AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಲ್ಲಿ ಬಳೆ ಚರ್ಚೆ: ಬಳೆಗೆ ವಿಶೇಷ ಗೌರವ ನೀಡಿದ ಕಿಚ್ಚ ಸುದೀಪ್

Bigg Boss: ಬಿಗ್​ಬಾಸ್ ಮನೆಯಲ್ಲಿ ತಾನು ಆನೆ ಅಂದುಕೊಂಡು ಮೆರೆಯುತ್ತಿದ್ದ ವಿನಯ್​, ಅಹಂಕಾರದಲ್ಲಿ ಬಳೆಗಳ ಬಗ್ಗೆ ಅದನ್ನು ತೊಟ್ಟುಕೊಳ್ಳುವ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಸುದೀಪ್ ಅದೇ ಬಳೆಗಳಿಗೆ ವಿಶೇಷ ಗೌರವ ನೀಡಿ, ಬಳೆಗಳ ಮಹತ್ವ ಸಾರಿದರು.

ಬಿಗ್​ಬಾಸ್ ಮನೆಯಲ್ಲಿ ಬಳೆ ಚರ್ಚೆ: ಬಳೆಗೆ ವಿಶೇಷ ಗೌರವ ನೀಡಿದ ಕಿಚ್ಚ ಸುದೀಪ್
ಬಳೆ
ಮಂಜುನಾಥ ಸಿ.
|

Updated on:Nov 04, 2023 | 11:51 PM

Share

ಬಿಗ್​ಬಾಸ್ (Bigg Boss) ಮನೆಯಲ್ಲಿ ವಿನಯ್ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಟಾಸ್ಕ್ ಒಂದನ್ನು ಆಡುವಾಗ ಎದುರಾಳಿ ತಂಡದ ಕಾರ್ತಿಕ್ ಅನ್ನು ಅವಮಾನಗೊಳಿಸುವ ಉದ್ದೇಶದಿಂದ ಬಳೆ ಹಾಕ್ಕೊಂಡು ಆಡು, ಬಳೆಗಳ ರಾಜ ಎಂದೆಲ್ಲ ವಿನಯ್ (Vinay) ಕರೆದಿದ್ದರು. ಆ ಮೂಲಕ ಬಳೆ ತೊಡುವವರೆಂದರೆ ಅಸಮರ್ಥರು, ಬಲಹೀನರು ಎಂಬರ್ಥದ ಮಾತುಗಳನ್ನು ಆಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ವಿನಯ್​ ಆಡಿದ ಮಾತನ್ನು ಸಂಗೀತಾ ಹೊರತಾಗಿ ಇನ್ಯಾರು ವಿರೋಧಿಸಿರಲಿಲ್ಲ. ಹಾಗಾಗಿ ಈ ವಿಷಯದ ಬಗ್ಗೆ ಸುದೀಪ್ ನಿಲುವೇನು ಎಂಬುದು ಜನರ ನಿರೀಕ್ಷೆಯಾಗಿತ್ತು. ನಿರೀಕ್ಷೆಗೆ ತಕ್ಕಂತೆ ಸುದೀಪ್ ಘನತೆಯಿಂದ ವಿಷಯವನ್ನು ಸಂಭಾಳಿಸಿರುವ ಜೊತೆಗೆ ಬಳೆಗೆ ಒಂದು ವಿಶೇಷ ಗೌರವವನ್ನು ಸಹ ಕೊಟ್ಟಿದ್ದಾರೆ.

ಬಳೆಯ ವಿಷಯ ತೆಗೆದಿದ್ದ ವಿನಯ್​ಗೆ ಮಾತಿನ ಚಾಟಿ ಬೀಸಿದ ಸುದೀಪ್, ವಿನಯ್​ ಸ್ವತಃ ತಾವಾಗಿಯೇ ಕ್ಷಮೆ ಕೇಳುವಂತೆ ಮಾಡಿದರು. ಬಳಿಕ ಬಳೆಯ ಮಹತ್ವದ ಜೊತೆಗೆ ಮಹಿಳೆಯ ಮಹತ್ವದ ಬಗ್ಗೆಯೂ ಬಿಗ್​ಬಾಸ್ ಮನೆಯ ಕೆಲವರಿಗೆ ಮನದಟ್ಟು ಮಾಡಿದ ಸುದೀಪ್, ಪ್ರತಿ ವಾರ ನೀಡುವಂತೆ ಈ ವಾರವೂ ಕಿಚ್ಚನ ಚಪ್ಪಾಳೆ ನೀಡಿದರು. ಆದರೆ ಈ ಬಾರಿ ತುಸು ವಿಶೇಷವಾಗಿತ್ತು.

ವಿನಯ್​ಗೆ ಸ್ಟೋರ್​ ರೂಂನಲ್ಲಿದ್ದ ಫೋಟೊ ಒಂದನ್ನು ತೆಗೆದುಕೊಂಡು ಬರುವಂತೆ ಹೇಳಿದರು ಸುದೀಪ್, ಅದನ್ನು ವಿನಯ್​ರಿಂದಲೇ ಓಪನ್ ಮಾಡಿಸಿದರು. ಅದರಲ್ಲಿ ವಿನಯ್, ಬಳೆಯ ಬಗ್ಗೆ ವಿನಯ್ ಮಾತನಾಡಿದಾಗ ಅದನ್ನು ವಿರೋಧ ಮಾಡಿದ ಸಂಗೀತಾ ತಾವು ತೊಟ್ಟುಕೊಂಡಿದ್ದ ಹಸಿರು ಬಳೆಗಳನ್ನು ಕೈಎತ್ತಿ ತೋರಿಸಿದ ಚಿತ್ರವಿತ್ತು. ಈ ವಾರದ ಕಿಚ್ಚ ಸುದೀಪ್​ರ ಕಿಚ್ಚನ ಚಪ್ಪಾಳೆ ಬಳೆಗಳಿಗಾಗಿತ್ತು. ಆ ಬಳೆಗಳ ಚಿತ್ರವನ್ನು ವಾಲ್ ಆಫ್​ ಫೇಮ್​ಗೆ ಸಹ ತೂಗು ಹಾಕಲಾಯಿತು. ಯಾರೂ ನಿರೀಕ್ಷಿಸದ ರೀತಿಯಲ್ಲಿ ಸುದೀಪ್​ ಬಳೆಗಳಿಗೆ ಆ ಮೂಲಕ ಮಹಿಳೆಯರಿಗೆ, ಮಹಿಳಾ ಶಕ್ತಿಗೆ ಗೌರವ ನೀಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯ ಡವ್ ರಾಣಿ ನಮ್ರತಾ ಏಟಿಗೆ ಮನೆಯವರೆಲ್ಲ ಸುಸ್ತೋ-ಸುಸ್ತು

ಮಾತ್ರವೇ ಅಲ್ಲದೆ, ಬಳೆಗಳ ಬಗ್ಗೆ ಆ ಮೂಲಕ ಮಹಿಳೆಯರ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ ವಿನಯ್​ಗೆ ಸರಿಯಾಗಿ ಬುದ್ಧಿ ಹೇಳಿದ ಜೊತೆಗೆ, ವಿನಯ್ ಹಾಗೆ ಮಾತನಾಡಿದಾಗ ವಿರೋಧ ವ್ಯಕ್ತಪಡಿಸದೆ ಅವರೊಂದಿಗೆ ಸೇರಿ ನಗುತ್ತಿದ್ದ ನಮ್ರತಾ, ತುಕಾಲಿ ಸಂತುಗೂ ಸಹ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಇದರ ಜೊತೆಗೆ ವಿನಯ್​ರ ಆ ಮಾತನ್ನು ವಿರೋಧಿಸಿದ ಬಿಗ್​ಬಾಸ್ ಮನೆಯ ಏಕೈಕ ವ್ಯಕ್ತಿ ಸಂಗೀತಾ ಶೃಂಗೇರಿಯ ಬಗ್ಗೆ ಮೆಚ್ಚುಗೆಯನ್ನು ಸಹ ಕಿಚ್ಚ ಸುದೀಪ್ ವ್ಯಕ್ತಪಡಿಸಿದರು.

ಇನ್ನು ವಿನಯ್​, ಮಹಿಳೆಯರಿಗೆ ಅಪಮಾನ ಮಾಡಿದರೆ, ಇದೇ ವಾರ ತಮಗೆ ಸಿಕ್ಕ ನಾಮಿನೇಷನ್ ಪಾಸ್​ಗಳನ್ನು ಮಹಿಳೆಯರಿಗೆ ನೀಡಿ ಅವರಿಗೆ ಗೌರವ ನೀಡಿದ ಡ್ರೋನ್ ಪ್ರತಾಪ್​ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದರು ಸುದೀಪ್. ಒಟ್ಟಾರೆ ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಆಡಿದ ಮಾತುಗಳು, ನಡೆದುಕೊಂಡ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:50 pm, Sat, 4 November 23

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ