AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್ ಅಲ್ಲ, ಸಂಗೀತಾ ಬಿಗ್ ಬಾಸ್​ನಲ್ಲಿ ಅತಿ ಹೆಚ್ಚು ಹೇಟ್ ಮಾಡುವ ಸ್ಪರ್ಧಿ ಇವರೇ

ವಿನಯ್ ಹಾಗೂ ಸಂಗೀತಾಗಿಂತ ದೊಡ್ಡ ಮಟ್ಟದಲ್ಲಿ ಜಗಳ ಏರ್ಪಟ್ಟಿದೆ. ‘ವಿನಯ್​ಗಿಂತ ದೊಡ್ಮನೆಯಲ್ಲಿರುವ ಈ ಸ್ಪರ್ಧಿಯ ತುಂಬಾನೇ ಹೇಟ್ ಮಾಡ್ತೀನಿ’ ಎಂದಿದ್ದಾರೆ ಸಂಗೀತಾ.

ವಿನಯ್ ಅಲ್ಲ, ಸಂಗೀತಾ ಬಿಗ್ ಬಾಸ್​ನಲ್ಲಿ ಅತಿ ಹೆಚ್ಚು ಹೇಟ್ ಮಾಡುವ ಸ್ಪರ್ಧಿ ಇವರೇ
ಸಂಗೀತಾ ಶೃಂಗೇರಿ
ರಾಜೇಶ್ ದುಗ್ಗುಮನೆ
|

Updated on:Nov 04, 2023 | 9:24 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಎಲ್ಲಾ ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ಏರ್ಪಡುತ್ತಿದೆ. ಈಗಾಗಲೇ ನಾಲ್ಕು ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಯಾವ ಸ್ಪರ್ಧಿಗಳು ಹೇಗೆ ಎನ್ನುವ ವಿಚಾರ ವೀಕ್ಷಕರಿಗೆ ಹಾಗೂ ಮನೆಯ ಒಳಗೆ ಇರುವ ಎಲ್ಲರಿಗೂ ಗೊತ್ತಾಗಿದೆ. ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ದೊಡ್ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಮೊದಲ ವಾರ ಜೋರು ಧ್ವನಿಯಲ್ಲಿ ಮಾತನಾಡಿದ್ದ ಅವರು, ಎರಡನೇ ವಾರದಲ್ಲಿ ಡಲ್ ಆದರು. ಈಗ ಅವರು ಮತ್ತೆ ತಮ್ಮ ಪರ್ಫಾರ್ಮೆನ್ಸ್ ತೋರಿಸುತ್ತಿದ್ದಾರೆ. ವಿನಯ್ ವಿರುದ್ಧ ಅವರು ಸಿಡಿದೆದ್ದಿದ್ದಾರೆ. ದೊಡ್ಮನೆಯಲ್ಲಿ ಅವರು ವಿನಯ್​ಗಿಂತ ಹೆಚ್ಚು ಹೇಟ್ ಮಾಡುವ ವ್ಯಕ್ತಿ ಒಬ್ಬರಿದ್ದಾರಂತೆ.

ಬಿಗ್ ಬಾಸ್​ಗೆ ಬರುವ ಮೊದಲು ವಿನಯ್ ಹಾಗೂ ಸಂಗೀತಾ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಇವರು ಶಿವ ಹಾಗೂ ಪಾರ್ವತಿ ಪಾತ್ರ ಮಾಡಿದ್ದರು. ಆದಾಗ್ಯೂ ದೊಡ್ಮನೆಗೆ ಬಂದಾಗ ಇವರ ಮಧ್ಯೆ ಯಾವುದೂ ಸರಿ ಇರಲಿಲ್ಲ. ಇವರು ಕಿತ್ತಾಡಿಕೊಳ್ಳೋಕೆ ಆರಂಭಿಸಿದರು. ವಿನಯ್ ಹಾಗೂ ಸಂಗೀತಾಗಿಂತ ದೊಡ್ಡ ಮಟ್ಟದಲ್ಲಿ ಜಗಳ ಏರ್ಪಟ್ಟಿದೆ. ‘ವಿನಯ್​ಗಿಂತ ಸಂತೋಷ್​ನ ತುಂಬಾನೇ ಹೇಟ್ ಮಾಡ್ತೀನಿ’ ಎಂದಿದ್ದಾರೆ ಸಂಗೀತಾ.

‘ಸಂತೋಷ್ ನಡೆದುಕೊಳ್ಳುವ ರೀತಿ ಸರಿ ಇಲ್ಲ. ಅವರು ದೊಡ್ಮನೆಯ ಶಕುನಿ. ಲೈಫ್​​ನಲ್ಲಿ ನಾನು ಯಾರನ್ನಾದರೂ ಮತ್ತೆ ಭೇಟಿ ಮಾಡೋಕೆ ಇಷ್ಟಾನೇ ಪಡಲ್ಲ ಎಂದರೆ ಅದು ಸಂತೋಷ್’ ಎಂದರು ಸಂಗೀತಾ. ಇದಕ್ಕೆ ಕಾರ್ತಿಕ್ ಕೂಡ ಹೌದು ಎಂದರು. ಸಂತೋಷ್ ಅವರು ನಡೆದುಕೊಳ್ಳುತ್ತಿರುವ ರೀತಿ ಇದಕ್ಕೆ ಕಾರಣ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ವಿನಯ್​ಗೆ ಹೊಸ ಹೆಸರು ಕೊಟ್ಟ ಕಿಚ್ಚ ಸುದೀಪ್

ತುಕಾಲಿ ಸಂತೋಷ್ ಅವರು ದೊಡ್ಮನೆಯಲ್ಲಿ ನಿಜಕ್ಕೂ ಶಕುನಿ ಆಗಿದ್ದಾರೆ. ಅವರು ಕಾಮಿಡಿ ಮಾಡುವ ನೆಪದಲ್ಲಿ ಅನೇಕರಿಗೆ ಬೇಸರ ಮಾಡಿದ್ದಾರೆ. ಅವರಿಂದ ಮನರಂಜನೆ ಸಿಗುತ್ತಿಲ್ಲ. ಅವರು ನಿರಂತರವಾಗಿ ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಡ್ರೋನ್ ಪ್ರತಾಪ್ ಅಭಿಮಾನಿಗಳು ಸಂತೋಷ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Sat, 4 November 23

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ