‘ಪ್ರತಾಪ್ಗೆ ಕೊಡ್ತೀನಿ ಇಷ್ಟ್ರಲ್ಲೇ’ ಎಂದಿದ್ದ ರಕ್ಷಕ್; ಹೊಡೆದು ಹೊರಗೆ ಹೋಗೋ ಪ್ಲಾನ್ನಲ್ಲಿದ್ರಾ?
ಪ್ರತಾಪ್ ತಮಗೆ ಕೆಲಸ ಹೇಳಿದರು ಎಂದು ರಕ್ಷಕ್ ಕೋಪಕ್ಕೆ ಮಾಡಿಕೊಂಡಿದ್ದರು. ‘ಬೇಜಾನ್ ಕೊಬ್ಬು ತೋರಿಸ್ತಾ ಇದಾನೆ. ಅವನಿಗೆ ಇಷ್ಟ್ರಲ್ಲೇ ಕೊಡ್ತೀನಿ’ ಎಂದಿದ್ದರು ರಕ್ಷಕ್.
ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ. ಅವರು ಹೊರ ಹೋಗಿದ್ದು ಬಹುತೇಕರಿಗೆ ಖುಷಿ ನೀಡಿದೆ. ಅವರು ದೊಡ್ಮನೆಯಲ್ಲಿ ನಡೆದುಕೊಳ್ಳುತ್ತಿದ್ದ ರೀತಿ ಅನೇಕರಿಗೆ ಇಷ್ಟವಾಗುತ್ತಿರಲಿಲ್ಲ. ಡ್ರೋನ್ ಪ್ರತಾಪ್ನ (Drone Prathap) ಕಂಡರೆ ಅವರಿಗೆ ಸಿಟ್ಟಿತ್ತು. ಅವರಿಗೆ ಹೊಡೆಯುವ ಆಲೋಚನೆಯಲ್ಲೂ ರಕ್ಷಕ್ ಇದ್ದರು ಎನ್ನಲಾಗುತ್ತಿದೆ. ಅವರು ಆಡಿದ ಮಾತುಗಳು ಇದಕ್ಕೆ ಸಾಕ್ಷಿ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರು ಹೊರಹೋಗಿದ್ದೇ ಒಳ್ಳೆಯದಾಯಿತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.
ಶುಕ್ರವಾರ (ನವೆಂಬರ್ 3) ಪ್ರತಾಪ್ ಅವರು ಕಿಚನ್ನಲ್ಲಿ ಆಡಿದ ಮಾತು ಚರ್ಚೆ ಹುಟ್ಟುಹಾಕಿತ್ತು. ಪ್ರತಾಪ್ ತಮಗೆ ಕೆಲಸ ಹೇಳಿದರು ಎಂದು ರಕ್ಷಕ್ ಕೋಪಕ್ಕೆ ಮಾಡಿಕೊಂಡಿದ್ದರು. ‘ಬೇಜಾನ್ ಕೊಬ್ಬು ತೋರಿಸ್ತಾ ಇದಾನೆ. ಅವನಿಗೆ ಇಷ್ಟ್ರಲ್ಲೇ ಕೊಡ್ತೀನಿ’ ಎಂದಿದ್ದರು ರಕ್ಷಕ್. ಈ ಮಾತನ್ನು ವೀಕ್ಷಕರು ಗಮನಿಸಿದ್ದಾರೆ. ಶನಿವಾರದ (ನವೆಂಬರ್ 7) ಎಪಿಸೋಡ್ ಮುಗಿದ ಬಳಿಕವೂ ಅವರು ಇದೇ ರೀತಿಯ ಮಾತನ್ನು ಹೇಳಿದ್ದಾರೆ.
ತುಕಾಲಿ ಸಂತೋಷ್, ರಕ್ಷಕ್, ವಿನಯ್ ಮೊದಲಾದವರಿಗೆ ಕ್ಲಾಸ್ ತೆಗೆದುಕೊಂಡಿದ್ದರು ಸುದೀಪ್. ಇದರಿಂದ ರಕ್ಷಕ್ಗೆ ಏನು ಮಾಡಬೇಕು ಎನ್ನುವುದೇ ತಿಳಿದಿಲ್ಲ. ಹೀಗಾಗಿ, ಈ ಬಗ್ಗೆ ಅವರು ಸಂತೋಷ್ ಬಳಿ ಮಾತನಾಡಿದ್ದರು. ‘ನನಗೆ ಏನು ಮಾಡಬೇಕು ಅನ್ನೋದೆ ತಿಳಿಯುತ್ತಿಲ್ಲ. ಏನು ಮಾಡೋಣ ಹೇಳಿ. ಎಲ್ಲರ ಜೊತೆ ಮಾತಾಡುತ್ತಾ ಇದ್ದೀನಿ, ಎಲ್ಲರ ಜೊತೆ ಚೆನ್ನಾಗಿ ಬೆರೆಯುತ್ತಿದ್ದೇನೆ. ಆದರೂ ಅದು ಸರಿ ಆಗುತ್ತಿಲ್ಲ. ಯಾರಿಗಾದರೂ ಹೊಡೆದು ಹೊರಗೆ ಹೋಗೋಣವೇ’ ಎಂದು ಸಂತೋಷ್ ಬಳಿ ಕೇಳಿದ್ದರು.
ಇದನ್ನೂ ಓದಿ: ವಿನಯ್ ಅಲ್ಲ, ಸಂಗೀತಾ ಬಿಗ್ ಬಾಸ್ನಲ್ಲಿ ಅತಿ ಹೆಚ್ಚು ಹೇಟ್ ಮಾಡುವ ಸ್ಪರ್ಧಿ ಇವರೇ
ಬಿಗ್ ಬಾಸ್ ಮನೆಯಿಂದ ರಕ್ಷಕ್ ಔಟ್ ಆದ ಬಳಿಕ ಈ ವಿಚಾರ ಚರ್ಚೆಗೆ ಬರುತ್ತಿದೆ. ಅವರು ಔಟ್ ಆಗಿದ್ದು ಸರಿ ಇದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎರಡು ಗುಂಪು ರೂಪುಗೊಂಡಿದೆ. ವಿನಯ್ ಗುಂಪಲ್ಲಿ ರಕ್ಷಕ್ ಗುರುತಿಸಿಕೊಂಡಿದ್ದರು. ಈ ಗುಂಪಲ್ಲಿ ಒಬ್ಬರು ಔಟ್ ಆಗಿದ್ದು ಅನೇಕರಿಗೆ ಖುಷಿ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:36 am, Mon, 6 November 23