ಬಿಗ್​ಬಾಸ್ ಮನೆಯಲ್ಲಿ ‘ಬೃಂದಾವನ’ ಕುಟುಂಬ: ಹಾಡು-ಕುಣಿತ ಕೊನೆಯಲ್ಲಿ ಕಣ್ಣೀರು

Bigg Boss: ಬಿಗ್​ಬಾಸ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಬಿಗ್​ಬಾಸ್ ಮನೆಗೆ 'ಬೃಂದಾವನ' ಕುಟುಂಬದ ಸದಸ್ಯರು ಆಗಮಿಸಿದ್ದರು. ಹಾಡಿ-ಕುಣಿದು, ಹಾಸ್ಯ ಮಾಡಿ ಅವರನ್ನು ರಂಜಿಸಿದರು ಮನೆಯ ಸದಸ್ಯರು.

ಬಿಗ್​ಬಾಸ್ ಮನೆಯಲ್ಲಿ 'ಬೃಂದಾವನ' ಕುಟುಂಬ: ಹಾಡು-ಕುಣಿತ ಕೊನೆಯಲ್ಲಿ ಕಣ್ಣೀರು
ಬಿಗ್​ಬಾಸ್
Follow us
ಮಂಜುನಾಥ ಸಿ.
|

Updated on:Oct 20, 2023 | 11:44 PM

ಬಿಗ್​ಬಾಸ್ (Bigg Boss) ಮನೆಗೆ ಹೊಸ ಅತಿಥಿಗಳು ಆಗಮಿಸಿದ್ದಾರೆ. ಅದೂ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 36 ಮಂದಿ. ಬಿಗ್​ಬಾಸ್ ಮನೆಯ 16 ಮಂದಿ ಕುಟುಂಬ ಹಾಗೂ 36 ಮಂದಿಯ ‘ಬೃಂದಾವನ’ ಕುಟುಂಬ ಒಟ್ಟಿಗೆ ಗುರುವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ ಮನೆಯಲ್ಲಿ ಹಾಡು-ಕುಣಿದು ಸಂಭ್ರಮಿಸಿದ್ದಾರೆ. ‘ಬೃಂದಾವನ’ ಧಾರಾವಾಹಿಯ ನಟರು ಇಂದು ಬಿಗ್​ಬಾಸ್ ಮನೆಗೆ ಆಗಮಿಸಿದ್ದರು, ಅವೆರೆಲ್ಲರನ್ನೂ ಹಾಡಿ-ಕುಣಿದು ರಂಜಿಸುವಂತೆ ಮನೆಯ ಸದಸ್ಯರಿಗೆ ಬಿಗ್​ಬಾಸ್ ಆದೇಶವಾಗಿತ್ತು.

ದಿನದ ಆರಂಭದಲ್ಲಿ ಲಕ್ಷುರಿ ಟಾಸ್ಕ್ ಅನ್ನು ಸರಿಯಾಗಿ ಮಾಡದೆ ಲಕ್ಷುರಿ ಬಜೆಟ್ ಅನ್ನು ಮನೆಯ ಸದಸ್ಯರು ಕಳೆದುಕೊಂಡರು. ಆ ಬಳಿಕ ವಾರದ ಅತ್ಯುತ್ತಮ ಹಾಗೂ ಕಳಪೆಯನ್ನು ಆಯ್ಕೆ ಮಾಡಬೇಕಾಯ್ತು. ಅದರಂತೆ ಅತ್ಯುತ್ತಮನಾಗಿ ರಕ್ಷಕ್​ ಹಾಗೂ ಕಳಪೆಯಾಗಿ ಇಶಾನಿಯನ್ನು ಆರಿಸಲಾಯ್ತು. ಇದರ ಬಳಿಕ ಮನೆಗೆ ಆಗಮಿಸಲಿರುವ ಅತಿಥಿಗಳನ್ನು ರಂಜಿಸಲು ತಯಾರಿ ಆರಂಭ ಮಾಡಿದರು. ಹಾಡು, ಡ್ಯಾನ್ಸ್, ವಾರ್ತಾ ವಾಚನೆ ಹಾಗೂ ಕಾಮಿಡಿ ನಾಟಕವನ್ನು ಅತಿಥಿಗಳ ಎದುರು ಬಿಗ್​ಬಾಸ್ ಮನೆ ಸದಸ್ಯರು ಪ್ರದರ್ಶಿಸಬೇಕಿತ್ತು. ಮನೆಯ ಸದಸ್ಯರೆಲ್ಲರೂ ಸೇರಿಕೊಂಡು ಇದಕ್ಕಾಗಿ ಒಟ್ಟಿಗೆ ತಯಾರಿ ನಡೆಸಿದರು.

ಇದನ್ನೂ ಓದಿ:ಹಾಲಿ ಕ್ಯಾಪ್ಟನ್​ಗೆ ಸೋಲುಣಿಸಿ ಬಿಗ್​ಬಾಸ್ ಮನೆಗೆ ಕ್ಯಾಪ್ಟನ್ ಆದ ಬುಲೆಟ್ ರಕ್ಷಕ್: ಮುಂದಿದೆ ದೊಡ್ಡ ಸವಾಲು

‘ಬೃಂದಾವನ’ ಕುಟುಂಬದ ಮೂವರು ಸದಸ್ಯರು ಮೊದಲಿಗೆ ಮನೆಗೆ ಬಂದು ಕುಶಲೋಪರಿ ಮುಗಿಸಿ ಮನೆಯ ಸದಸ್ಯರ ಬಳಿ ಮದುವೆಯ ಬಗ್ಗೆ ಅಭಿಪ್ರಾಯ ಕೇಳಿದರು. ಅದಾದ ಬಳಿಕ ‘ಬೃಂದಾವನ’ ತಂಡದ ಎಲ್ಲ ಸದಸ್ಯರು ಮನೆಗೆ ಬಂದರು. ಬಳಿಕ ಅವರನ್ನು ಮನೊರಂಜಿಸುವ ಕಾರ್ಯಕ್ರಮ ಪ್ರಾರಂಭವಾಯ್ತು. ಸಿರಿ ಅವರು ನಿರೂಪಣೆ ಮಾಡಿದರು. ಮೊದಲಿಗೆ ಬಂದ ಸ್ಟೈಲಿಷ್ ಬಾಯ್ಸ್, ವಿನಯ್, ಕಾರ್ತಿಕ್, ಸ್ನೇಹಿತ್, ರಕ್ಷಕ್, ಮೈಖಲ್ ಅವರುಗಳು ಅಪ್ಪು ಅವರ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದರು. ಅದರ ಬಳಿಕ ಮನೆಯ ಮಹಿಳೆಯರು ಸಹ ಅದ್ಭುತವಾಗಿ ಡ್ಯಾನ್ಸ್ ಮಾಡಿದರು. ಗೌರೀಶ್ ಅಕ್ಕಿ ಅವರು ಮನೆಯ ವಾರ್ತೆಯನ್ನು ಓದಿ ತಿಳಿಸಿದರು.

ತುಕಾಲಿ ಸಂತು ಹಿರಿಯ ಹಾಸ್ಯ ನಟರ ಮಿಮಿಕ್ರಿ ಮಾಡಿ ರಂಜಿಸಿದರು. ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಹಾಡು ಹಾಡಿದರು. ವರ್ತೂರು ಸಂತೋಶ್, ತುಕಾಲಿ ಸಂತೋಶ್, ಭಾಗ್ಯಾ ಹಾಗೂ ತನಿಷಾ ಸೇರಿ ಕಾಮಿಡಿ ಸ್ಕಿಟ್ ಮಾಡಿದರು. ಬಳಿಕ ಮತ್ತೊಮ್ಮೆ ಮನೆಯ ಎಲ್ಲ ಸದಸ್ಯರೂ ಸೇರಿ ಡ್ಯಾನ್ಸ್ ಮಾಡಿದರು. ಮನೆಯ ಸದಸ್ಯರನ್ನು ಸೇರಿಕೊಂಡ ಬೃಂದಾವನ ಸದಸ್ಯರು ಸಹ ಎಲ್ಲರೊಟ್ಟಿಗೆ ಕುಣಿದು ಸಂಭ್ರಮಿಸಿದರು.

‘ಬೃಂದಾವನ’ ಸದಸ್ಯರು ಮನೆಯಿಂದ ತೆರಳಿದ ಬಳಿಕ, ಮನೆಯ ಸದಸ್ಯರೆಲ್ಲ ತಮ್ಮ ಕುಟುಂಬವನ್ನು ನೆನಪಿಸಿಕೊಂಡು ಭಾವುಕರಾದರು. ಬಿಗ್​ಬಾಸ್ ಸೂಚನೆಯಂತೆ ಮನೆಯ ಸದಸ್ಯರು, ತಮ್ಮ ತಮ್ಮ ಕುಟುಂಬದ ಬಗ್ಗೆ ಮಾತನಾಡಿದರು. ಈ ವೇಳೆ ಎಲ್ಲರೂ ಭಾವುಕರಾದರು. ಖುಷಿಯಿಂದ ದಿನ ಕಳೆದ ಬಿಗ್​ಬಾಸ್ ಸದಸ್ಯರು ದಿನದ ಕೊನೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕುವಂತಾಯ್ತು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:25 pm, Fri, 20 October 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ