ತುಕಾಲಿ ಸಂತುಗೆ ಸಖತ್ ಕ್ವಾಟ್ಲೆ ಕೊಟ್ಟ ಸುದೀಪ್: ಇಕ್ಕಟ್ಟಿಗೆ ಸಿಲುಕಿದ ತುಕಾಲಿ

Bigg Boss 10: ಮೊದಲ ವಾರದಿಂದಲೂ ತುಕಾಲಿ ಸಂತುವನ್ನು ಟಾರ್ಗೆಟ್ ಮಾಡಿಕೊಂಡಂತಿರುವ ನಟ ಸುದೀಪ್, ಈ ವಾರಾಂತ್ಯದಲ್ಲಂತೂ ತುಕಾಲಿ ಅವರಿಗೆ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ. 'ಬೇಡ ಅಣ್ಣ' ಎಂದು ಬೇಡಿಕೊಂಡರೂ ಒಂದು ಟಾಸ್ಕ್​ ಅನ್ನು ಸುದೀಪ್ ಅವರು ತುಕಾಲಿಗೆ ಕೊಟ್ಟಿದ್ದಾರೆ.

ತುಕಾಲಿ ಸಂತುಗೆ ಸಖತ್ ಕ್ವಾಟ್ಲೆ ಕೊಟ್ಟ ಸುದೀಪ್: ಇಕ್ಕಟ್ಟಿಗೆ ಸಿಲುಕಿದ ತುಕಾಲಿ
ತುಕಾಲಿ ಸಂತು
Follow us
ಮಂಜುನಾಥ ಸಿ.
|

Updated on: Oct 30, 2023 | 12:06 AM

ಶನಿವಾರದ ಬಿಗ್​ಬಾಸ್ (Bigg Boss) ಎಪಿಸೋಡ್​ನಲ್ಲಿ ಹಾಸ್ಯ, ವಾರದಲ್ಲಿ ನಡೆದ ಟಾಸ್ಕ್, ಗೆಲುವು-ಸೋಲು, ಕಳಪೆ-ಅತ್ಯುತ್ತಮ ಇನ್ನಿತರೆ ವಿಷಯಗಳ ಬಗೆಗೆ ಚರ್ಚಿಸದೆ ಹೆಚ್ಚಾಗಿ ಮನೆಯ ಸದಸ್ಯರ ಒಟ್ಟಾರೆ ವ್ಯಕ್ತಿತ್ವದ ಬಗ್ಗೆ ಹೆಚ್ಚು ಮಾತನಾಡಿದ್ದ ನಟ ಸುದೀಪ್, ಭಾನುವಾರದ ಎಪಿಸೋಡ್ ಅನ್ನು ತಮಾಷೆಯ ಮೂಲಕ ಪ್ರಾರಂಭಿಸಿದರು. ಹಾಸ್ಯ ಮಾಡುತ್ತಾ, ನಗುತ್ತಾ, ನಗಿಸುತ್ತಾ ಎಪಿಸೋಡ್ ಅನ್ನು ನಡೆಸಿಕೊಟ್ಟರು, ಜೊತೆಗೆ ಆಗಾಗ್ಗೆ ಮನೆಯ ಕೆಲವು ಸದಸ್ಯರಿಗೆ ಎಚ್ಚರಿಕೆ, ಉಪದೇಶದ ಮಾತುಗಳನ್ನು ಸಹ ಆಡಿದರು. ಇದರ ನಡುವೆ ತುಕಾಲಿ ಸಂತುಗೆ ಮಾತ್ರ ಸಖತ್ ಕ್ವಾಟ್ಲೆ ಕೊಟ್ಟರು.

ಆರಂಭದಿಂದಲೂ ತುಕಾಲಿ ಸಂತು ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಲೇ ಬರುತ್ತಿರುವ ಸುದೀಪ್, ಭಾನುವಾರದ ಎಪಿಸೋಡ್​ನಲ್ಲಿ ತುಕಾಲಿ ಅವರು ವಿಡಿಯೋ ಒಂದನ್ನು ಮನೆಯ ಸದಸ್ಯರ ಮುಂದೆ ತೋರಿಸಿ ಎಲ್ಲರೂ ನಗೆ ಗಡಲಲ್ಲಿ ತೇಲುವಂತೆ ಮಾಡಿದರು. ಸಂತು ಅವರು ಸ್ಪರ್ಧಿ ಸಿರಿ ಅವರು ಮನೆಯಲ್ಲಿ ಹೇಗೆ ಮಾತನಾಡುತ್ತಾರೆ ಎಂದು ಇತರೆ ಸದಸ್ಯರ ಎದುರು ನಕಲು ಮಾಡಿದ್ದ ವಿಡಿಯೋವನ್ನು ಪ್ರಸಾರ ಮಾಡಿ ಸಂತುವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಭಾಗ್ಯಶ್ರೀ ಬಗ್ಗೆ ಸಂತು ಮಾಡಿದ್ದ ನಕಲಿನ ಬಗ್ಗೆಯೂ ಸುದೀಪ್ ಹೇಳಿದರು. ಇದರಿಂದ ಇಕ್ಕಟ್ಟಿಗೆ ಸಿಲುಕಿಕೊಂಡ ಸಂತು, ಇಬ್ಬರೂ ನನ್ನನ್ನು ಬಿಡಲ್ಲ, ಪ್ರಶ್ನೆ ಕೇಳಿ ಕೇಳಿ ಕೊಂದುಬಿಡುತ್ತಾರೆ ಎಂದರು. ವಿಡಿಯೋ ಹಾಕುವ ಮುನ್ನವೂ ಸಂತು, ಸುದೀಪ್​ ಬಳಿ ಬೇಡಿಕೊಂಡರು ಆದರೂ ಸುದೀಪ್ ಅವರು ವಿಡಿಯೋ ಪ್ರಸಾರ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಮತ್ತೆ ಬರ್ತಾರಾ ವರ್ತೂರು ಪ್ರಕಾಶ್​? ಏನು ಹೇಳಿದರು ಸುದೀಪ್?

ಅದಾದ ಬಳಿಕ ತುಕಾಲಿ ಸಂತುಗೆ ಟಾಸ್ಕ್ ಒಂದನ್ನು ನೀಡಿದ ಸುದೀಪ್, ಸಿರಿ ಹಾಗೂ ಭಾಗ್ಯಶ್ರೀ ಅವರುಗಳು ನಾಳೆ ಇಡೀ ದಿನ ತುಕಾಲಿ ಜೊತೆಗೆ ಇರಬೇಕು, ಅವರು ಮೂವರಿಗೂ ಒಂದು ಚೈನ್ ಹಾಕಿ ಮೂವರೂ ಜೊತೆಗೆ ಇರುವಂತೆ ಮಾಡಬೇಕು ಎಂದರು. ಸಂತು ಎಷ್ಟು ಕೇಳಿಕೊಂಡರು, ಈ ಟಾಸ್ಕ್ ಆಗಲೇ ಬೇಕು ಎಂದರು ಸುದೀಪ್. ಮಾತ್ರವಲ್ಲ ಸೋಫಾ ಮೇಲೆ ದೂರ ಕೂತಿದ್ದ ಸಂತುವನ್ನು ಸಿರಿ ಹಾಗೂ ಭಾಗ್ಯಶ್ರೀ ಅವರ ನಡುವೆ ಕುಳಿತುಕೊಳ್ಳುವಂತೆ ಮಾಡಿದರು. ಸಂತು ಅಂತೂ ಪದೇ ಪದೇ ಅಣ್ಣ ಈ ಟಾಸ್ಕ್ ಬೇಡ ಅಣ್ಣ ಎಂದು ಕೇಳಿಕೊಂಡರೂ ಬಿಡದ ಸುದೀಪ್ ಈ ಟಾಸ್ಕ್ ಆಗಲೇ ಬೇಕು ಎಂದು ಒತ್ತಾಯ ಮಾಡಿದರು. ವ್ಯಂಗ್ಯವಾಗಿ ತುಕಾಲಿ ಸಂತುಗೆ ಶುಭವನ್ನೂ ಹಾರೈಸಿದರು. ಸಿರಿ ಹಾಗೂ ಭಾಗ್ಯಶ್ರೀ ಅವರನ್ನು ಉದ್ದೇಶಿಸಿ ನೀವಿಬ್ಬರೂ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ ಎಂದರು.

ತುಕಾಲಿ ಸಂತು ಸೋಮವಾರದ ಎಪಿಸೋಡ್​ ಪೂರ್ಣ, ತಾನು ತಮಾಷೆ ಮಾಡಿದ್ದ ಸಿರಿ ಹಾಗೂ ಭಾಗ್ಯಶ್ರೀ ಅವರೊಟ್ಟಿಗೆ ಓಡಾಡಬೇಕಿದೆ. ಅವರೊಟ್ಟಿಗೆ ಮಾತನಾಡಬೇಕಿದೆ, ಎಲ್ಲ ವಿಷಯವನ್ನೂ ಅವರೊಟ್ಟಿಗೆ ಚರ್ಚಿಸಬೇಕಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು