AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಳಿದ ನಾಲ್ವರಲ್ಲಿ ಯಾರಾಗಲಿದ್ದಾರೆ ಬಿಗ್​ಬಾಸ್ ಮನೆಯ ಮುಂದಿನ ನಾಯಕ?

Bigg Boss 10: ಬಿಗ್​​ಬಾಸ್ ಮನೆಯಲ್ಲಿ ಈ ವಾರ ಟಾಸ್ಕ್​ಗಳು ಜೋರಾಗಿ ನಡೆದಿವೆ. ಹೆಚ್ಚು ಟಾಸ್ಕ್​ಗಳನ್ನು ಗೆದ್ದ ತನಿಷಾರ ತಂಡ ನಾಯಕತ್ವದ ಟಾಸ್ಕ್ ಆಡಲು ಅರ್ಹತೆ ಗಿಟ್ಟಿಸಿಕೊಂಡಿದ್ದು, ಮನೆಯ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಉಳಿದ ನಾಲ್ವರಲ್ಲಿ ಯಾರಾಗಲಿದ್ದಾರೆ ಬಿಗ್​ಬಾಸ್ ಮನೆಯ ಮುಂದಿನ ನಾಯಕ?
Follow us
ಮಂಜುನಾಥ ಸಿ.
|

Updated on: Oct 26, 2023 | 11:50 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಈ ವಾರ ಟಾಸ್ಕ್​ಗಳ ಅಬ್ಬರ ಜೋರಾಗಿತ್ತು. ಹಲವು ಭಿನ್ನ-ಭಿನ್ನ ಟಾಸ್ಕ್​ಗಳನ್ನು ಸ್ಪರ್ಧಿಗಳಿಗೆ ಬಿಗ್​ಬಾಸ್ ನೀಡಿದ್ದರು. ಶಕ್ತಿ, ಯುಕ್ತಿ, ಒಗ್ಗಟ್ಟು, ಚತುರತೆ ಬೇಡುವ ಹಲವು ಟಾಸ್ಕ್​ಗಳಲ್ಲಿ ಎರಡು ಗುಂಪುಗಳಾಗಿ ಮನೆಯ ಸದಸ್ಯರು ಆಡಿದರು. ಯಾರ ತಂಡ ಹೆಚ್ಚು ಟಾಸ್ಕ್​ಗಳಲ್ಲಿ ಗೆದ್ದು ವಿಜಯಿಯಾಗುತ್ತದೆಯೋ ಆ ತಂಡದ ಸದಸ್ಯರು ನಾಯಕತ್ವದ ಟಾಸ್ಕ್​ಗೆ ಆಯ್ಕೆ ಆಗುತ್ತಾರೆ ಹಾಗೂ ಲಕ್ಷುರಿ ಟಾಸ್ಕ್​ಗೂ ಅರ್ಹತೆ ಪಡೆಯುತ್ತಾರೆ ಎಂದಿತ್ತು. ಹಾಗಾಗಿ ಎರಡೂ ತಂಡದ ಸದಸ್ಯರು ಶಕ್ತಿಮೀರಿ ಆಟಗಳನ್ನು ಆಡಿದರು.

ಭಜರಂಗಿ ಹಾಗೂ ಉಗ್ರಂ ಎಂಬ ಎರಡು ತಂಡಗಳನ್ನಾಗಿ ಮಾಡಿ ಅದಕ್ಕೆ ಮಹಿಳೆಯರ ನಾಯಕತ್ವವನ್ನು ವಹಿಸಲಾಗಿತ್ತು. ಎರಡೂ ತಂಡಗಳು ಪ್ರತಿಯೊಂದು ಟಾಸ್ಕ್​ನಲ್ಲಿಯೂ ಜಿದ್ದಾಜಿದ್ದಿನ ಸ್ಪರ್ಧೆಯನ್ನು ನೀಡಿದವು. ಕೆಲವನ್ನು ತನಿಷಾ ತಂಡ ಗೆದ್ದರೆ ಇನ್ನು ಕೆಲವನ್ನು ನಮ್ರತಾ ಗೌಡರ ತಂಡ ಗೆದ್ದು ಕೊಂಡಿತು. ಆದರೆ ಗುರುವಾರ ನಡೆದ ವಾರದ ಕೊನೆಯ ಟಾಸ್ಕ್​ಗಳಲ್ಲಿ ಹೆಚ್ಚಿನ ಪಾಲನ್ನು ಗೆದ್ದಿದ್ದು ತನಿಷಾರ ತಂಡ.

ಮೊದಲಿಗೆ ನಡೆದ ಡ್ರಮ್ ಮೇಲೆ ನಿಂತು ಆಡುವ ಜೂಟಾಟದಲ್ಲಿ ತನಿಷಾ ಹಾಗೂ ನಮ್ರತಾ ಪರಸ್ಪರ ಸ್ಪರ್ಧಿಸಿದರು. ಆ ಆಟದಲ್ಲಿ ತನಿಷಾ ವಿಜಯಿಯಾದರು. ಆ ಬಳಿಕ ನಡೆದ ಬಕೆಟ್​ ನಲ್ಲಿ ಒದ್ದೆ ಚೆಂಡು ಎಸೆಯುವ ಟಾಸ್ಕ್​ನಲ್ಲಿಯೂ ತನಿಷಾ ತಂಡವೇ ಗೆದ್ದಿತು. ಆ ಟಾಸ್ಕ್​ ಬಳಿಕ ತನಿಷಾರ ತಂಡವು ತಮ್ಮ ಅಧಿಕಾರ ಬಳಸಿ ವಿನಯ್ ಅವರನ್ನು ಮುಂದಿನ ವಾರ ಎಲ್ಲ ಟಾಸ್ಕ್​ನಿಂದ ಹೊರಗಿಟ್ಟರು. ಅದರ ಬಳಿಕ ಆಡಲಾದ ಕಾಲಿನಿಂದ ಮರದ ಸಣ್ಣ ಆಕೃತಿಗಳನ್ನು ಜೋಡಿಸುವ ಟಾಸ್ಕ್​ನಲ್ಲಿಯೂ ತನಿಷಾರ ತಂಡವೇ ಗೆದ್ದಿತು. ಮೈಖಲ್ ಅದ್ಭುತವಾಗಿ ಆಡಿ ಕಾರ್ತಿಕ್​ರನ್ನು ಸೋಲಿಸಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್

ಎಲ್ಲ ಟಾಸ್ಕ್ ಗೆದ್ದ ತನಿಷಾರ ತಂಡದ ಸದಸ್ಯರಿಗೆ ನಾಯಕತ್ವದಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು. ಜೊತೆಗೆ ಲಕ್ಷುರಿ ಟಾಸ್ಕ್​ನಲ್ಲಿ ಭಾಗಿಯಾಗುವ ಅವಕಾಶವೂ ಸಹ ಲಭಿಸಿತು. ಆದರೆ ಇದರಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟ ಬಿಗ್​ಬಾಸ್, ನಾಯಕನ ಆಯ್ಕೆಯ ಟಾಸ್ಕ್​ಗೆ ನಾಲ್ಕು ಮಂದಿ ಮಾತ್ರವೇ ಬೇಕಿದ್ದು, ನಿಮ್ಮ ತಂಡದಿಂದ ಮೂವರನ್ನು ಟಾಸ್ಕ್​ ನಿಂದ ಹೊರಗಿಡಿ ಎಂದರು. ಆಗ ತನಿಷಾ, ಡ್ರೋನ್ ಪ್ರತಾಪ್, ಇಶಾನಿ ಹಾಗೂ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಸ್ನೇಹಿತ್​ರನ್ನು ಟಾಸ್ಕ್​ನಿಂದ ಹೊರಗಿಟ್ಟರು. ಇದೀಗ ತನಿಷಾ, ತುಕಾಲಿ ಸಂತು, ನೀತು ಹಾಗೂ ಮೈಖಲ್ ಅವರುಗಳು ನಾಯಕನ ಟಾಸ್ಕ್​ನಲ್ಲಿ ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಮನೆಯ ಕ್ಯಾಪ್ಟನ್ ಆಗಲಿದ್ದಾರೆ ಎಂಬುದು ಶುಕ್ರವಾರದ ಎಪಿಸೋಡ್​ನಲ್ಲಿ ಗೊತ್ತಾಗಲಿದೆ. ಬಿಗ್​ಬಾಸ್ ಕನ್ನಡ ಸೀಸನ್10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?