ತಪ್ಪು ಮಾಡಿಲ್ಲ ಎಂದರೆ ಭಯವೇಕೆ? ಸೋಶಿಯಲ್ ಮೀಡಿಯಾದಲ್ಲಿ ನಮ್ರತಾನ ಪ್ರಶ್ನೆ ಮಾಡಂಗಿಲ್ಲ

ಬಿಗ್ ಬಾಸ್​ನಲ್ಲಿ ವಿನಯ್ ಗೌಡ ಅವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟವಾಗಿಲ್ಲ. ಅವರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಆದಾಗ್ಯೂ ನಮ್ರತಾ ಅವರು ವಿನಯ್​ಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ವಿನಯ್ ಹೇಳಿದ ಎಲ್ಲ ವಿಚಾರವನ್ನೂ ಒಪ್ಪಿಕೊಳ್ಳುತ್ತಿದ್ದಾರೆ.

ತಪ್ಪು ಮಾಡಿಲ್ಲ ಎಂದರೆ ಭಯವೇಕೆ? ಸೋಶಿಯಲ್ ಮೀಡಿಯಾದಲ್ಲಿ ನಮ್ರತಾನ ಪ್ರಶ್ನೆ ಮಾಡಂಗಿಲ್ಲ
ನಮ್ರತಾ ಗೌಡ
Follow us
ರಾಜೇಶ್ ದುಗ್ಗುಮನೆ
|

Updated on: Nov 04, 2023 | 8:14 AM

ಕಳೆದ ವಾರ ನಮ್ರತಾ ಗೌಡಗೆ (Namratha Gowda) ವೀಕ್ಷಕರಿಂದ ಒಂದು ಗಿಫ್ಟ್ ಸಿಕ್ಕಿತ್ತು. ಅದು ಸ್ಪೂನ್. ಇದರ ಜೊತೆ ಒಂದು ಲೆಟರ್ ಕೂಡ ಇತ್ತು. ‘ನಿಮಗೆ ದಾದಾಗಿರಿ ಮಾಡಲು ಬಂದಿಲ್ಲ ಎಂದರೂ ತೊಂದರೆ ಇಲ್ಲ ಚಮಚಾಗಿರಿ ಮಾತ್ರ ಮಾಡಬೇಡಿ’ ಎಂದು ಅವರಿಗೆ ಪ್ರೇಕ್ಷಕರು ಕಿವಿಮಾತು ಹೇಳಿದ್ದರು. ಆದರೂ ಇದನ್ನು ನಮ್ರತಾ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಮಧ್ಯೆ ನಮ್ರತಾ ಕಡೆಯವರು ಟ್ರೋಲ್​ಗೆ ಹೆದರಿದಂತಿದೆ. ಅಭಿಮಾನಿಗಳು ಪ್ರಶ್ನೆಯನ್ನೇ ಕೇಳದಂತೆ, ತಮ್ಮ ಅಭಿಪ್ರಾಯ ತಿಳಿಸದಂತೆ ಮಾಡಿಬಿಟ್ಟಿದ್ದಾರೆ.

ಬಿಗ್ ಬಾಸ್​ನಲ್ಲಿ ವಿನಯ್ ಗೌಡ ಅವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟವಾಗಿಲ್ಲ. ಅವರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಆದಾಗ್ಯೂ ನಮ್ರತಾ ಅವರು ವಿನಯ್​ಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ವಿನಯ್ ಹೇಳಿದ ಎಲ್ಲ ವಿಚಾರವನ್ನೂ ಒಪ್ಪಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅನೇಕರು ಟೀಕೆ ಮಾಡುತ್ತಿದ್ದಾರೆ. ಕಳೆದ ವಾರ ವೀಕ್ಷಕರು ಹೇಳಿದ ಕಿವಿಮಾತನ್ನು ಅವರು ಮರೆತಂತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಅಭಿಪ್ರಾಯ ತಿಳಿಸೋಣ ಎಂದರೆ ನಮ್ರತಾ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುವವರು ಇದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ.

ನಮ್ರತಾ ಗೌಡ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಬೇರೆಯವರ ಕೈಗೆ ಸೋಶಿಯಲ್ ಮೀಡಿಯಾನ ನಿಭಾಯಿಸುವ ಜವಾಬ್ದಾರಿಯನ್ನು ನೀಡಿ ಹೋಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಹಲವು ಫೋಟೋಗಳನ್ನು ಅವರು ಹಾಕುತ್ತಿದ್ದಾರೆ. ಆದರೆ ಯಾವ ಪೋಸ್ಟ್​ಗೂ ವೀಕ್ಷಕರು ಕಮೆಂಟ್ ಮಾಡೋ ಆಯ್ಕೆ ನೀಡಿಲ್ಲ. ಅವರು ಯಾರನ್ನು ಫಾಲೋ ಮಾಡುತ್ತಾರೋ ಅವರು ಮಾತ್ರ ಕಮೆಂಟ್ ಮಾಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ‘ಬಾಯಿನೇ ಮುಚ್ಚಲ್ವಲ್ಲ ಗುರು, ಅವಳು ಯಾರು ಡಾಮಿನೇಟ್ ಮಾಡೋಕೆ’ ತನಿಷಾ ಮೇಲೆ ನಮ್ರತಾ ಕೋಪ

ಯಾವುದಾದರೂ ಬಿಗ್ ಬಾಸ್ ಸ್ಪರ್ಧಿ ಸರಿಯಾಗಿ ಆಡುತ್ತಿಲ್ಲ ಎಂದರೆ ಅಂಥ ಸಂದರ್ಭದಲ್ಲಿ ಅವರ ಸೋಶಿಯಲ್ ಮೀಡಿಯಾ ಪೋಸ್ಟ್​ಗಳಿಗೆ ನೆಗೆಟಿವ್ ಕಮೆಂಟ್​ಗಳು ಬರುತ್ತವೆ. ನಮ್ರತಾ ಗೌಡ ಆಟದ ವೈಖರಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬರುವ ನೆಗೆಟಿವ್ ಮಾತುಗಳಿಂದ ತಪ್ಪಿಸಿಕೊಳ್ಳಲು ಕಮೆಂಟ್ ಆಯ್ಕೆ ಆಫ್ ಮಾಡಲಾಗಿದೆ. ‘ತಪ್ಪು ಮಾಡಿಲ್ಲ ಎಂದರೆ ಭಯವೇಕೆ’ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ