AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳ್ಳೆಯ ಟಿಆರ್​ಪಿ ಪಡೆದ ಬಿಗ್ ಬಾಸ್; ಧಾರಾವಾಹಿಗಳ ರೇಟಿಂಗ್ ಎಷ್ಟು? ಇಲ್ಲಿದೆ ವಿವರ

ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯನ್ನು ಬಿಗ್ ಬಾಸ್ ನೀಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ‘ಬಿಗ್ ಬಾಸ್’ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಗ್ ಬಾಸ್ ನೋಡುವವರ ಸಂಖ್ಯೆ ಹೆಚ್ಚಿದೆ.

ಒಳ್ಳೆಯ ಟಿಆರ್​ಪಿ ಪಡೆದ ಬಿಗ್ ಬಾಸ್; ಧಾರಾವಾಹಿಗಳ ರೇಟಿಂಗ್ ಎಷ್ಟು? ಇಲ್ಲಿದೆ ವಿವರ
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Oct 27, 2023 | 2:32 PM

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಬಿಗ್​ ಬಾಸ್ ಹೆಚ್ಚು ಗಮನ ಸೆಳೆಯುತ್ತಿದೆ‘. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ಏರ್ಪಟ್ಟಿದೆ. ಎರಡು ಹಾಗೂ ಮೂರನೇ ವಾರದಲ್ಲಿ ಭರ್ಜರಿ ಜಗಳ ಏರ್ಪಡುತ್ತಿದೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯನ್ನು ಬಿಗ್ ಬಾಸ್ (Bigg Boss) ನೀಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ‘ಬಿಗ್ ಬಾಸ್’ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಗ್ ಬಾಸ್ ನೋಡುವವರ ಸಂಖ್ಯೆ ಹೆಚ್ಚಿದೆ. ಒಳ್ಳೆಯ ಟಿಆರ್​ಪಿ ಪಡೆದು ಈ ರಿಯಾಲಿಟಿ ಶೋ ಮುನ್ನುಗ್ಗುತ್ತಿದೆ.

ಬಿಗ್ ಬಾಸ್ ಟಿಆರ್​ಪಿ

ವಾರದ ದಿನಗಳಲ್ಲಿ ಬಿಗ್ ಬಾಸ್​ ಕರ್ನಾಟಕ ಭಾಗದಲ್ಲಿ 5.0 ಟಿವಿಆರ್ ಪಡೆದಿದೆ. ನಗರ ಭಾಗದಲ್ಲಿ 6.4 ಟಿವಿಆರ್ ಸಿಕ್ಕಿದೆ. ವಾರಾಂತ್ಯದಲ್ಲೂ ಇದೇ ರೀತಿಯ ಟಿಆರ್​ಪಿ ಸಿಕ್ಕಿದೆ. ನಗರ ಭಾಗದಲ್ಲಿ 6.4 ಟಿವಿಆರ್ ಹಾಗೂ ಒಟ್ಟಾರೆ ಕರ್ನಾಟಕದಲ್ಲಿ 5.1ಟಿವಿಆರ್ ಸಿಕ್ಕಿದೆ. ಈ ಮೂಲಕ ರಿಯಾಲಿಟಿ ಶೋ ಎಲ್ಲರ ಮೆಚ್ಚುಗೆ ಪಡೆದಿದೆ.

ಧಾರಾವಾಹಿ ಟಿಆರ್​ಪಿ

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಧಾರಾವಾಹಿ ಎಲ್ಲರಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಕಳೆದ ಹಲವು ತಿಂಗಳಿಂದ ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ. ಈ ಧಾರಾವಾಹಿ ಭರ್ಜರಿ ಸ್ಪರ್ಧೆ ನೀಡುತ್ತಿದೆ. ಸಾವಿರಾರು ಎಪಿಸೋಡ್​ಗಳನ್ನು ಪೂರ್ಣಗೊಳಿಸಿರುವ ಧಾರಾವಾಹಿ ಈಗಲೂ ರೇಸ್​​ನಲ್ಲಿ ಮುಂಚೂಣಿಯಲ್ಲಿದೆ.

ಇದನ್ನೂ ಓದಿ:

‘ಅಮೃತಧಾರೆ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಗೌತಮ್ ಹಾಗೂ ಭೂಮಿಕಾಗೆ ಮದುವೆ ಆಗಿದೆ. ಇಬ್ಬರ ಮಧ್ಯೆ ಈಗ ಪ್ರೀತಿ ಮೂಡುತ್ತಿದೆ.  ನಾಲ್ಕನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಇದೆ. ಐದನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಇದೆ. ಬಿಗ್ ಬಾಸ್ ಆರಂಭ ಆಗಿದ್ದಕ್ಕೋ ಏನೋ ‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿ ಕುಸಿದಿದೆ. ಈ ಧಾರಾವಾಹಿ ಆರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:31 pm, Fri, 27 October 23