ಹಾಲಿ ಕ್ಯಾಪ್ಟನ್​ಗೆ ಸೋಲುಣಿಸಿ ಬಿಗ್​ಬಾಸ್ ಮನೆಗೆ ಕ್ಯಾಪ್ಟನ್ ಆದ ಬುಲೆಟ್ ರಕ್ಷಕ್: ಮುಂದಿದೆ ದೊಡ್ಡ ಸವಾಲು

ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ವಾರದಲ್ಲಿ ಸ್ನೇಹಿತ್ ಕ್ಯಾಪ್ಟನ್ ಆಗಿದ್ದರು. ಇದೀಗ ಎರಡನೇ ಕ್ಯಾಪ್ಟನ್ ಆಗಿ ಬುಲೆಟ್ ರಕ್ಷಕ್ ಆಯ್ಕೆ ಆಗಿದ್ದಾರೆ.

ಹಾಲಿ ಕ್ಯಾಪ್ಟನ್​ಗೆ ಸೋಲುಣಿಸಿ ಬಿಗ್​ಬಾಸ್ ಮನೆಗೆ ಕ್ಯಾಪ್ಟನ್ ಆದ ಬುಲೆಟ್ ರಕ್ಷಕ್: ಮುಂದಿದೆ ದೊಡ್ಡ ಸವಾಲು
Follow us
|

Updated on:Oct 19, 2023 | 11:41 PM

ಬಿಗ್​ಬಾಸ್ (Bigg Boss) ಮನೆಯ ಕ್ಯಾಪ್ಟನ್ಸಿ ಪಡೆಯುವುದು ಸುಲಭದ ಮಾತಲ್ಲ. ಕ್ಯಾಪ್ಟನ್ ಆದವನಿಗೆ ಹಲವು ಸವಲತ್ತುಗಳನ್ನು ಬಿಗ್​ಬಾಸ್ ನೀಡುತ್ತಾರೆ. ಅಲ್ಲದೆ, ಬಿಗ್​ಬಾಸ್ ಮನೆಯ ಕ್ಯಾಪ್ಟನ್ ಆಗುವುದು ಸ್ಪರ್ಧಿಗಳ ಪಾಲಿಗೆ ಪ್ರತಿಷ್ಠೆ ಸಹ. ಆದರೆ ಕ್ಯಾಪ್ಟನ್ ಆಗುವುದು ಸುಲಭವಲ್ಲ. ಅದಕ್ಕೆ ಕಠಿಣವಾದ ಟಾಸ್ಕ್​ಗಳನ್ನು ಪೂರೈಸಬೇಕು. ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ವಾರದಲ್ಲಿ ಸ್ನೇಹಿತ್ ಕ್ಯಾಪ್ಟನ್ ಆಗಿದ್ದರು. ಇದೀಗ ಎರಡನೇ ಕ್ಯಾಪ್ಟನ್ ಆಗಿ ಬುಲೆಟ್ ರಕ್ಷಕ್ ಆಯ್ಕೆ ಆಗಿದ್ದಾರೆ.

ಒಂದು ವಾರ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಅವರ ಕ್ಯಾಪ್ಟನ್ಸಿ ಅವಧಿ ಗುರುವಾರಕ್ಕೆ ಅಂತ್ಯವಾಯಿತು. ಮನೆಯ ಸದಸ್ಯರು ತಮಗೆ ತೋಚಿದಂತೆ ಕ್ಯಾಪ್ಟನ್​ಗೆ ಅಂಕಕಗಳನ್ನು ನೀಡಿದರು. ತನಿಷಾ, ಸಂಗೀತಾ ಇನ್ನು ಕೆಲವರು ಅವರುಗಳು ಕಡಿಮೆ ಅಂಕಗಳನ್ನು ನೀಡಿದರೆ. ತುಕಾಲಿ ಸಂತು 10 ಅಂಕ ಹಾಗೂ ವಿನಯ್ ಒಂಬತ್ತು ಅಂಕಗಳನ್ನು ನೀಡಿ ಸ್ನೇಹಿತ್​ರ ಕ್ಯಾಪ್ಟೆನ್ಸಿಯನ್ನು ಕೊಂಡಾಡಿದರು. ಅದಾದ ಬಳಿಕ ಮನೆಯ ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡುವ ಸಮಯ ಬಂತು.

ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ಗೆ ಭಾಗವಹಿಸಲು ಮುಂದೆ ಬಂದವರು ಐದು ಜನ. ಸಂಗೀತಾ, ಕಾರ್ತಿಕ್, ಮೈಕಲ್, ರಕ್ಷಕ್, ಮತ್ತು ಸ್ನೇಹಿತ್. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಇಲ್ಲದ ಇತರೆ ಸದಸ್ಯರು, ತಮಗೆ ಯಾರು ಕ್ಯಾಪ್ಟನ್ ಆಗಬಾರದು ಎನಿಸುತ್ತದೆಯೋ ಅವರನ್ನು ಸ್ವಿಮ್ಮಿಂಗ್ ಪೂಲ್​ಗೆ ದೂಡಬೇಕಿತ್ತು. ಹೀಗೆ ದೂಡುವ ಮುನ್ನ ಸೂಕ್ತ ಕಾರಣವನ್ನು ಸಹ ಅವರು ನೀಡಬೇಕಿತ್ತು. ಈ ಟಾಸ್ಕ್​ನಲ್ಲಿ ಯಾರು ಅತ್ಯಂತ ಕಡಿಮೆ ಬಾರಿ ಸ್ವಿಮ್ಮಿಂಗ್​ ಪೂಲ್​ಗೆ ದೂಡಲ್ಪಡುತ್ತಾರೆಯೋ ಆ ಇಬ್ಬರು ಕ್ಯಾಪ್ಟನ್ಸಿ ಟಾಸ್ಕ್​ ಆಡಲು ಅರ್ಹರು ಎನ್ನಿಸಿಕೊಳ್ಳುತ್ತಾರೆ. ಇದು ಬಿಗ್​ಬಾಸ್ ಹಾಕಿದ್ದ ನಿಯಮ.

ಇದನ್ನೂ ಓದಿ:ಸಂಗೀತಾ ಕಾರಣಕ್ಕೆ ವಿನಯ್​-ಕಾರ್ತಿಕ್​ ನಡುವೆ ಮನಸ್ತಾಪ; ಬಿಗ್​ ಬಾಸ್​ನಲ್ಲಿ ಇದು ನಿರ್ಣಾಯಕ ಹಂತ

ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ಸಂಗೀತಾ, ಕಾರ್ತಿಕ್, ಮೈಕಲ್, ರಕ್ಷಕ್, ಮತ್ತು ಸ್ನೇಹಿತ್ ಅವರುಗಳಲ್ಲಿ ಅತ್ಯಂತ ಕಡಿಮೆ ಬಾರಿ ಸ್ವಿಮ್ಮಿಂಗ್ ಪೂಲ್​ಗೆ ದೂಡಲ್ಪಟ್ಟಿದ್ದು ಸ್ನೇಹಿತ್ ಹಾಗೂ ರಕ್ಷಕ್. ಹಾಗಾಗಿ ಅಂತಿಮ ಟಾಸ್ಕ್​ಗೆ ರಕ್ಷಕ್ ಹಾಗೂ ಸ್ನೇಹಿತ್​ ಅವರುಗಳು ಆಯ್ಕೆ ಆದರು. ಅಲ್ಲಿಯೂ ಟಾಸ್ಕ್​ ಸರಳವಿರಲಿಲ್ಲ. ಶಕ್ತಿ, ತಾಳ್ಮೆ, ಯುಕ್ತಿ ಮೂರನ್ನು ಏಕಕಾಲದಲ್ಲಿ ಬಳಸಿ ಆಡುವ ಟಾಸ್ಕ್ ಅದಾಗಿತ್ತು. ಟಾಸ್ಕ್​ ಅನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದು ಡ್ರೋನ್ ಪ್ರತಾಪ್.

ಸೊಂಟಕ್ಕೆ ಕಟ್ಟಿದ್ದ ಹಗ್ಗವನ್ನು ಹಿಡಿದುಕೊಂಡು ಚಚ್ಚೌಕದ ಟೇಬಲ್​ ಮೇಲೆ ರಚಿಸಲಾಗಿದ್ದ ಚೌಕಾಕಾರದ ಒಳಗೆ ಬಾಲ್​ಗಳನ್ನು ಇಡುತ್ತಾ ಪಿರಮಿಡ್ ಆಕಾರವನ್ನು ನಿರ್ಮಿಸಬೇಕಿತ್ತು. ಕೆಳಗೆ ಹೆಚ್ಚು ಬಾಲ್​ಗಳು ಅದರ ಮೇಲ್ಪದರಲ್ಲಿ ತುಸು ಕಡಿಮೆ ಅದರ ಮೇಲ್ಪದರಲ್ಲಿ ಇನ್ನಷ್ಟು ಕಡಿಮೆ ಹೀಗೆ ಮಾಡುತ್ತಾ ಸಾಗಿ ತುದಿಯಲ್ಲಿ ಒಂದು ಬಾಲನ್ನು ಇಟ್ಟು ಪಿರಮಿಡ್ ಆಕಾರವನ್ನು ನಿರ್ಮಿಸಬೇಕಿತ್ತು. ಈ ಟಾಸ್ಕ್​ನಲ್ಲಿ ಅದ್ಭುತವಾಗಿ ಆಡಿ ರಕ್ಷಕ್ ಗೆದ್ದು ಮನೆಯ ಕ್ಯಾಪ್ಟನ್ ಆದರು.

ಮನೆಯ ಅತ್ಯಂತ ಕಡಿಮೆ ವಯಸ್ಸಿನ ಮೂವರು ಸ್ಪರ್ಧಿಗಳಲ್ಲಿ ರಕ್ಷಕ್ ಸಹ ಒಬ್ಬರು. ಮನೆಯಲ್ಲಿ ಭಾಗ್ಯಶ್ರೀ, ಸಿರಿ, ವಿನಯ್ ಇನ್ನೂ ಕೆಲವು ಹಿರಿಯ ಹಾಗೂ ಗಟ್ಟಿ ವ್ಯಕ್ತಿತ್ವದ, ದೊಡ್ಡ ದನಿಯ ಸ್ಪರ್ಧಿಗಳಿದ್ದಾರೆ. ಇವರುಗಳನ್ನು ಈ ವಾರ ರಕ್ಷಕ್ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕಾರಿ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:40 pm, Thu, 19 October 23

ತಾಜಾ ಸುದ್ದಿ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್