ಬಿಗ್ ಬಾಸ್ ಮನೆಯಲ್ಲಿ ವಿನಯ್​ಗೆ ಹೊಸ ಹೆಸರು ಕೊಟ್ಟ ಕಿಚ್ಚ ಸುದೀಪ್

ವಿನಯ್​ಗೆ ಮಣ್ಣಿನಿಂದ ಮಾಡಿದ ಆನೆಯ ಮೂರ್ತಿ ನೀಡಲಾಗಿದೆ. ಅವರು ಒಂಟಿ ಸಲಗ ಎಂದು ಕರೆದರು ಸುದೀಪ್. ಈ ಮೂಲಕ ಅವರಿಗೆ ಯಾರೂ ಸರಿಸಾಟಿ ಅಲ್ಲ ಎಂಬರ್ಥದಲ್ಲಿ ಇದನ್ನು ಹೇಳಿದ್ದರು. ಈಗ ಸುದೀಪ್ ಹೊಸ ಹೆಸರು ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವಿನಯ್​ಗೆ ಹೊಸ ಹೆಸರು ಕೊಟ್ಟ ಕಿಚ್ಚ ಸುದೀಪ್
ವಿನಯ್-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Oct 30, 2023 | 8:00 AM

ಕಿಚ್ಚ ಸುದೀಪ್ (Kichcha Sudeep) ಅವರು ಮೂರನೇ ವಾರದ ಶೋ ನಡೆಸಿಕೊಟ್ಟಿದ್ದಾರೆ. ಶನಿವಾರದ (ಅಕ್ಟೋಬರ್ 28) ಎಪಿಸೋಡ್ ಸಖತ್ ಖಡಕ್ ಆಗಿತ್ತು. ಸುದೀಪ್ ಅವರು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದರು. ಈ ಕಾರಣಕ್ಕೆ ಭಾನುವಾರದ ಎಪಿಸೋಡ್​ನ (ಅಕ್ಟೋಬರ್ 29) ಸಖತ್ ಫನ್ ಆಗಿ ಮಾಡಲಾಯಿತು. ಆರಂಭದಿಂದ ಕೊನೆಯವರೆಗೂ ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡಿದರು ಸುದೀಪ್. ಈ ವೇಳೆ ವಿನಯ್​ಗೆ ಅವರು ಹೊಸ ಹೆಸರು ನೀಡಿದ್ದಾರೆ. ಈ ಹೆಸರು ಗಮನ ಸೆಳೆಯುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಶನಿವಾರದ ಎಪಿಸೋಡ್​ನಲ್ಲಿ ವೀಕ್ಷಕರು ಕಳುಹಿಸಿದ ಲೆಟರ್ ಹಾಗೂ ವಸ್ತುಗಳನ್ನು ಮನೆಯವರಿಗೆ ತಲುಪಿಸಲಾಯಿತು. ವಿನಯ್​ಗೆ ಮಣ್ಣಿನಿಂದ ಮಾಡಿದ ಆನೆಯ ಮೂರ್ತಿ ನೀಡಲಾಗಿದೆ. ಅವರು ಒಂಟಿ ಸಲಗ ಎಂದು ಕರೆದರು ಸುದೀಪ್. ಈ ಮೂಲಕ ಅವರಿಗೆ ಯಾರೂ ಸರಿಸಾಟಿ ಅಲ್ಲ ಎಂಬರ್ಥದಲ್ಲಿ ಇದನ್ನು ಹೇಳಿದ್ದರು.

ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಅವರು ವಿನಯ್​ನ ಆನೆ ಎಂದು ಕರೆದಿದ್ದಾರೆ. ಪ್ರತಿ ಬಾರಿ ಮಾತನಾಡಿಸುವಾಗಲೂ ‘ಏನ್​ ಎಲಿಫೆಂಟ್​’ ಎಂದು ವಿನಯ್​ನವರನ್ನು ಸಂಬೋಧಿಸಿದ್ದಾರೆ. ‘ಏನ್ ವಿನಯ್ ಅವರೇ ಬಾಲ ಮತ್ತು ಸೊಂಡಿಲು’ ಎಲ್ಲಿ ಎನ್ನುವ ಪ್ರಶ್ನೆಯನ್ನೂ ಸುದೀಪ್ ಕೇಳಿದ್ದಾರೆ.

ಆನೆ ಎಂದು ಕರೆದಿದ್ದಕ್ಕೆ ವಿನಯ್ ಅಲರ್ಟ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಅವರ ವಿರುದ್ಧ ತಿರುಗಿ ಬೀಳುತ್ತಾರೆ ಎನ್ನುವ ಸೂಚನೆ ಸಿಕ್ಕಿದೆ. ಇದನ್ನು ಅವರು ಸುದೀಪ್ ಎದುರೂ ಹೇಳಿಕೊಂಡಿದ್ದಾರೆ. ‘ಎಲ್ಲರೂ ಬಿಲ್ಲುಬಾಣ ಹಿಡಿದು ರೆಡಿ ಆಗಿದ್ದಾರೆ. ನನ್ನ ಮೇಲೆ ಬಾಣಗಳ ಸುರಿಮಳೆ ಆಗುತ್ತದೆ’ ಎಂದು ಅವರು ಸುದೀಪ್ ಎದುರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಲೈಟ್ ಆಫ್​​ಗೂ ಮುನ್ನ ನಿದ್ದೆ; ವಿನಯ್-ಕಾರ್ತಿಕ್​ಗೆ ಬಿಗ್ ಬಾಸ್ ಕಠಿಣ ಶಿಕ್ಷೆ

ವಿನಯ್​ ಅವರ ಕಳೆದ ವಾರ ಕೆಲವು ತಪ್ಪುಗಳನ್ನು ಮಾಡಿ ಬಿಗ್ ಬಾಸ್​ನಿಂದ ಶಿಕ್ಷೆಗೆ ಒಳಗಾದರು. ಆದಾಗ್ಯೂ ಸುದೀಪ್ ಅವರು ವಿನಯ್​ನ ಹೊಗಳಿದರು. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಎದುರಾಗಿದೆ. ಈ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:41 am, Mon, 30 October 23

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ