AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕನೇ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಹೋದವರ್ಯಾರು?

Bigg Boss: ಕಳೆದ ವಾರ ಬಿಗ್​ಬಾಸ್ ಮನೆ ಹಲವು ಜಗಳ, ಮೂದಲಿಕೆ, ಡ್ರಾಮಾಗಳಿಗೆ ಸಾಕ್ಷಿಯಾಯ್ತು. ಬಿಗ್​ಬಾಸ್ ಮನೆಯ ನಿಯಮದಂತೆ ಪ್ರತಿವಾರ ಒಬ್ಬರು ಮನೆಯಿಂದ ಹೊರಗೆ ಹೋಗಬೇಕು. ಈ ವಾರ ಮನೆಯಿಂದ ಹೊಗೆ ಹೋದವರು ಯಾರು?

ನಾಲ್ಕನೇ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಹೋದವರ್ಯಾರು?
ಬಿಗ್​ಬಾಸ್
ಮಂಜುನಾಥ ಸಿ.
|

Updated on: Nov 05, 2023 | 11:34 PM

Share

ಬಿಗ್​ಬಾಸ್ (BiggBoss) ಮನೆ ಈ ವಾರ ಹಲವು ಚಟುವಟಿಕೆಗಳಿಗೆ ಸಾಕ್ಷಿಯಾಯಿತು. ಟಾಸ್ಕ್​ಗಳು ಒಂದೆಡೆಯಾದರೆ ವಿನಯ್ ಹಾಗೂ ಸಂಗೀತಾರ ಜಗಳ. ವಿನಯ್-ನಮ್ರತಾರ ಹರಿತ ನಾಲಗೆಯಿಂದ ಹೊರಡಿದ ಮಾತುಗಳು, ತಂತ್ರ-ಕುತಂತ್ರ. ಪರಸ್ಪರ ನಿಂದನೆ, ಹೀಗಳಿಕೆ ಹೀಗೆ ಹಲವು ಕಾರಣಗಳಿಗೆ ಈ ವಾರದ ಬಿಗ್​ಬಾಸ್ ಎಪಿಸೋಡ್​ಗಳು ಗಮನ ಸೆಳೆದಿದ್ದವು. ಇವುಗಳ ನಡುವೆ ವಿನಯ್ ಆಡಿದ ಬಳೆಯ ಮಾತು ಭಾರಿ ಚರ್ಚೆಗೆ ಕಾರಣವಾಗಿತ್ತು. ಅದಕ್ಕೆ ತಕ್ಕಂತೆ ಸುದೀಪ್ ಸಹ ವಿನಯ್ ಅವರಿಗೆ ಮಾತಿನ ಛಾಟಿ ಬೀಸಿದ್ದಾರೆ. ಇದೀಗ ವಾರಾಂತ್ಯದಲ್ಲಿ ಮನೆಯ ನಿಯಮದಂತೆ ಒಬ್ಬ ಸದಸ್ಯರು ಮನೆಯಿಂದ ಹೊರ ಹೋಗಿದ್ದಾರೆ.

ಈ ವಾರ, ವಿನಯ್, ಕಾರ್ತಿಕ್, ಮೈಖಲ್, ರಕ್ಷಕ್, ಸ್ನೇಹಿತ್, ತುಕಾಲಿ ಸಂತು, ಸಿರಿ, ವರ್ತೂರು ಸಂತೋಷ್, ತನಿಷಾ, ನೀತು ಅವರುಗಳು ನಾಮಿನೇಟ್ ಆಗಿದ್ದರು. ಶನಿವಾರವೇ ಕಾರ್ತಿಕ್, ಸಿರಿ, ವರ್ತೂರು ಸಂತೋಷ್ ಅವರುಗಳು ಸೇಫ್ ಆದರು. ಬಹುತೇಕರು, ಈ ವಾರ ಸಿರಿ ಅಥವಾ ವರ್ತೂರು ಸಂತೋಷ್ ಹೊರ ಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷೆ, ಶನಿವಾರವೇ ಹುಸಿಯಾಯಿತು.

ಭಾನುವಾರದ ಎಪಿಸೋಡ್​ನಲ್ಲಿ ಸ್ನೇಹಿತ್, ಮೈಖಲ್, ತನಿಷಾ, ತುಕಾಲಿ ಸಂತು ಅವರುಗಳು ಮೊದಲಿಗೆ ಸೇಫ್ ಆದರು. ಆ ಬಳಿಕ ಅಂತಿಮವಾಗಿ ವಿನಯ್ ಹಾಗೂ ರಕ್ಷಕ್ ಮಾತ್ರವೇ ಉಳಿದರು. ಸುದೀಪ್ ಸೂಚನೆಯಂತೆ ಅವರನ್ನು ಆಕ್ಟಿವಿಟಿ ರೂಂಗೆ ಕಳಿಸಲಾಯ್ತು. ಅಲ್ಲಿ ಇಬ್ಬರ ಮೇಲೂ ಬೆಳಕು ಬಿಡಲಾಯ್ತು. ಇಬ್ಬರ ಮೇಲಿಂದಲೂ ಬೆಳಕು ಆರುತ್ತದೆ. ಯಾರ ಮೇಲೆ ಬೆಳಕು ಮತ್ತೆ ಬರುತ್ತದೆಯೋ ಅವರು ಉಳಿದುಕೊಳ್ಳುತ್ತಾರೆ ಎಂದು ಸುದೀಪ್ ಹೇಳಿದ್ದರು. ಅಂತೆಯೇ ವಿನಯ್ ಮೇಲೆ ಬೆಳಕು ಮತ್ತೆ ಬಂತು, ರಕ್ಷಕ್ ಆಕ್ಟಿವಿಟಿ ರೂಂನಿಂದ ಏಕಾ-ಏಕಿ ಮರೆಯಾದರು. ಅವರಿಗೆ ಬಿಗ್​ಬಾಸ್ ಸದಸ್ಯರಿಗೆ ಬಾಯ್ ಹೇಳುವ ಅವಕಾಶವೂ ಲಭಿಸಲಿಲ್ಲ.

ಇದನ್ನೂ ಓದಿ:ಬಿಗ್​ಬಾಸ್ ಮನೆಯ ಡವ್ ರಾಣಿ ನಮ್ರತಾ ಏಟಿಗೆ ಮನೆಯವರೆಲ್ಲ ಸುಸ್ತೋ-ಸುಸ್ತು

ರಕ್ಷಕ್ ಟಾಸ್ಕ್​ಗಳಲ್ಲಿ ಚೆನ್ನಾಗಿ ಆಡಿದರಾದರೂ ಅತ್ಯುತ್ತಮ ಎನ್ನುವಂಥಹಾ ಪ್ರದರ್ಶನ ಅವರಿಂದ ಬರಲಿಲ್ಲ. ಅಲ್ಲದೆ, ಅಶಿಸ್ತು ಸಹ ಕೆಲವು ಬಾರಿ ಪ್ರದರ್ಶಿಸಿದರು. ಪ್ರತಾಪ್ ಅನ್ನು ಬೈದದ್ದಾಗಲಿ, ಯಾರನ್ನಾದರೂ ಹೊಡೆದು ಹೊರಗೆ ಹೋಗುತ್ತೀನಿ ಎಂದಿದ್ದಾಗಲಿ ಪ್ರೇಕ್ಷಕರಿಗೆ ಇಷ್ಟವಾದಂತಿಲ್ಲ. ಪ್ರತಾಪ್ ಅನ್ನು ಹೊರಗೆ ಕಳಿಸಿದರು. ವಿಶೇಷವೆಂದರೆ ರಕ್ಷಕ್ ಇದೇ ಮೊದಲ ಬಾರಿಗೆ ನಾಮಿನೇಟ್ ಆಗಿದ್ದರು. ಮೊದಲ ಬಾರಿ ನಾಮಿನೇಟ್ ಆದಾಗಲೇ ಮನೆಯಿಂದ ಹೊರಗೆ ಹೋಗಿದ್ದಾರೆ. ಇದು ಸ್ವತಃ ರಕ್ಷಕ್​ಗೂ ಆಘಾತಕಾರಿ ಆಗಿತ್ತು.

ರಕ್ಷಕ್​ಗೆ ಯಾರನ್ನೂ ನೇರವಾಗಿ ನಾಮಿನೇಟ್ ಮಾಡುವ ಅಥವಾ ಈ ವಾರ ಯಾರನ್ನಾದರೂ ಉಳಿಸುವ ಅವಕಾಶವೂ ಸಹ ಲಭಿಸಲಿಲ್ಲ. ಮುಂದಿನ ವಾರದ ನಾಮಿನೇಷನ್ ಸೋಮವಾರದ ಎಪಿಸೋಡ್​ನಲ್ಲಿ ನಡೆಯಲಿದೆ. ಮನೆ ವಾರದಿಂದ ವಾರಕ್ಕೆ ಚಿಕ್ಕದಾಗುತ್ತಾ ಬರುತ್ತಿದೆ. ಮುಂದಿನ ವಾರ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಪ್ರಸಾರವಾಗುತ್ತಿದೆ. ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ