‘ಮಾತು ಹಿಂಪಡೆಯುತ್ತೇನೆ’; ಕೊನೆಗೂ ದ್ವೇಷ ಮರೆತು ಒಂದಾದ ವಿನಯ್-ಸಂಗೀತಾ

‘ಬಿಗ್ ಬಾಸ್’ಗೆ ಬರುವುದಕ್ಕೂ ಮೊದಲೇ ಸಂಗೀತಾ ಹಾಗೂ ವಿನಯ್ ಮಧ್ಯೆ ಪರಿಚಯ ಇತ್ತು. ಬಿಗ್ ಬಾಸ್ ಮನೆಗೆ ಬಂದ ನಂತರದಲ್ಲಿ ಇವರ ಮಧ್ಯೆ ಕಿರಿಕ್ ಆಯಿತು. ಬದ್ಧ ವೈರಿಗಳಂತೆ ಇವರು ವರ್ತಿಸೋಕೆ ಆರಂಭಿಸಿದರು. ಈ ಬೆಳವಣಿಗೆ ಎಲ್ಲರಿಗೂ ಶಾಕ್ ತಂದಿತ್ತು. ಈಗ ಇಬ್ಬರೂ ರಾಜಿ ಆಗಿದ್ದಾರೆ.

‘ಮಾತು ಹಿಂಪಡೆಯುತ್ತೇನೆ’; ಕೊನೆಗೂ ದ್ವೇಷ ಮರೆತು ಒಂದಾದ ವಿನಯ್-ಸಂಗೀತಾ
ವಿನಯ್-ಸಂಗೀತಾ
Follow us
ರಾಜೇಶ್ ದುಗ್ಗುಮನೆ
|

Updated on: Oct 20, 2023 | 7:38 AM

ಕಳೆದ ವಾರ ಸಂಗೀತಾ ಹೆಸರನ್ನು ವಿನಯ್ ಅವರು ನಾಮಿನೇಷನ್​ಗೆ ತೆಗೆದುಕೊಂಡಿದ್ದರು. ಈ ಆಯ್ಕೆಗೆ ಅವರು ರೂಲ್ಸ್ ಬ್ರೇಕ್ ಮಾಡಿರುವ ಕಾರಣ ನೀಡಿದ್ದರು. ಇದು ಸಂಗೀತಾಗೆ (Sangeetha Sringeri) ಸರಿ ಎನಿಸಿರಲಿಲ್ಲ. ಈ ಕಾರಣದಿಂದಲೇ ಇಬ್ಬರ ಮಧ್ಯೆ ಕಿರಿಕ್ ಉಂಟಾಗಿತ್ತು. ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದರು. ಈಗ ಇಬ್ಬರೂ ದ್ವೇಷ ಮರೆತು ರಾಜಿ ಆಗಿದ್ದಾರೆ. ಈ ವಿಚಾರ ಇಬ್ಬರ ಅಭಿಮಾನಿಗಳಿಗೆ ಖುಷಿ ನಿಡಿದೆ. ಮುಂದಿನ ದಿನಗಳಲ್ಲಿ ಇವರು ಮೊದಲಿನಂತೆ ಒಳ್ಳೆಯ ಗೆಳೆಯರಾಗಿ ಇರುತ್ತಾರಾ ಎಂಬ ಪ್ರಶ್ನೆ ಮೂಡಿದೆ.

‘ಬಿಗ್ ಬಾಸ್’ಗೆ ಬರುವುದಕ್ಕೂ ಮೊದಲೇ ಸಂಗೀತಾ ಹಾಗೂ ವಿನಯ್ ಮಧ್ಯೆ ಪರಿಚಯ ಇತ್ತು. ಒಂದೇ ಧಾರಾವಾಹಿಯಲ್ಲಿ ಇವರು ನಟಿಸಿದ್ದರು. ಬಿಗ್ ಬಾಸ್ ಮನೆಗೆ ಬಂದ ನಂತರದಲ್ಲಿ ಇವರ ಮಧ್ಯೆ ಕಿರಿಕ್ ಆಯಿತು. ಬದ್ಧ ವೈರಿಗಳಂತೆ ಇವರು ವರ್ತಿಸೋಕೆ ಆರಂಭಿಸಿದರು. ಈ ಬೆಳವಣಿಗೆ ಎಲ್ಲರಿಗೂ ಶಾಕ್ ತಂದಿತ್ತು. ಈಗ ಇಬ್ಬರೂ ರಾಜಿ ಆಗಿದ್ದಾರೆ.

ಇತ್ತೀಚೆಗೆ ಟಾಸ್ಕ್ ಆಡುವಾಗ ಸಂಗೀತಾ ಅವರು ವಿನಯ್ ವಿರುದ್ಧ ಕೂಗಾಡಿದ್ದರು. ನಿಮ್ಮ ಧ್ವನಿ ನನಗೆ ಭಯ ತರಿಸುವ ರೀತಿಯಲ್ಲಿ ಇದೆ ಎಂದು ಹೇಳಿದ್ದರು. ಇದು ವಿನಯ್ ಅಸಮಾಧಾನಕ್ಕೆ ಕಾರಣ ಆಗಿತ್ತು. ವಿನಯ್ ಅವರ ವರ್ತನೆಯಿಂದ ಸಂಗೀತಾ ಅವರು ಖಿನ್ನೆತೆಗೆ ಒಳಗಾಗುತ್ತಿದ್ದಾರೆ ಎಂದೆಲ್ಲ ಭಾಗ್ಯಶ್ರೀ ಸುದ್ದಿ ಹಬ್ಬಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಸಂಗೀತಾ ಹಾಗೂ ವಿನಯ್ ಮತ್ತಷ್ಟು ಕುಪಿತಗೊಂಡರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಬಿಸಿ ಗಾಳಿ​: ಕೋಪದಲ್ಲಿ ಬಾಯಿಗೆ ಬಂದಂತೆ ಬೈದ ವಿನಯ್ ಗೌಡ

ಅಕ್ಟೋಬರ್ 19 ಎಪಿಸೋಡ್​ನಲ್ಲಿ ಇಬ್ಬರೂ ಕುಳಿತು ಮಾತನಾಡಿದ್ದಾರೆ. ‘ನಡೆದಿರುವ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ. ಜಗಳ ಆಡುವಾಗ ನಿಮ್ಮ ಮಾತು ಬೆದರಿಕೆ ಹಾಕುವಂತಿದೆ ಎಂದಿದ್ದೆ. ಅದು ಸಿಟ್ಟಲ್ಲಿ ಹೇಳಿದ್ದು ಅಷ್ಟೇ. ಆ ಮಾತನ್ನು ಹಿಂಪಡೆಯುತ್ತೇನೆ’ ಎಂದರು ಸಂಗೀತಾ. ‘ನಾವು ಮೊದಲಿನಂತೆ ಇದ್ದುಬಿಡೋಣ. ಈಗಾದ ಘಟನೆಯನ್ನು ಮರೆಯೋಣ’ ಎಂದರು ವಿನಯ್.

ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು