿಲ್ಲ ಎಂದು ಅನೇಕರು ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಸಂಗೀತಾ, ತನಿಷಾ ಮೊದಲಾದವರು ಪ್ರತಾಪ್​ಗೆ ವೋಟ್ ಮಾಡಿದ್ದಾರೆ.

ಬಿಗ್ ಬಾಸ್​ನಲ್ಲಿ ಪ್ರತಿ ಸೋಮವಾರ ಒಂದಷ್ಟು ಹೊಸ ಟಾಸ್ಕ್​ ಹಾಗೂ ಚಟುವಟಿಕೆ ನೀಡುತ್ತಾರೆ. ಈ ಸೋಮವಾರ (ನವೆಂಬರ್ 6) ಬಿಗ್ ಬಾಸ್ ಕಡೆಯಿಂದ ಹೊಸ ಆದೇಶ ಒಂದು ಬಂತು. ಈ ಆದೇಶದ ಪ್ರಕಾರ ಮನೆಯಲ್ಲಿ ಧೈರ್ಯದಿಂದ ಅಭಿಪ್ರಾಯ ತಿಳಿಸುವವರು ಹಾಗೂ ಅಭಿಪ್ರಾಯ ತಿಳಿಸದೇ ಇರುವವರು ಯಾರು ಎಂದು ನಿರ್ಧಾರ ಮಾಡಬೇಕಿತ್ತು. ಧೈರ್ಯದಿಂದ ಅಭಿಪ್ರಾಯ ತಿಳಿಸುವವರ ಸಾಲಿನಲ್ಲಿ ಮೊದಲು ಸಂಗೀತಾ, ಎರಡನೇ ವಿನಯ್ ಹಾಗೂ ಮೂರನೇ ಸ್ಥಾನದಲ್ಲಿ ತನಿಷಾ ಇದ್ದರು.

ಧೈರ್ಯದಿಂದ ಅಭಿಪ್ರಾಯ ತಿಳಿಸದೇ ಇರುವವರ ಸಾಲಿನಲ್ಲಿ ಮೊದಲು ಪ್ರತಾಪ್​ ಇದ್ದರೆ, ಎರಡನೇ ಸ್ಥಾನದಲ್ಲಿ ಸಂತೋಷ್ ಇದ್ದರು. ಮೂರನೇ ಸ್ಥಾನ ಈಶಾನಿಗೆ ಸಿಕ್ಕಿದೆ. ಪ್ರತಾಪ್​ ಅವರಿಗೆ ಹೆಚ್ಚು ವೋಟ್ ಬಿದ್ದಿದೆ. ಈ ಬಗ್ಗೆ ಅವರು ಬೇಸರ ಹೊರಹಾಕಿದ್ದಾರೆ. ‘ನಾನು ಎಲ್ಲರ ಜೊತೆ ಪ್ರಾಮಾಣಿಕವಾಗಿಲ್ಲ ಎಂದು ಯಾಕೆ ಅನಿಸಿತು’ ಎಂದು ಪ್ರತಾಪ್ ಕೇಳಿದ್ದಾರೆ. ಇದಕ್ಕೆ ಸಂಗೀತಾ ಹಾಗೂ ವಿನಯ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ವಿನಯ್ ಅಲ್ಲ, ಸಂಗೀತಾ ಬಿಗ್ ಬಾಸ್​ನಲ್ಲಿ ಅತಿ ಹೆಚ್ಚು ಹೇಟ್ ಮಾಡುವ ಸ್ಪರ್ಧಿ ಇವರೇ

‘ಇಲ್ಲಿ ಕೇಳಿರೋದು ಧೈರ್ಯದಿಂದ ಯಾರು ಅಭಿಪ್ರಾಯ ಹೇಳಲ್ಲ ಎಂದು. ನೀವು ಪ್ರಾಮಾಣಿಕವಾಗಿ ಇಲ್ಲ ಎಂದು ಯಾರೂ ಹೇಳುತ್ತಿಲ್ಲ’ ಎಂದರು ಸಂಗೀತಾ. ತುಕಾಲಿ ಸಂತೋಷ್ ಅವರು ಈ ವಿಚಾರದ ಬಗ್ಗೆ ಯಾವುದೇ ಬೇಸರ ಇಲ್ಲದೆ ಮನೆಯವರು ಕೊಟ್ಟ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ, ಪ್ರತಾಪ್​ಗೆ ಇದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಈ ಬಾರಿ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್​ನ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:46 am, Tue, 7 November 23