ಬಿಗ್​ಬಾಸ್ 10: ಈ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದು ಯಾರು?

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10: ಬಿಗ್​ಬಾಸ್ ಮನೆಯಿಂದ ಮೊದಲ ವಾರ ಸ್ನೇಕ್ ಶ್ಯಾಮ್ ಅವರು ಹೊರಗೆ ಬಂದಿದ್ದರು. ಎರಡನೇ ಭಾಗ್ಯಶ್ರೀ, ಸಂಗೀತಾ. ತನಿಷಾ, ಗೌರೀಶ್ ಅವರುಗಳು ಎಲಿಮಿನೇಷನ್ ಪಟ್ಟಿಯಲ್ಲಿ ಉಳಿದುಕೊಂಡಿದ್ದರು. ಇವರಲ್ಲಿ ಹೊರ ಬಂದಿದ್ಯಾರು?

ಬಿಗ್​ಬಾಸ್ 10: ಈ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದು ಯಾರು?
ಬಿಗ್ ಬಾಸ್
Follow us
ಮಂಜುನಾಥ ಸಿ.
|

Updated on: Oct 22, 2023 | 11:15 PM

ಬಿಗ್​ಬಾಸ್ 10ರ (Bigg Boss Kannada) ಎರಡನೇ ವಾರದ ಕಿಚ್ಚ ಪಂಚಾಯಿತಿ ಭಾನುವಾರ ನಡೆದಿದೆ. ಕಾರ್ತಿಕ್, ಸಂಗೀತಾ, ತುಕಾಲಿ ಸಂತು, ಭಾಗ್ಯಶ್ರೀ, ಗೌರೀಶ್, ತನಿಷಾ, ನೀತು ಇನ್ನೂ ಹಲವರು ಪ್ರಮುಖ ಸದಸ್ಯರು ಈ ವಾರ ನಾಮಿನೇಟ್ ಆಗಿದ್ದರು. ಶನಿವಾರದ ಎಪಿಸೋಡ್​ನಲ್ಲಿ ತುಕಾಲಿ ಸಂತು, ಕಾರ್ತಿಕ್ ಅವರುಗಳು ನಾಮಿನೇಷನ್​ನಿಂದ ಪಾರಾಗಿದ್ದರು. ಭಾನುವಾರಕ್ಕೆ ಸಂಗೀತಾ, ಭಾಗ್ಯಶ್ರೀ, ಗೌರೀಶ್, ತನಿಷಾ ಅವರುಗಳು ಉಳಿದುಕೊಂಡಿದ್ದರು. ಇವರಲ್ಲಿ ಒಬ್ಬರು ಮನೆಯಿಂದ ಹೊರಗೆ ಬಂದಿದ್ದಾರೆ.

ಶನಿವಾರದ ಎಪಿಸೋಡ್​ನಲ್ಲಿ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ನಟ ಸುದೀಪ್, ಭಾನುವಾರದ ಎಪಿಸೋಡ್​ನಲ್ಲಿ ತಮಾಷೆಯಾಗಿಯೇ ಶೋ ಅನ್ನು ನಡೆಸಿಕೊಟ್ಟರು. ನಡು-ನಡುವೆ ಕೆಲ ಬುದ್ಧಿವಾದಗಳನ್ನು, ಕೆಲವರು ನಡೆದುಕೊಂಡ ರೀತಿ, ಆಡಿದ ಮಾತುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಹ ಸುದೀಪ್ ಹಂಚಿಕೊಂಡರು. ನಗುತ್ತಾ-ನಗಿಸುತ್ತಾ ಎಪಿಸೋಡ್​ನ ಕೊನೆಯಲ್ಲಿ ಈ ವಾರ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಕರೆದರು ಸುದೀಪ್.

ನಾಮಿನೇಟ್ ಆದವರಲ್ಲಿ ಭಾನುವಾರ ಸಂಗೀತಾ, ಭಾಗ್ಯಶ್ರೀ, ಗೌರೀಶ್, ತನಿಷಾ ಅವರುಗಳು ಉಳಿದುಕೊಂಡಿದ್ದರು. ಇವರಲ್ಲಿ ಮೊದಲಿಗೆ ಸಂಗೀತಾ ಅವರು ಎಲಿಮಿನೇಷನ್​ನಿಂದ ಪಾರಾದರು. ಆ ನಂತರ ತನಿಷಾ ಅವರು ಸಹ ಎಲಿಮಿನೇಷನ್​ನಿಂದ ಪಾರಾದರು. ಅಂತಿಮವಾಗಿ ಪತ್ರಕರ್ತ ಗೌರೀಶ್ ಅಕ್ಕಿ ಅವರನ್ನು ಬಿಗ್​ಬಾಸ್ ಮನೆಯಿಂದ ಹೊರಗೆ ಕರೆದರು ಸುದೀಪ್. ಭಾಗ್ಯಶ್ರೀ ಅವರಿಗೆ ಮನೆಯಲ್ಲಿ ಉಳಿಯಲು ಇನ್ನೊಂದು ವಾರದ ಕಾಲಾವಕಾಶ ದೊರಕಿತು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಬೃಂದಾವನ ಕುಟುಂಬ: ಹಾಡು-ಕುಣಿತ ಕೊನೆಯಲ್ಲಿ ಕಣ್ಣೀರು

ಮನೆಯ ಸದಸ್ಯರು ಗೌರೀಶ್ ಅವರನ್ನು ತಬ್ಬಿ ಬೇಸರದಿಂದ ಕಳಿಸಿಕೊಟ್ಟರು. ಬಳಿಕ ಸುದೀಪ್​ ಅವರನ್ನು ಭೇಟಿಯಾಗಲು ತೆರಳುವ ಮುನ್ನ, ನೀತು ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದರು ಗೌರೀಶ್ ಅಕ್ಕಿ. ಸುದೀಪ್ ಮುಂದೆ ಬಂದಾಗಲೂ, ಎರಡು ವಾರ ನನಗೆ ಒಳ್ಳೆಯ ಅನುಭವಗಳು ದೊರಕಿತು, ಬಿಗ್​ಬಾಸ್ ಒಂದು ಸುಂದರವಾದ ಪಂಜರ, ಆ ಪಂಜರದಲ್ಲಿ ವ್ಯಕ್ತಿತ್ವಗಳ ಕಿತ್ತಾಟ ನಡೆಯುತ್ತಿದೆ ಎಂದು ಬಣ್ಣಿಸಿದರು. ನಾನು ಸಾಧ್ಯವಾದಷ್ಟು ಶಕ್ತಿ ಮೀರಿ ಪ್ರಯತ್ನ ಪಟ್ಟೆ, ಟಾಸ್ಕ್​ಗಳಲ್ಲಿ ಆಟವಾಡಿದೆ ವಯೋಸಹಜ ಕಾರಣದಿಂದ ಅಥವಾ ಉಳಿದವರು ನನಗಿಂತಲೂ ಶಕ್ತರಾಗಿರುವ ಕಾರಣ ನಾನು ಅಂದುಕೊಂಡಂತೆ ಫಲಿತಾಂಶ ನನಗೆ ಬರಲಿಲ್ಲ ಎಂದರು ಗೌರೀಶ್.

ಮೊದಲ ವಾರ ಸ್ನೇಕ್ ಶ್ಯಾಮ್ ಅವರು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಎರಡನೇ ವಾರ ಗೌರೀಶ್ ಅಕ್ಕಿ ಅವರು ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಮುಂದಿನ ವಾರಕ್ಕೆ ನೀತು ವನಜಾಕ್ಷಿ ನೇರವಾಗಿ ನಾಮಿನೇಟ್ ಆಗಿದ್ದಾರೆ. ಭಾಗ್ಯಶ್ರೀ ಸಹ ಇನ್ನೂ ಅಪಾಯದಲ್ಲಿಯೇ ಇದ್ದಾರೆ. ಹಾಗಾಗಿ ಮುಂದಿನ ವಾರ ಯಾರು ಹೊರಗೆ ಬರಬಹುದು ಎಂಬ ಕುತೂಹಲ ಇದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ