AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಠಾತ್ತನೆ ಬಿಗ್​ಬಾಸ್ ಬಳಿ ಗಂಭೀರ ಮನವಿ ಮಾಡಿದ ಸಂಗೀತಾ

Bigg Boss: ಬಿಗ್​ಬಾಸ್ ಮನೆಯ ಗಟ್ಟಿ ಸ್ಪರ್ಧಿಗಳಲ್ಲಿ ಒಬ್ಬರು ಎಂದು ತಮ್ಮನ್ನು ತಾವು ಬಿಂಬಿಸಿಕೊಂಡಿರುವ ಸಂಗೀತಾ ಹಠಾತ್ತಾಗಿ ಮನೆಗೆ ಕಳಿಸಿಬಿಡುವಂತೆ ಮನವಿ ಮಾಡಿದ್ದಾರೆ. ಬಿಗ್​ಬಾಸ್ ನಿರ್ಣಯ ಏನಾಗಿರುತ್ತದೆ?

ಹಠಾತ್ತನೆ ಬಿಗ್​ಬಾಸ್ ಬಳಿ ಗಂಭೀರ ಮನವಿ ಮಾಡಿದ ಸಂಗೀತಾ
ಸಂಗೀತಾ ಶೃಂಗೇರಿ
ಮಂಜುನಾಥ ಸಿ.
|

Updated on: Oct 27, 2023 | 4:10 PM

Share

ಬಿಗ್​ಬಾಸ್ (Bigg Boss) ಮನೆಯಲ್ಲಿ ಹಲವು ಸ್ಪರ್ಧಿಗಳು ಉತ್ತಮವಾಗಿ ಆಡುತ್ತಿದ್ದಾರೆ. ಕೆಲವರು ಟಾಸ್ಕ್​ನಿಂದ, ಕೆಲವರು ತಮ್ಮ ಮಾತಿನ ಚಾತುರ್ಯರಿಂದ, ಕೆಲವರು ತಮ್ಮ ವ್ಯಕ್ತಿತ್ವದಿಂದ ಹೀಗೆ ಹಲವು ವಿಧಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅದರಲ್ಲಿ ಸಂಗೀತಾ ಶೃಂಗೇರಿ ಸಹ ಒಬ್ಬರು. ಸಂಗೀತಾ (Sangeetha Sringeri) ತಮ್ಮ ನೇರ-ನಿಷ್ಠುರ ಮಾತಿನಿಂದ ಬಿಗ್​ಬಾಸ್ ಮನೆಯಲ್ಲಿ ಚರ್ಚೆಯಲ್ಲಿರುವ ಸ್ಪರ್ಧಿಯಾಗಿದ್ದಾರೆ. ಗಟ್ಟಿ ವ್ಯಕ್ತಿತ್ವದ ಹೆಣ್ಣಾಗಿ ಅವರು ಮನೆಯಲ್ಲಿ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು. ಆದರೆ ಈಗ ಯಾಕೋ ವಾಪಸ್ ಹೋಗುವ ಮಾತನಾಡಿದ್ದಾರೆ.

ಕಾರ್ತಿಕ್ ಜೊತೆ ಜಗಳ, ವಿನಯ್ ಜೊತೆ ಜಗಳ ಮಾಡಿಕೊಂಡು ಇದ್ದ ಸಂಗೀತಾ ಆರಾಮವಾಗಿಯೇ ಇದ್ದಂತಿದ್ದರು, ಆದರೆ ಗುರುವಾರ ಪ್ರಸಾರವಾದ ಎಪಿಸೋಡ್​ನಲ್ಲಿ ಇದ್ದಕ್ಕಿದ್ದಂತೆ ಬಿಗ್​ಬಾಸ್ ಸೀಕ್ರೆಟ್ ರೂಂಗೆ ಹೋದ ಸಂಗೀತಾ, ತಮ್ಮನ್ನು ಮನೆಗೆ ಕಳಿಸಿಬಿಡುವಂತೆ ಬಿಗ್​ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ. ”ನಾನು ಬಹಳ ಬೋರಿಂಗ್ ವ್ಯಕ್ತಿ, ನನ್ನಿಂದ ಯಾವುದೇ ಮನೊರಂಜನೆ ಸಿಗುವುದಿಲ್ಲ, ನನ್ನನ್ನು ಕಳಿಸಿಬಿಡಿ ಬಿಗ್​ಬಾಸ್” ಎಂದು ಸಂಗೀತಾ ಮನವಿ ಮಾಡಿದ್ದಾರೆ.

ಬಿಗ್​ಬಾಸ್ ಕಡೆಯಿಂದ ಉತ್ತರವನ್ನು ನಿರೀಕ್ಷಿಸಿ ಸಾಕಷ್ಟು ಸಮಯ ಸೀಕ್ರೇಟ್ ರೂಂನಲ್ಲಿಯೇ ಸಂಗೀತಾ ಕೂತಿದ್ದರಾದರೂ ಬಿಗ್​ಬಾಸ್ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಸಂಗೀತಾಗೆ ನೀಡಲಿಲ್ಲ. ಕೊನೆಗೆ ತಾವಾಗಿಯೇ ಸೀಕ್ರೆಟ್ ರೂಂನಿಂದ ಹೊರಬಂದರು. ಬಳಿಕ ಎಲ್ಲರೊಡನೆ ಮಾಮೂಲಿನಂತೆ ಬೆರೆತರು. ಕಾರ್ತಿಕ್, ವಿನಯ್, ನಮ್ರತಾ ಜೊತೆ ಸೇರಿ ತಮಾಷೆ ಮಾಡುತ್ತಾ ಆರಾಮವಾಗಿಯೇ ಇದ್ದರು.

ಇದನ್ನೂ ಓದಿ:ಬಿಗ್​ಬಾಸ್ 10ರ ಹೀರೋ ಸಂಗೀತಾ ಶೃಂಗೇರಿ ಯಾರು? ಅವರ ಹಿನ್ನೆಲೆ ಏನು?

ಸಂಗೀತಾ, ಕಾರ್ತಿಕ್ ಹಾಗೂ ವಿನಯ್ ನಡುವೆ ನಡೆಯುತ್ತಿರುವ ಸ್ನೇಹ, ಪ್ರೀತಿ, ಜಗಳಗಳು ಆಸಕ್ತಿಕರವಾಗಿವೆ. ಸಂಗೀತಾ ವೈಯಕ್ತಿಕವಾಗಿ ಗೆಲ್ಲುವ ಛಲವುಳ್ಳ ಆಟಗಾರ್ತಿಯೆಂದೇ ಮನೆಯಲ್ಲಿ ಬಿಂಬಿಸಿಕೊಂಡಿದ್ದಾರೆ. ಟಾಸ್ಕ್​ಗಳ ವಿಷಯ ಬಂದಾಗ, ಮನೆಯಲ್ಲಿ ಯಾವುದಾದರೂ ನಿರ್ಣಯಗಳನ್ನು ತೆಗೆದುಕೊಳ್ಳುವ ವಿಷಯ ಬಂದಾಗ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆದರೆ ಅವರ ಚಂಚಲ ಸ್ವಭಾವದಿಂದಾಗಿ ಈಗ ಬಿಗ್​ಬಾಸ್ ಮನೆಯಿಂದ ಹೊರ ಹೋಗುವ ಮಾತನ್ನಾಡಿದ್ದಾರೆ ಅನ್ನಿಸುತ್ತದೆ.

ಕನ್ನಡ ಬಿಗ್​ಬಾಸ್ ಇತಿಹಾಸದಲ್ಲಿ ಹೀಗೆ, ಮನೆಗೆ ಹೋಗಲು ಬಿಡಿ ಎಂದ ಯಾರನ್ನು ಸುಮ್ಮನೆ ಮನೆಗೆ ಕಳಿಸಿದ್ದಲ್ಲ. ನಿಯಮ ಉಲ್ಲಂಘಿಸಿ ಮನೆಗೆ ಹೋದವರಿದ್ದಾರೆ, ಆರೋಗ್ಯ ಸಮಸ್ಯೆ ಇನ್ನಿತರೆ ಗಂಭೀರ ಸಮಸ್ಯೆಗಳಾದಾಗ ಬಿಗ್​ಬಾಸ್​ ಸ್ಪರ್ಧಿಗಳನ್ನು ಮನೆಗೆ ಕಳಿಸಿದ್ದಿದೆ. ಆದರೆ ಮಾಡಿದ ಮನವಿಗೆ ಓಗೊಟ್ಟು ಮನೆಗೆ ಕಳಿಸಿದ ಉದಾಹರಣೆ ಇಲ್ಲ. ಈ ವಾರಾಂತ್ಯದ ಎಪಿಸೋಡ್​ನಲ್ಲಿ ಸುದೀಪ್ ಬರಲಿದ್ದಾರೆ. ಅವರು ಸಂಗೀತಾಗೆ ಸ್ಪೂರ್ತಿ ತುಂಬುವ ಅಥವಾ ಬುದ್ಧಿ ಹೇಳುವ ಸಾಧ್ಯತೆ ಇದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್