‘ನಾನು ನಿಮ್ಮ ಉದ್ಯೋಗಿ ಅಲ್ಲ’; ಸಂಗೀತಾ, ತನಿಷಾ ಜೊತೆ ಜಗಳಕ್ಕೆ ಇಳಿದ ಸ್ನೇಹಿತ್
ಬಿಗ್ ಬಾಸ್ ಮನೆಯಲ್ಲಿ ಲೈಟ್ ಆಫ್ ಆದ ಬಳಿಕವೂ ಕೆಲವರು ಎಚ್ಚರ ಇರುತ್ತಾರೆ. ಹರಟೆ ಹೊಡೆಯುತ್ತಾ ಕುಳಿತಿರುತ್ತಾರೆ. ಇದರಿಂದ ಕೆಲವರಿಗೆ ತೊಂದರೆ ಆಗಿದ್ದಿದೆ. ಈಗ ದೊಡ್ಮನೆಯಲ್ಲಿ ಜಗಳ ಆಗೋಕೆ ಇದು ಕೂಡ ಕಾರಣ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಕಳೆದ ವಾರ ಅಚ್ಚರಿಯ ಎಲಿಮಿನೇಷ್ ಆಗಿದೆ. ರಕ್ಷಕ್ ಬುಲೆಟ್ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ. ಅವರು ಇಷ್ಟು ಬೇಗ ಎಲಿಮಿನೇಟ್ ಆಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಮನೆಯಲ್ಲಿ ಆನೆ ಎಂಬ ಪಟ್ಟ ಪಡೆದ ವಿನಯ್ (Vinay Gowda) ಅವರು ಎಲಿಮಿನೇಷನ್ನಿಂದ ಜಸ್ಟ್ ಪಾರಾಗಿದ್ದಾರೆ. ಈ ಬೆನ್ನಲ್ಲೇ ಮನೆಯ ವಾತಾವರಣ ನಿಧಾನವಾಗಿ ಬದಲಾಗುತ್ತಿದೆ. ಎಲ್ಲರಿಗೂ ಗಂಭೀರತೆಯ ಅರಿವಾಗಿದೆ. ಹೀಗಾಗಿ, ಆಟದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈಗ ದೊಡ್ಮನೆಯಲ್ಲಿ ಸ್ನೇಹಿತ್ ಸಿಟ್ಟಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಲೈಟ್ ಆಫ್ ಆದ ನಂತರವೇ ಮಲಗಬೇಕು. ಇದು ನಿಯಮ. ಹಾಗಂತ ಲೈಟ್ ಆಫ್ ಆದ ಬಳಿಕ ಮಲಗಲೇಬೇಕು ಎಂಬ ರೂಲ್ಸ್ ಇಲ್ಲ. ಹೀಗಾಗಿ, ಲೈಟ್ ಆಫ್ ಆದ ಬಳಿಕವೂ ಕೆಲವರು ಎಚ್ಚರ ಇರುತ್ತಾರೆ. ಹರಟೆ ಹೊಡೆಯುತ್ತಾ ಕುಳಿತಿರುತ್ತಾರೆ. ಇದರಿಂದ ಕೆಲವರಿಗೆ ತೊಂದರೆ ಆಗಿದ್ದಿದೆ. ಈಗ ದೊಡ್ಮನೆಯಲ್ಲಿ ಜಗಳ ಆಗೋಕೆ ಇದು ಕೂಡ ಕಾರಣ ಆಗಿದೆ.
‘ಕ್ಲಾಸ್ ಮಾನಿಟರ್ ಪೊಸಿಷನ್ನ ನಿಮಗೆ ನೀವೆ ಕೊಟ್ಟಿಕೊಂಡಿದ್ದೀರಾ. ಬಾಗಿಲು ಹಾಕಬೇಕು, ಇದೇ ಸಮಯಕ್ಕೆ ಮಲಗಬೇಕು ಎಂದು ರೂಲ್ಸ್ ಮಾಡಿದ್ದೀರಾ? ರೂಲ್ಸ್ ಮಾಡೋಕೆ ನೀವು ಬಿಗ್ ಬಾಸ್ ಅಲ್ಲ’ ಎಂದಿದ್ದಾರೆ ಸ್ನೇಹಿತ್. ‘ನಾವಿಲ್ಲಿ ರೂಲ್ಸ್ ಮಾಡುತ್ತಿಲ್ಲ’ ಎಂದಿದ್ದಾರೆ ಸಂಗೀತಾ ಹಾಗೂ ತನಿಷಾ. ‘ನಾನು ಯಾವುದೂ ಬಿಸ್ನೆಸ್ ನಡೆಸುತ್ತಿಲ್ಲ. ನಾವು ನಿಮ್ಮ ಉದ್ಯೋಗಿ ಅಲ್ಲ’ ಎಂದಿದ್ದಾರೆ ಸ್ನೇಹಿತ್. ಇವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದಕ್ಕೆ ಕಾರಣ ಏನು ಎಂಬುದು ಇವತ್ತಿನ ಎಪಿಸೋಡ್ನಲ್ಲಿ ಗೊತ್ತಾಗಲಿದೆ.
ಇದಕ್ಕಿದ್ದಂತೆ ಸ್ನೇಹಿತ್ ರೆಬೆಲ್ ಆಗೋಕೆ ಕಾರಣವೇನು?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/B0nU4uTk5j
— Colors Kannada (@ColorsKannada) November 6, 2023
ಇದನ್ನೂ ಓದಿ: ವಿನಯ್ ಅಲ್ಲ, ಸಂಗೀತಾ ಬಿಗ್ ಬಾಸ್ನಲ್ಲಿ ಅತಿ ಹೆಚ್ಚು ಹೇಟ್ ಮಾಡುವ ಸ್ಪರ್ಧಿ ಇವರೇ
ಕಳೆದ ವಾರ ಗುಂಪುಗಾರಿಕೆ ವಿಚಾರ ಚರ್ಚೆಗೆ ಬಂದಿತ್ತು. ಈ ವಾರವೂ ಅದು ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ವಿನಯ್ ಟಫ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಅವರನ್ನು ಅನೇಕರು ಬೆಂಬಲಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ‘ಬಿಗ್ ಬಾಸ್’ ಪ್ರಸಾರ ಕಾಣುತ್ತಿದ್ದು ಒಳ್ಳೆಯ ಟಿಆರ್ಪಿ ತಂದುಕೊಡುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ