‘ಬಳೆ ಬಲಹೀನತೆ ಸಂಕೇತನಾ? ಇವತ್ತಿನ ಪಂಚಾಯ್ತಿಯಲ್ಲಿ ಮನವರಿಕೆ ಮಾಡಿಸೋದು ಸಿಕ್ಕಾಪಟ್ಟೆ ಇದೆ’; ಸುದೀಪ್

ವಿನಯ್ ಅವರು ಸಂಗೀತಾ ಬಗ್ಗೆ ಅಶ್ಲೀಲ ಶಬ್ದಗಳ ಪದಬಳಕೆ ಮಾಡಿದ್ದರು. ಮಹಿಳೆಯರಲ್ಲಿ ಶಕ್ತಿ ಇಲ್ಲ ಎಂಬರ್ಥವೂ ಅವರ ಹೇಳಿಕೆಯಲ್ಲಿ ಇತ್ತು. ಇದನ್ನು ಸಂಗೀತಾ ವಿರೋಧಿಸಿದ್ದರು. ವಿನಯ್​ಗೆ ಸುದೀಪ್​ಗೆ ಕ್ಲಾಸ್ ತೆಗೆದುಕೊಳ್ಳೋದು ಬಹುತೇಕ ಖಚಿತವಾಗಿದೆ.

‘ಬಳೆ ಬಲಹೀನತೆ ಸಂಕೇತನಾ? ಇವತ್ತಿನ ಪಂಚಾಯ್ತಿಯಲ್ಲಿ ಮನವರಿಕೆ ಮಾಡಿಸೋದು ಸಿಕ್ಕಾಪಟ್ಟೆ ಇದೆ’; ಸುದೀಪ್
ವಿನಯ್-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Nov 04, 2023 | 2:28 PM

‘ಗಂಡಸಿನ ತರ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’ ಎಂದು ವಿನಯ್ ಗೌಡ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಬಳೆ ಬಲಹೀನತೆಯ ಸಂಕೇತ ಎಂಬರ್ಥದಲ್ಲಿ ಅವರು ಮಾತನಾಡಿದ್ದರು. ಅವರ ಈ ಹೇಳಿಕೆಯ ಬಗ್ಗೆ ಅನೇಕ ಮಹಿಳೆಯರು ಅಪಸ್ವರ ತೆಗೆದಿದ್ದರು. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬರಲೇಬೇಕು ಎಂದು ಅನೇಕರು ಆಗ್ರಹಿಸಿದ್ದರು. ಕೇವಲ ಜನಸಾಮಾನ್ಯರು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ಧ್ವನಿ ಎತ್ತಿದ್ದರು. ವೀಕೆಂಡ್​ ಪಂಚಾಯ್ತಿಯಲ್ಲಿ ಸುದೀಪ್ (Sudeep) ಅವರು ಇದೇ ವಿಚಾರದ ಬಗ್ಗೆ ಹೆಚ್ಚು ಗಮನ ಕೊಟ್ಟಂತಿದೆ. ಸದ್ಯ ಬಿಡುಗಡೆ ಆಗಿರೋ ಪ್ರೋಮೋ ಗಮನ ಸೆಳೆಯುತ್ತಿದೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ನೀಡಿದ್ದ ಹಳ್ಳಿ ಟಾಸ್ಕ್ ವೇಳೆ ಬಳೆಯ ಸದ್ದು ಜೋರಾಗಿತ್ತು. ವಿನಯ್ ಅವರು ಸಂಗೀತಾ ಬಗ್ಗೆ ಅಶ್ಲೀಲ ಶಬ್ದಗಳ ಪದಬಳಕೆ ಮಾಡಿದ್ದರು. ಮಹಿಳೆಯರಲ್ಲಿ ಶಕ್ತಿ ಇಲ್ಲ ಎಂಬರ್ಥವೂ ಅವರ ಹೇಳಿಕೆಯಲ್ಲಿ ಇತ್ತು. ಇದನ್ನು ಸಂಗೀತಾ ವಿರೋಧಿಸಿದ್ದರು. ವಿನಯ್​ಗೆ ಸುದೀಪ್​ಗೆ ಕ್ಲಾಸ್ ತೆಗೆದುಕೊಳ್ಳೋದು ಬಹುತೇಕ ಖಚಿತವಾಗಿದೆ.

‘ಬಳೆ ಅಂದ್ರೇನು? ಹಿರಿಯರು ಸಂಸ್ಕೃತಿ ಎಂದರು, ಕಿರಿಯರು ಶಕ್ತಿ ಎಂದರು. ಅದೇ ಸಮಯದಲ್ಲಿ ಮನೆಯಲ್ಲಿ ಒಬ್ಬರು ಬಳೆಯನ್ನು ಬಲಹೀನತೆ ಎಂಬರ್ಥದಲ್ಲಿ ಮಾತನಾಡಿದರು. ಇವತ್ತಿನ ಪಂಚಾಯ್ತಿಯಲ್ಲಿ ಮನವರಿಕೆ ಮಾಡಿಸೋದು ಸಿಕ್ಕಾಪಟ್ಟೆ ಇದೆ’ ಎಂದು ಹೊಸ ಪ್ರೋಮೋದಲ್ಲಿ ಸುದೀಪ್ ಹೇಳಿದ್ದಾರೆ. ಸಂಗೀತಾಗೆ ಮೆಚ್ಚುಗೆ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ವಿನಯ್ ಅಲ್ಲ, ಸಂಗೀತಾ ಬಿಗ್ ಬಾಸ್​ನಲ್ಲಿ ಅತಿ ಹೆಚ್ಚು ಹೇಟ್ ಮಾಡುವ ಸ್ಪರ್ಧಿ ಇವರೇ

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವೀಕೆಂಡ್ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಲೈವ್ ನೋಡಲು ಅವಕಾಶ ಇದೆ. ಇಂದಿನ ಎಪಿಸೋಡ್​ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ