ಬಿಗ್​ಬಾಸ್: ಪ್ರೀತಿ-ಸ್ನೇಹದ ಮಧ್ಯೆ ಬಂದ ‘ರಾಖಿ’

Bigg Boss Kannada: ಈ ಬಾರಿ ಬಿಗ್​ಬಾಸ್ ಮನೆಯಲ್ಲಿಯೂ ಪ್ರೀತಿ-ಪ್ರೇಮದ ಚಾಪ್ಟರ್​ ಆರಂಭವಾಗಿತ್ತು. ಆದರೆ 'ರಾಖಿ' ಮಧ್ಯ ಬಂದು ಅದಕ್ಕೆ ಬ್ರೇಕ್ ಹಾಕುವಂತೆ ತೋರುತ್ತಿದೆ.

ಬಿಗ್​ಬಾಸ್: ಪ್ರೀತಿ-ಸ್ನೇಹದ ಮಧ್ಯೆ ಬಂದ 'ರಾಖಿ'
Follow us
ಮಂಜುನಾಥ ಸಿ.
|

Updated on: Oct 26, 2023 | 11:31 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಟಾಸ್ಕ್, ಜಗಳ, ದ್ವೇಷ ಹಾಸ್ಯದ ಜೊತೆಗೆ ಪ್ರೀತಿಯೂ ಸಾಮಾನ್ಯ. ಪ್ರತಿ ಸೀಸನ್​ನಲ್ಲಿ ಯಾರಾದರೂ ಪರಸ್ಪರ ಹತ್ತಿರವಾಗುತ್ತಾರೆ. ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರಂತೂ ಪರಸ್ಪರ ಪರಿಚಯವಿಲ್ಲದೆ ಬಿಗ್​ಬಾಸ್ ಮನೆಗೆ ಹೋಗಿ ಜೋಡಿಗಳಾಗಿ ಹೊರ ಬಂದು, ಈಗಲೂ ಪ್ರೀತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಬಾರಿ ಬಿಗ್​ಬಾಸ್ ಮನೆಯಲ್ಲಿಯೂ ಪ್ರೀತಿ-ಪ್ರೇಮದ ಚಾಪ್ಟರ್​ ಆರಂಭವಾಗಿತ್ತು. ಆದರೆ ರಾಖಿ ಮಧ್ಯ ಬಂದು ಅದಕ್ಕೆ ಬ್ರೇಕ್ ಹಾಕುವಂತೆ ತೋರುತ್ತಿದೆ.

ಈ ಬಾರಿಯ ಬಿಗ್​ಬಾಸ್​ನಲ್ಲಿ ಕಾರ್ತಿಕ್ ಮತ್ತು ಸಂಗೀತಾ ಪರಸ್ಪರ ಬಹಳ ಆತ್ಮೀಯವಾಗಿದ್ದಾರೆ. ತಮ್ಮದು ಕೇವಲ ಸ್ನೇಹವಷ್ಟೆ ಎಂದು ಇಬ್ಬರೂ ಬಿಂಬಿಸಿಕೊಂಡಿದ್ದರೂ ಸಹ ಸ್ನೇಹಕ್ಕಿಂತಲೂ ಮಿಗಿಲಾದ ಬಂಧವೊಂದು ಪರಸ್ಪರರಲ್ಲಿ ಕಾಣುತ್ತಿದೆ. ಇನ್ನು ಸ್ನೇಹಿತ್ ಹಾಗೂ ನಮ್ರತಾ ನಡುವೆಯೂ ಇಂಥಹುದೇ ಒಂದು ಬಾಂಡಿಂಗ್ ಶುರುವಾದಂತಿದೆ. ಅದರಲ್ಲಿಯೂ ಸ್ನೇಹಿತ್ ಅಂತೂ ನಮ್ರತಾ ಬಗ್ಗೆ ವಿಶೇಷ ಆಸ್ತೆ ಹೊಂದಿರುವುದನ್ನು ಮನೆಯ ಸದಸ್ಯರೆಲ್ಲ ಗುರುತಿಸಿದ್ದಾರೆ. ಆ ಬಗ್ಗೆ ಸ್ನೇಹಿತ್​ ಕಾಲೆಳೆಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಇನ್ನು ಮೈಖಲ್ ಹಾಗೂ ಇಶಾನಿ ನಡುವೆಯೂ ಆತ್ಮೀಯ ಬಂಧವಿದೆ. ಮೈಖಲ್ ಅಂತೂ ಇಶಾನಿಗೆ ಫ್ಲರ್ಟ್​ ಮಾಡುತ್ತಲೇ ಇರುತ್ತಾರೆ.

ಗುರುವಾರದ ಎಪಿಸೋಡ್​ನಲ್ಲಿ ಸ್ನೇಹಿತ್ ಅನ್ನು ನಮ್ರತಾ ವಿಷಯವಾಗಿ ಮನೆಯ ಸದಸ್ಯರು ಕಾಲೆಳೆಯುತ್ತಿದ್ದರು. ಅದರಲ್ಲಿಯೂ ವಿನಯ್ ಹಾಗೂ ಕಾರ್ತಿಕ್ ಅವರು ತುಸು ಹೆಚ್ಚಾಗಿಯೇ ಕಾಲೆಳೆದರು. ನಮ್ರತಾ ಹಾಗೂ ಸ್ನೇಹಿತ್ ಸಹ ಅದನ್ನು ಎಂಜಾಯ್ ಮಾಡುತ್ತಿದ್ದರು. ಒಮ್ಮೆಯಂತೂ ನಮ್ರತಾ ಸುಖಾ ಸುಮ್ಮನೆ ಸ್ನೇಹಿತ್ ಅನ್ನು ಪ್ರೀತಿಯಿಂದಲೇ ಗೋಳು ಹೊಯ್ದುಕೊಂಡರು. ತುಕಾಲಿ ಅಂತೂ ಸ್ನೇಹಿತ್​ಗೆ ನಮ್ರತಾರನ್ನು ‘ಪಠಾಯಿಸುವ’ ಐಡಿಯಾಗಳನ್ನು ಸಹ ನೀಡಿದರು.

ಇದನ್ನೂ ಓದಿ:ಬಿಗ್​ಬಾಸ್ 10: ಈ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದು ಯಾರು?

ಪ್ರೀತಿ ಪ್ರೇಮದ ಚರ್ಚೆಗಳು ನಡೆಯುತ್ತಿರುವಾಗಲೇ ಮಧ್ಯದಲ್ಲಿ ರಾಖಿ ವಿಷಯ ಸಹ ಬಂತು. ಸ್ನೇಹಿತ್​ಗೆ ನಮ್ರತಾ ರಾಖಿ ಕಟ್ಟಬೇಕು ಎಂದಾಯ್ತು, ಆದರೆ ಸ್ನೇಹಿತ್ ತಾವು ಯಾರಿಂದಲೂ ರಾಖಿ ಕಟ್ಟಿಸಿಕೊಳ್ಳುವುದಿಲ್ಲ ಎಂದರು. ಟಾಸ್ಕ್​ಗಳೆಲ್ಲ ಮುಗಿದ ಬಳಿಕ ರಾತ್ರಿ ಮತ್ತೆ ಅದೇ ವಿಷಯ ಚರ್ಚೆಗೆ ಬಂದು, ಸ್ನೇಹಿತ್​ಗೆ ನಮ್ರತಾ ರಾಖಿ ಕಟ್ಟುವುದು, ಕಾರ್ತಿಕ್​ಗೆ ಸಂಗೀತಾ ರಾಖಿ ಕಟ್ಟುವುದು ಎಂದಾಯ್ತು. ಆಗ ಕಾರ್ತಿಕ್ ತಮಾಷೆಯಾಗಿ ‘ನನ್ನ ತಂಗಿಯನ್ನು ನೀನು ಮದುವೆಯಾಗು, ನಿನ್ನ ತಂಗಿಯನ್ನು ನಾನು ಮದುವೆಯಾಗ್ತೀನಿ’ ಎಂದರು. ಇದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು. ಆ ಬಳಿಕ ಸಂಗೀತಾ, ಕಾರ್ತಿಕ್​ಗೆ ದಾರವೊಂದನ್ನು ರಾಖಿ ರೀತಿಯಲ್ಲಿ ಕಟ್ಟಿ, ಇದನ್ನು ಎಂದಿಗೂ ಬಿಚ್ಚಬೇಡ ಎಂದು ಹೇಳಿದರು. ಕಾರ್ತಿಕ್ ಸಹ ಬೇಸರದಿಂದಲೇ ರಾಖಿ ಕಟ್ಟಿಸಿಕೊಂಡರು.

ಕಾರ್ತಿಕ್ ಹಾಗೂ ಸಂಗೀತಾ ಲವ್​ಸ್ಟೋರಿ ಬಗ್ಗೆ ಕುತೂಹಲದಿಂದ ಪ್ರೇಕ್ಷಕರಿಗೆ ಈ ರಾಖಿ ಟ್ವಿಸ್ಟ್ ತುಸು ಗೊಂದಲ ಮೂಡಿಸಿದೆ. ಇದೇನು ಗಂಭೀರವೋ ಇಲ್ಲ ತಮಾಷೆಗೆ ರಾಖಿ ಕಟ್ಟಿದರೋ ಮುಂದೆ ತಿಳಿಯಲಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು