ಬಿಗ್​ಬಾಸ್ ಮನೆ ಸದಸ್ಯರಿಗೆ ಉಡುಗೊರೆ ಕೊಟ್ಟು ಉಪದೇಶ ಮಾಡಿದ ಸುದೀಪ್

Bigg Boss Kannada: ಶನಿವಾರದ ಎಪಿಸೋಡ್​ನಲ್ಲಿ ಬಂದಿದ್ದ ನಟ ಸುದೀಪ್, ಬಿಗ್​ಬಾಸ್ ಮನೆಯ ಸದಸ್ಯರಿಗೆ ಉಡುಗೊರೆಗಳನ್ನು ಹಾಗೂ ಸಂದೇಶಗಳನ್ನು ಕೊಟ್ಟರು.

ಬಿಗ್​ಬಾಸ್ ಮನೆ ಸದಸ್ಯರಿಗೆ ಉಡುಗೊರೆ ಕೊಟ್ಟು ಉಪದೇಶ ಮಾಡಿದ ಸುದೀಪ್
ಬಿಗ್​ಬಾಸ್ ಕನ್ನಡ
Follow us
|

Updated on:Oct 28, 2023 | 11:22 PM

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10ರ ಮೂರನೇ ವಾರಾಂತ್ಯದ ಪಂಚಾಯಿತಿಗೆ ಎಂದಿನಂತೆ ಸಖತ್ ಸ್ಟೈಲ್ ಆಗಿ ಬಂದಿದ್ದ ಸುದೀಪ್, ಈ ಹಿಂದಿನ ಶನಿವಾರಗಳಂತೆ ಇರದೆ, ಆರಂಭದಿಂದಲೇ ಬಹಳ ಗಂಭೀರವಾಗಿ ಬಿಗ್​ಬಾಸ್ ಸ್ಪರ್ಧಿಗಳನ್ನು ಎದುರುಗೊಂಡರು. ಈ ವಾರ ನಡೆದ ಟಾಸ್ಕ್, ಉತ್ತಮ ಯಾರು? ಕಳಪೆ ಯಾರು? ಯಾವುದರ ಬಗ್ಗೆಯೂ ಮಾತನಾಡದ ಸುದೀಪ್, ನೇರವಾಗಿ ಬಿಗ್​ಬಾಸ್ ಮನೆ ಸದಸ್ಯರು ಮನೆಯಲ್ಲಿ ತೋರುತ್ತಿರುವ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.

ವೀಕ್ಷಕರು ಮನೆಯ ಸದಸ್ಯರಿಗೆ ಕಳಿಸಿರುವ ಉಡುಗೊರೆಗಳನ್ನು ಮನೆಯ ಸದಸ್ಯರಿಗೆ ನೀಡಿದ ಸುದೀಪ್, ಆ ಉಡುಗೊರೆಗಳಲ್ಲಿಯೇ ಅವರ ಹಾಲಿ ವರ್ತನೆ ಹಾಗೂ ಹೇಗೆ ತಮ್ಮನ್ನು ಮುಂದಕ್ಕೆ ಬದಲಾಯಿಸಿಕೊಳ್ಳಬೇಕು ಎಂಬ ಸಂದೇಶವನ್ನು ತುಂಬಿದ್ದರು. ಎಲ್ಲ ಸ್ಪರ್ಧಿಗಳು ಖುಷಿಯಿಂದ ಉಡುಗೊರೆಯನ್ನು ತೆರೆದರಾದರೂ ಅದರ ಅರ್ಥ, ಅದರೊಟ್ಟಿಗಿದ್ದ ಪತ್ರ ನೋಡಿ ಚಿಂತನೆಗೆ ತೊಡಗಿಕೊಂಡರು.

ಕಾರ್ತಿಕ್​ಗೆ ಕತ್ತಿ ಯ ಜೊತೆಗೆ ತರಕಾರಿ ಉಡುಗೊರೆಯಾಗಿ ಬಂದಿತ್ತು. ಯೋಧನಾದವನು ಕತ್ತಿಯನ್ನು ಯುದ್ಧ ಭೂಮಿಯನ್ನು ಸರಿಯಾದ ವಿರೋಧಿಯ ಎದುರು ಬಳಸಬೇಕು, ಅದನ್ನು ತಕಾರಿ ಹೆಚ್ಚಲು ಬಳಸಬಾರದು ಎಂದು ಪತ್ರದಲ್ಲಿ ಬರೆಯಲಾಗಿತ್ತು. ಇನ್ನು ಇಶಾನಿಗೆ ಉಪ್ಪಿನಕಾಯಿಯನ್ನು ಉಡುಗೊರೆಯಾಗಿ ಕಳಿಸಿ, ಊಟಕ್ಕೆ ಉಪ್ಪಿನಕಾಯಿ ಚೆನ್ನಾಗಿರುತ್ತದೆ, ಆದರೆ ಅದು ಇರಲೇ ಬೇಕೆಂದೇನೂ ಇಲ್ಲ. ಸುಮ್ಮನೆ ಉಪ್ಪಿನಕಾಯಿ ಆಗದೆ, ಮುಖ್ಯ ಊಟವೇ ನೀವಾಗಲು ಪ್ರಯತ್ನಿಸಿ ಎಂಬ ಸಂದೇಶವನ್ನು ಅವರಿಗೆ ಕಳಿಸಲಾಗಿತ್ತು.

ಇದನ್ನೂ ಓದಿ:ಮತ್ತೆ ಬಿಗ್​ಬಾಸ್ ಮನೆಗೆ ಹೋಗ್ತಾರಾ ವರ್ತೂರು ಸಂತೋಷ್: ವಕೀಲರು ಹೇಳಿದ್ದೇನು?

ಇನ್ನು ವಿನಯ್​ಗೆ, ಆನೆಯ ಸಣ್ಣ ವಿಗ್ರಹ ಕಳಿಸಿ, ನಾನು ಆನೆ, ನನ್ನ ಸಮಕ್ಕೆ ಯಾರಿಲ್ಲ ಎಂದುಕೊಂಡು ಸಿಕ್ಕ-ಸಿಕ್ಕ ಹಾದಿ ಹಿಡಿದು ದಾರಿತಪ್ಪುವುದು ಬೇಡ ಎಂಬ ಸಂದೇಶವನ್ನು ಅವರಿಗೆ ನೀಡಲಾಯ್ತು. ಇನ್ನು ಸಂಗೀತಾ ಶೇಂಗೇರಿಗೆ, ಮೊದಲ ವಾರ ಕರ್ನಾಟಕದ ಕ್ರಶ್ ಆಗಿದ್ದಿರಿ, ಆದರೆ ನಂತರದ ವಾರಗಳಲ್ಲಿ ನಮ್ಮ ಹೃದಯವನ್ನೇ ಕ್ರಶ್ ಮಾಡಿ ಮುರಿದುಬಿಟ್ಟಿರಿ ಎಂದು ಬರೆಯಲಾಗಿತ್ತು.

ತುಕಾಲಿ ಸಂತುಗೆ ಮೈಖ್ ಒಂದನ್ನು ನೀಡಿ, ಅಭಿಪ್ರಾಯಗಳನ್ನು ಕೆಲವರೆದುರು ಗುಸು-ಗುಸು, ಪಿಸು-ಪಿಸು ಮಾಡುವುದು ಬೇಡ. ಹೇಳುವುದಿದ್ದರೆ ಜೋರಾಗಿ, ಸ್ಪಷ್ಟವಾಗಿ ಧೈರ್ಯವಾಗಿ ಹೇಳಿ ಎಂಬ ಸಂದೇಶ ನೀಡಲಾಯ್ತು. ಸಿರಿ ಅವರಿಗೆ ಆಮೆಯ ಬೊಂಬೆ ಕಳಿಸಿ, ಜಿಂಕೆ, ಚಿರತೆಗಳೊಟ್ಟಿಗೆ ರೇಸ್​ನಲ್ಲಿದ್ದೀರಿ,ಜೋರಾಗಿ ಓಡಿ, ಮೊಲ ಮಲುಗುತ್ತದೆ ನಾನೇ ಗೆಲ್ಲುತ್ತೇನೆ ಎಂಬ ಭ್ರಮೆ ಬೇಡ ಎಂಬ ಸಂದೇಶವಿತ್ತು. ಹೀಗೆ ಎಲ್ಲರಿಗೂ ಮನೆಯಲ್ಲಿ ಅವರು ತೋರಿಸುತ್ತಿರುವ ವ್ಯಕ್ತಿತ್ವದ ಆಧಾರದ ಅನುಸಾರ ಅವರಿಗೆ ಭಿನ್ನ-ಭಿನ್ನ ಉಡುಗೊರೆ ಹಾಗೂ ಸಂದೇಶಗಳು ಬಂದಿದ್ದವು. ನಮ್ರತಾಗೆ ಸ್ಪೂನ್​ ಉಡುಗೊರೆಯಾಗಿ ಬಂದು, ಬೇರೆಯವರ ಚಮಚ ಆಗಬೇಡ ಎಂಬ ಸಂದೇಶ ಬಂದಿತ್ತು.

ಎಲ್ಲರಿಗೂ ಉಡುಗೊರೆ ಹಾಗೂ ಸಂದೇಶಗಳನ್ನು ತಲುಪಿಸಿದ ನಟ ಸುದೀಪ್ ತಮ್ಮ ವಾಕ್ಚಾತುರ್ಯದಿಂದ ಆ ಸಂದೇಶದ ಸ್ಪಷ್ಟ ಅರ್ಥವೇನು? ಇನ್ನು ಮುಂದೆ ಹೇಗಿರಬೇಕೆಂದು ನೋಡುಗರು ನಿರೀಕ್ಷೆ ಮಾಡುತ್ತಿದ್ದಾರೆ ಎಂಬುದನ್ನು ಸೂಚ್ಯವಾಗಿ ತಿಳಿಸಿ ಹೇಳಿದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Sat, 28 October 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ