AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯ ‘ಡವ್ ರಾಣಿ’ ನಮ್ರತಾ ಏಟಿಗೆ ಮನೆಯವರೆಲ್ಲ ಸುಸ್ತೋ-ಸುಸ್ತು

Bigg Boss: ನಮ್ರತಾ, ಬಿಗ್​ಬಾಸ್​ ಮನೆಯ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರು. ಆದರೆ ನಮ್ರತಾ ಬಿಗ್​ಬಾಸ್ ಮನೆಯ ಡವ್ ರಾಣಿ ಎಂಬ ಬಿರುದಿಗೆ ಪಾತ್ರವಾಗಿದ್ದಾರೆ. ಏಕೆ? ಹೇಗೆ?

ಬಿಗ್​ಬಾಸ್ ಮನೆಯ 'ಡವ್ ರಾಣಿ' ನಮ್ರತಾ ಏಟಿಗೆ ಮನೆಯವರೆಲ್ಲ ಸುಸ್ತೋ-ಸುಸ್ತು
Follow us
ಮಂಜುನಾಥ ಸಿ.
|

Updated on: Nov 03, 2023 | 11:58 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಕಳೆದ ವಾರ ವಿನಯ್ ಗೌಡ ಜೊತೆಗೆ ನಮ್ರತಾ ಗೌಡ ಸಹ ಸಖತ್ ಸದ್ದು ಮಾಡಿದರು. ಸಂಗೀತಾ ಹಾಗೂ ಕಾರ್ತಿಕ್ ಜೊತೆ ಜಗಳ ಮಾಡಿದ್ದು ಆ ಬಳಿಕ ಅವರಿಬ್ಬರ ಬಗ್ಗೆ ಇತತರರೊಟ್ಟಿಗೆ ಮಾತನಾಡಿ ಅಭಿಪ್ರಾಯ ಬಿತ್ತುವ ಕಾರ್ಯವನ್ನು ನಮ್ರತಾ ಮಾಡಿದರು. ಇದೀಗ ಟಾಸ್ಕ್​ಗಳೆಲ್ಲವೂ ಮುಗಿದಿದ್ದು, ವಾರಾಂತ್ಯದ ಕಿಚ್ಚನ ಪಂಚಾಯಿತಿಗೆ ಬಿಗ್​ಬಾಸ್ ಮನೆ ಸದಸ್ಯರು ಕಾಯುತ್ತಿದ್ದಾರೆ. ಈ ನಡುವೆ ನಮ್ರತಾ ಬಿಗ್​ಬಾಸ್ ಮನೆಯ ಸದಸ್ಯರನ್ನು ಸಖತ್ ಆಗಿ ಫೂಲ್ ಮಾಡಿದ್ದಾರೆ. ಇದರಿಂದಾಗಿ ‘ಡವ್ ರಾಣಿ’ ಎಂಬ ಬಿರುದು ಸಹ ಗಳಿಸಿದ್ದಾರೆ.

ಟಾಸ್ಕ್​ಗಳೆಲ್ಲವೂ ಮುಗಿದು ಸ್ಪರ್ಧಿಗಳೆಲ್ಲ ಆರಾಮವಾಗಿ ಮಧ್ಯರಾತ್ರಿ ಮಾತನಾಡುತ್ತಾ ಕೂತಿದ್ದಾಗ ನಮ್ರತಾ, ಇಂದು ನನ್ನ ಹುಟ್ಟುಹಬ್ಬ ಎಂದರು. ಎಲ್ಲರೂ ಗಂಭೀರವಾಗಿ ಪರಿಗಣಿಸಿ ಹುಟ್ಟುಹಬ್ಬ ಶುಭಾಶಯಗಳನ್ನು ಕೋರಿದರು. ನಮ್ರತಾ ಜೊತೆ ಜೋರು ಜಗಳ ಮಾಡಿದ್ದ ಸಂಗೀತಾ ಸಹ ಬಂದು ಶುಭಾಶಯ ಕೋರಿದರು ಮಾತ್ರವೇ ಅಲ್ಲದೆ, ಆಪಲ್ ಒಂದನ್ನು ಉಡುಗೊರೆಯಾಗಿ ಸಹ ನೀಡಿದರು. ಅದನ್ನೇ ಕತ್ತರಿಸಿ ಮಧ್ಯರಾತ್ರಿ ಹುಟ್ಟುಹಬ್ಬವನ್ನು ಆಚರಿಸಿದರು.

ಅದಾದ ಬಳಿಕ ಮಾರನೇಯ ದಿನ ಬೆಳಿಗ್ಗೆ ಸಹ ಮನೆಯ ಸದಸ್ಯರು ನಮ್ರತಾಗೆ ಗುಲಾಬ್ ಜಾಮೂನ್ ತಿನ್ನಿಸಿ ನಮ್ರತಾರ ಹುಟ್ಟುಹಬ್ಬ ಆಚರಣೆ ಮಾಡಿದರು. ತುಕಾಲಿ ಸಂತು ಬಹಳ ಭಾವುಕರಾಗಿ ನಮ್ರತಾ ಜೊತೆಗಿನ ತಮ್ಮ ಬಂಧವನ್ನು ಬಿಚ್ಚಿಟ್ಟರು, ನಮ್ರತಾ ಸಹ ಕಣ್ಣೀರು ಹಾಕಿಬಿಟ್ಟರು. ನಮ್ರತಾರ ಕಣ್ಣೀರನ್ನು ಮನೆಯರೆಲ್ಲ ನಿಜ ಅಂದುಕೊಂಡರು. ಬಳಿಕ ಸ್ನೇಹಿತ್, ನಮ್ರತಾರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, ಕಾರ್ತಿಕ್ ಅನ್ನು ಸೋಲಿಸಿ ಬಂದು ನಿನಗಾಗಿ ಸೋಲಿಸಿದೆ ಎಂದೆ ಅದು ನಿನಗೆ ಬೇಸರ ತರಲಿಲ್ಲ ತಾನೆ ಎಂದೆಲ್ಲ ಪ್ರೀತಿಯಿಂದ ಮಾತನಾಡಿದರು. ನಮ್ರತಾ ಸಹ ನನಗಾಗಿ ಯಾರೂ ಫೈಟ್ ಮಾಡಿರಲಿಲ್ಲ, ನೀನು ಮಾಡಿದೆ ಖುಷಿಯಾಯಿತು ಎಂದರು.

ಇದನ್ನೂ ಓದಿ:ನಮ್ರತಾ ಗೌಡ ಬಗ್ಗೆ ಸ್ನೇಹಿತ್​ ಮನಸ್ಸಿನಲ್ಲಿ ಮೂಡಿದೆಯಾ ಪ್ರೀತಿ? ಇಲ್ಲಿದೆ ವಿಡಿಯೋ ಸಾಕ್ಷಿ

ಬಳಿಕ ಸ್ನೇಹಿತ್ ಇಂದು ಸಂಜೆ ನಿನಗೆ ಒಂದು ಸರ್ಪ್ರೈಸ್ ಇದೆ ಎಂದರು. ನಮ್ರತಾ ಅಯ್ಯೋ ಅದೆಲ್ಲ ಬೇಡ ಎಂದು ಹೇಳಿದರು ಸಹ ನೀನು ಸರ್ಪ್ರೈಸ್ ನೋಡಿ ಆಶ್ಚರ್ಯ ಪಡಬೇಡ ಎಂದೆಲ್ಲ ಹೇಳಿ ಒಪ್ಪಿಸಿದ. ಅದಾದ ಬಳಿಕ ವಿನಯ್, ತುಕಾಲಿ, ನಮ್ರತಾ ಕೂತಿದ್ದಾಗ ಬಿಗ್​ಬಾಸ್ ಧ್ವನಿ ಬಂತು, ‘ನಮ್ರತಾ ನೀವು ಬಿಗ್​ಬಾಸ್ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಖುಷಿ ತಂದಿದೆ. 167 ದಿನಗಳ ಮುಂಚಿತವಾಗಿ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದರು. ಅದಾದ ಬಳಿಕ ಕೂಡಲೇ ‘ಡವ್ ರಾಣಿ’ ಹಾಡು ಪ್ಲೇ ಮಾಡಿದರು.

ಕೂಡಲೇ ನಮ್ರತಾ, ಎದ್ದು ಕುಣಿಯಲು ಪ್ರಾರಂಭ ಮಾಡಿದರು. ಆಗಲೆ ಮನೆಯ ಸದಸ್ಯರಿಗೆ ಗೊತ್ತಾಗಿದ್ದು, ನಮ್ರತಾರ ಹುಟ್ಟುಹಬ್ಬ ಇಂದಲ್ಲ, ಬದಲಿಗೆ ಸುಮ್ಮನೆ ಮನೆಯ ಸದಸ್ಯರನ್ನು ಬಕರಾ ಮಾಡಿದ್ದಾರೆ ಎಂದು. ನಮ್ರತಾ ಸಹ ಆ ಬಳಿಕ ಹೇಳಿದರು. ಸಿರಿ ಹಾಗೂ ರಕ್ಷಕ್​ಗೆ ಮಾತ್ರವೇ ನನ್ನ ಹುಟ್ಟುಹಬ್ಬ ಇಂದಲ್ಲ ನಾನು ಡ್ರಾಮಾ ಮಾಡುತ್ತಿದ್ದೇನೆ ಎಂದು ಗೊತ್ತಿತ್ತು ಎಂದು ಗುಟ್ಟು ರಿವೀಲ್ ಮಾಡಿದರು. ತನಿಷಾ, ಇನ್ನು ಮುಂದೆ ನಮ್ರತಾರನ್ನು ಡವ್ ರಾಣಿ ಎಂದೇ ಕರೆಯುವುದಾಗಿ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ