AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆ ಹೊಡೆಯಲು ಹುರುಪು ತುಂಬಿದ ಸುದೀಪ್: ಬದಲಾಗ್ತಾರಾ ಬಿಗ್​ಬಾಸ್ ಮನೆ ಮಂದಿ

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ವಿನಯ್​ ಇತರೆ ಕೆಲವು ಸ್ಪರ್ಧಿಗಳ ಮೇಲೆ ತಮ್ಮ ದಾರ್ಷ್ಟ್ಯ ಪ್ರದರ್ಶಿಸುತ್ತಿದ್ದಾರೆ. ಸುದೀಪ್ ವಾರಾಂತ್ಯದ ಪಂಚಾಯಿತಿಯಲ್ಲಿ ವಿನಯ್​ರನ್ನು ಹೊಗಳುತ್ತಲೇ ಅವರನ್ನು ಎದುರಿಸುವ ಧೈರ್ಯವನ್ನು ಮನೆ ಮಂದಿಯಲ್ಲಿ ತುಂಬುವ ಕಾರ್ಯ ಮಾಡಿದರು.

ಆನೆ ಹೊಡೆಯಲು ಹುರುಪು ತುಂಬಿದ ಸುದೀಪ್: ಬದಲಾಗ್ತಾರಾ ಬಿಗ್​ಬಾಸ್ ಮನೆ ಮಂದಿ
ಬಿಗ್​ಬಾಸ್ ಸುದೀಪ್
ಮಂಜುನಾಥ ಸಿ.
|

Updated on: Oct 28, 2023 | 11:42 PM

Share

ಬಿಗ್​ಬಾಸ್ (Bigg Boss Kannada) ಮನೆಯಲ್ಲಿ ಈ ವಾರ ಹೆಚ್ಚು ಅಬ್ಬರ ಕೇಳಿದ್ದೆಂದರೆ ಅದು ವಿನಯ್​ ಅವರದ್ದು. ಬಂದ ಮೊದಲ ವಾರ ಜಂಟಲ್​ಮ್ಯಾನ್ ರೀತಿ ವರ್ತಿಸಿದ್ದ, ಬಿಗ್​ಬಾಸ್ ನಿಯಮಗಳ ಬಗ್ಗೆ, ಮೌಲ್ಯಗಳ ಬಗ್ಗೆ ಮಾತನಾಡುತ್ತಾ ಎಲ್ಲರ ಗಮನ ಸೆಳೆದಿದ್ದ ವಿನಯ್ ಬರ ಬರುತ್ತಾ ತಮ್ಮ ದಾರ್ಷ್ಟ್ಯ ಗುಣ ಪ್ರದರ್ಶಿಸುತ್ತಿದ್ದಾರೆ. ತಮ್ಮ ತಪ್ಪು ತೋರಿಸಿದವರ ಬಾಯನ್ನು ರೌಡಿತನ ಬಳಸಿ ಮುಚ್ಚಿಸುತ್ತಿದ್ದಾರೆ. ಗೆದ್ದಾಗ ಎದುರಾಳಿಗಳನ್ನು ಹೀಗಳೆಯುವುದು. ಡ್ರೋನ್ ಪ್ರತಾಪ್, ತನಿಷಾ ಇನ್ನಿತರರ ಮೇಲೆ ದರ್ಪ್ ಪ್ರದರ್ಶನಗಳೆಲ್ಲವನ್ನೂ ಮಾಡಿದ್ದಾರೆ.

ಇಂದು ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್, ವಿನಯ್​ರನ್ನು ಹೊಗಳುತ್ತಲೇ, ಮನೆಯ ಇತರೆ ಸದಸ್ಯರಿಗೆ ಅವರ ವಿರುದ್ಧ ನಿಲ್ಲುವ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ವಿನಯ್​ರನ್ನು ಆನೆಗೆ ಹೋಲಿಸಿದ ಸುದೀಪ್, ಮನೆಯಲ್ಲಿ ಸಿಂಹ, ಹುಲಿಗಳು ಸಹ ಇದ್ದಾರೆ ಎಂದರು. ಆದರೆ ಆ ಹುಲಿ, ಸಿಂಹಗಳು ತಮ್ಮ ತನ ಮರೆತಿವೆ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆ ಸದಸ್ಯರಿಗೆ ಉಡುಗೊರೆ ಕೊಟ್ಟು ಉಪದೇಶ ಮಾಡಿದ ಸುದೀಪ್

ಕಾರ್ತಿಕ್, ತನಿಷಾ, ಸಂಗೀತಾ ಅವರುಗಳು ಹೇಗೆ ವಿನಯ್ ಎದುರು ಮಂಕಾಗಿದ್ದಾರೆ ಎಂದು ಸನ್ನಿವೇಶಗಳನ್ನು ಉದಾಹರಣೆಗಳನ್ನಾಗಿ ನೀಡಿ ಹೇಳಿದ ಸುದೀಪ್, ಬಿಗ್​ಬಾಸ್ ಮನೆಯ ಸದಸ್ಯರೇ ಒಬ್ಬ ಫೈನಲಿಸ್ಟ್​ ಅನ್ನು ನೀವೇ ಆಯ್ದು ಕೊಡುತ್ತಿದ್ದೀರಾ ಇದು ಸರಿಯಾದ ಕ್ರಮವಲ್ಲ ಎಂದರು. ವಿನಯ್​ರದ್ದು ತಪ್ಪಿದ್ದಾಗಲೂ ಅದನ್ನು ಗಟ್ಟಿಯಾಗಿ ಹೇಳುವ ಧೈರ್ಯ ನೀವು ತೋರುತ್ತಿಲ್ಲ. ಬಾಯಿ ಬಿಟ್ಟು ಹೇಳಲು ನೀವೆಲ್ಲ ಹಿಂಜರಿಯುತ್ತಿದ್ದೀರಿ ಆದರೆ ನಿಮಗೆಲ್ಲರಿಗೂ ವಿನಯ್ ಎಂದರೆ ಭಯ ಎಂದರು ಸುದೀಪ್. ಅದಕ್ಕೆ ತಕ್ಕಂತೆ ವಿನಯ್​ ಸಹ ನನಗೆ ಈ ಮನೆಯಲ್ಲಿ ಯಾರೂ ಸಹ ಸ್ಪರ್ಧಿಗಳೇ ಅಲ್ಲ ಎಂದು ಸಹ ಹೇಳಿದರು. ಇದು ಸ್ಪರ್ಧಿಗಳಿಗೆ ಇನ್ನಷ್ಟು ಅವಮಾನ ಉಂಟು ಮಾಡಿತು.

ಸುದೀಪ್​ರ ಮಾತುಗಳು ಹಲವರಿಗೆ ನಾಟಿದಂತಿದೆ. ಮುಂದಿನ ವಾರದಿಂದ ಆದರೂ ತನಿಷಾ, ಡ್ರೋನ್ ಪ್ರತಾಪ್, ಕಾರ್ತಿಕ್, ಸಂಗೀತಾ ಇನ್ನಿತರರು ವಿನಯ್​ ಮಾತುಗಳಿಗೆ ಹೆದರದೆ ಅವರನ್ನು ಧೈರ್ಯವಾಗಿ ಎದುರಿಸುತ್ತಾರಾ ಕಾದು ನೋಡಬೇಕಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿ ದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?