ಬಿಗ್​ಬಾಸ್ ಮನೆಯಲ್ಲಿ ಗಲ್ಲಿ ಕ್ರಿಕೆಟ್ ಗೆದ್ದವರ್ಯಾರು? ಸೋತವರ್ಯಾರು? ಪಂದ್ಯಶ್ರೇಷ್ಠ ಯಾರಿಗೆ?

Bigg Boss 10: ಬಿಗ್​ಬಾಸ್ ಮನೆಯಲ್ಲಿ ಅಪರೂಪಕ್ಕೆ ಗಲ್ಲಿ ಕ್ರಿಕೆಟ್ ಆಡಲಾಯ್ತು. ಉಗ್ರಂ ಹಾಗೂ ಭಜರಂಗಿ ತಂಡಗಳವರು ಪರಸ್ಪರ ಕ್ರಿಕೆಟ್ ಪಂದ್ಯ ಆಡಿದರು. ಪಂದ್ಯಾಟದಲ್ಲಿ ಗೆದ್ದವರು ಯಾರು? ಸೋತಿದ್ದು ಯಾರು? ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು ಯಾರು? ಇಲ್ಲಿದೆ ಮಾಹಿತಿ.

ಬಿಗ್​ಬಾಸ್ ಮನೆಯಲ್ಲಿ ಗಲ್ಲಿ ಕ್ರಿಕೆಟ್ ಗೆದ್ದವರ್ಯಾರು? ಸೋತವರ್ಯಾರು? ಪಂದ್ಯಶ್ರೇಷ್ಠ ಯಾರಿಗೆ?
Follow us
|

Updated on: Oct 27, 2023 | 11:37 PM

ಹಲವು ಟಾಸ್ಕ್, ಸ್ಪರ್ಧೆ, ಜಗಳ, ಕಾಲೆಳೆತ, ಪ್ರೀತಿ, ಸಮಾಧಾನ ಎಲ್ಲವೂ ತುಂಬಿದ್ದ ಬ್ಯುಸಿ ವಾರ ಶುಕ್ರವಾರಕ್ಕೆ ಮುಗಿದಿದೆ. ಬಿಗ್​ಬಾಸ್ (Bigg Boss) ಮನೆಗೆ ಹೊಸ ಕ್ಯಾಪ್ಟನ್ ಸಹ ಆಯ್ಕೆ ಆಗಿದೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಉಳಿದಿದ್ದ ಮೈಖಲ್, ನೀತು, ತುಕಾಲಿ ಸಂತು ಹಾಗೂ ತನಿಷಾ ಅವರಲ್ಲಿ ಮೊದಲ ಸುತ್ತನ್ನು ತನಿಷಾ ಹಾಗೂ ನೀತು ಗೆದ್ದು ಅಂತಿಮ ಸುತ್ತಿಗೆ ಬಂದರು. ಅಂತಿಮ ಸುತ್ತಿನಲ್ಲಿ ತನಿಷಾರನ್ನು ಸುಲಭವಾಗಿ ಮಣಿಸಿದ ನೀತು ಬಿಗ್​ಬಾಸ್ ಮನೆಯ ಮೂರನೇ ಕ್ಯಾಪ್ಟನ್ ಆಗಿ ಆಯ್ಕೆಯಾದರು. ನೀತು ಕ್ಯಾಪ್ಟನ್ ಆಗಿದ್ದನ್ನು ಮನೆಯ ಎಲ್ಲ ಸದಸ್ಯರು ಸಂಭ್ರಮಿಸಿದರು.

ಆ ಬಳಿಕ ವಾರದ ಕಳಪೆ ಹಾಗೂ ಅತ್ಯುತ್ತಮ ನೀಡುವ ಸಮಯ ಎದುರಾಯ್ತು. ವಾರವಿಡಿ ಚೆನ್ನಾಗಿ ಆಟ ಆಡಿದ ಮೈಖಲ್, ಕಾರ್ತಿಕ್ ಹಾಗೂ ನೀತು ಹೆಸರನ್ನು ಹೆಚ್ಚು ಜನ ತೆಗೆದುಕೊಂಡರು. ಅಂತಿಮವಾಗಿ ನೀತು ಹಾಗೂ ಮೈಖಲ್ ಈ ವಾರದ ಅತ್ಯುತ್ತಮ ಎನಿಸಿಕೊಂಡರು. ಇನ್ನು ಕಳಪೆ ಪಟ್ಟವನ್ನು ಹೆಚ್ಚು ಜನ ಕೊಟ್ಟಿದ್ದು ಸ್ನೇಹಿತ್​ಗೆ. ತನಿಷಾಗೆ ಸಹ ಕೆಲವರು ಕಳಪೆ ಕೊಟ್ಟರು, ಅದರಲ್ಲಿಯೂ ವಿನಯ್, ತನಿಷಾಗೆ ಕಳಪೆ ಕೊಟ್ಟಾಗ ತನಿಷಾ ಹಾಗೂ ವಿನಯ್ ನಡುವೆ ವಾದ-ವಿವಾದ ನಡೆದವು.

ಅದಾದ ಬಳಿಕ ಬಿಗ್​ಬಾಸ್ ಆದೇಶದಂತೆ ಉಗ್ರಂ ಹಾಗೂ ಭಜರಂಗಿ ತಂಡಗಳ ನಡುವೆ ಗಲ್ಲಿ ಕ್ರಿಕೆಟ್ ಆಡಿಸಲಾಯ್ತು. ಸಂಗೀತಾ ಸ್ಕೋರರ್, ಎರಡೂ ತಂಡಗಳ ನಾಯಕಿಯರಾದ ನಮ್ರತಾ ಹಾಗೂ ತನಿಷಾ ಅವರನ್ನು ಕ್ಯಾಪ್ಟನ್​ಗಳನ್ನಾಗಿ ಮಾಡಲಾಯ್ತು. ಮೊದಲು ಬ್ಯಾಟಿಂಗ್ ಮಾಡಿದ ಭಜರಂಗಿ ತಂಡ ಉತ್ತಮ ಮೊತ್ತವನ್ನು ಕಲೆ ಹಾಕಿತು. ಅದರಲ್ಲಿಯೂ ತುಕಾಲಿ ಸಂತು ಅವರು ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅವರ ಇನ್ನಿಂಗ್ಸ್​ನಲ್ಲಿ ಫೋರ್, ಸಿಕ್ಸ್​ಗಳು ಇದ್ದವು.

ಇದನ್ನೂ ಓದಿ:ಮತ್ತೆ ಬಿಗ್​ಬಾಸ್ ಮನೆಗೆ ಹೋಗ್ತಾರಾ ವರ್ತೂರು ಸಂತೋಷ್: ವಕೀಲರು ಹೇಳಿದ್ದೇನು?

ಅದಾದ ಬಳಿಕ ಉಗ್ರಂ ತಂಡದ ಬ್ಯಾಟಿಂಗ್ ಶುರು ವಾಯಿತು, ದೊಡ್ಡ ಹೊಡೆತ ಹೊಡೆಯಲು ಹೋಗಿ ಕಾರ್ತಿಕ್ ಖಾತೆ ತೆರೆಯುವ ಮುನ್ನವೇ ಔಟಾಗಿ ಹೊರ ನಡೆದರು. ಅದಾದ ಬಳಿಕ ಬಂದ ವಿನಯ್ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅದಾದ ಬಳಿಕ ಬಂದ ಇತರೆ ಆಟಗಾರರು ಸಹ ಮೈಖಲ್​ರ ಅಂಡರ್​ಆರ್ಮ್ ಬೌಲಿಂಗ್​ ಅನ್ನು ಎದುರಿಸಲಾಗದೆ ಔಟಾದರು. ದೊಡ್ಡ ಮೊತ್ತದ ಅಂತರದಿಂದಲೇ ತನಿಷಾರ ತಂಡ ಪಂದ್ಯ ಗೆದ್ದಿತು. ಮೊದಲೇ ಹೇಳಿದಂತೆ ಗೆದ್ದ ತಂಡಕ್ಕೆ ಟ್ರೋಫಿಯ ಜೊತೆಗೆ ಉತ್ತಮವಾಗಿ ಆಡಿದ ತುಕಾಲಿ ಸಂತುಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಸಹಿ ಮಾಡಿದ ಬ್ಯಾಟು ಉಡುಗೊರೆಯಾಗಿ ಸಿಕ್ಕಿತು. ಚೆನ್ನಾಗಿ ಬೌಲಿಂಗ್ ಮಾಡಿದ ಮೈಖಲ್​ಗೆ ಸೂರ್ಯಕುಮಾರ್ ಯಾದವ್ ಸಹಿ ಮಾಡಿದ ಬಾಲು ಉಡುಗೊರೆಯಾಗಿ ದೊರಕಿತು.

ಅಂದಹಾಗೆ ಪಂದ್ಯಾಟದ ನಡುವೆ ಎರಡೂ ತಂಡದ ನಾಯಕಿಯರ ನಡುವೆ ತೀವ್ರ ಮಾತಿನ ಚಕಮಕಿಯೂ ನಡೆಯಿತು. ನಮ್ರತಾ ನಿನ್ನೆಯಿಂದಲೂ ತನಿಷಾ ನ್ಯಾಯಯುತವಾಗಿ ತೀರ್ಪುಗಳನ್ನು ನೀಡುತ್ತಿಲ್ಲ ಎಂಬ ಆರೋಪ ಮಾಡುತ್ತಲೇ ಇದ್ದರು. ಇಂದು ಕ್ರಿಕೆಟ್ ಆಟದ ವೇಳೆ ತನಿಷಾ ಅಂಫೈರಿಂಗ್​ಗೆ ಬಂದ ಕೂಡಲೇ ತನಿಷಾ ನ್ಯಾಯಯುತವಾಗಿ ತೀರ್ಪು ನೀಡು ಎಂದರು. ಇದು ತನಿಷಾರನ್ನು ಬಹುವಾಗಿ ಕೆರಳಿಸಿತು. ನಮ್ರತಾ ಸಹ ತನಿಷಾರ ಸಿಟ್ಟು ಹೆಚ್ಚಾಗುವಂತೆಯೇ ಮಾತಿಗೆ ಮಾತಿಗೆ ಜೋಡಿಸುತ್ತಾ, ಹಾವ ಭಾವಗಳನ್ನು ಮಾಡುತ್ತಾ ತನಿಷಾರನ್ನು ಇನ್ನಷ್ಟು ಉದ್ರೇಕಿಸಿದರು. ಇತರೆ ಸದಸ್ಯರು ಬಂದು ತನಿಷಾ ಹಾಗೂ ನಮ್ರತಾರ ಜಗಳವನ್ನು ಕೊನೆ ಮಾಡಿದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ