‘ನಾನು ಇಲ್ಲಿ ಬಂದು ತಪ್ಪು ಮಾಡಿದೆ’; ಎರಡನೇ ವಾರಕ್ಕೆ ಸಂಗೀತಾಗೆ ಬಿಗ್ ಬಾಸ್ ಸಾಕಾಯ್ತು  

Sangeetha Sringeri: ‘ನಾನು ಇಲ್ಲಿ ಬಂದು ತಪ್ಪು ಮಾಡಿದೆ ಅನಿಸುತ್ತಿದೆ. ಇದು ನನ್ನ ತಪ್ಪು ನಿರ್ಧಾರ. ಅವರ ಬಳಿ ಉಗಿಸಿಕೊಳ್ಳೋದು, ಈ ರೀತಿ ಶಿಕ್ಷೆ ಅನುಭವಿಸೋದು ಯಾರಿಗೆ ಬೇಕು? ನಮ್ಮ ತಂಡ ನಾಳೆಯೂ ಗೆಲ್ಲಲ್ಲ’ ಎಂದು ಕಣ್ಣೀರು ಹಾಕಿದ್ದಾರೆ ಸಂಗೀತಾ.

‘ನಾನು ಇಲ್ಲಿ ಬಂದು ತಪ್ಪು ಮಾಡಿದೆ’; ಎರಡನೇ ವಾರಕ್ಕೆ ಸಂಗೀತಾಗೆ ಬಿಗ್ ಬಾಸ್ ಸಾಕಾಯ್ತು   
ಸಂಗೀತಾ
Follow us
|

Updated on:Oct 19, 2023 | 8:44 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹಲವು ಸ್ಪರ್ಧಿಗಳ ಮಧ್ಯೆ ದ್ವೇಷ ಹುಟ್ಟಿಕೊಂಡಿದೆ. ಯಾರು ಟಾಪ್ ಐದರಲ್ಲಿ ಇರಬಹುದು ಎಂಬುದನ್ನು ಊಹಿಸೋಕೆ ಕಷ್ಟ ಆಗುತ್ತಿದೆ. ವಿನಯ್ ಗೌಡ, ಕಾರ್ತಿಕ್ ಮಹೇಶ್ ಮೊದಲಾದವರು ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಈ ಮಧ್ಯೆ ಸಂಗೀತಾಗೆ ಎರಡನೇ ವಾರಕ್ಕೆ ಬಿಗ್ ಬಾಸ್ (Bigg Boss) ಸಾಕಾಗಿದೆ. ವಿನಯ್ ಹಾಗೂ ಅವರ ಮಧ್ಯೆ ಮೂಡಿರುವ ದ್ವೇಷದ ಜ್ವಾಲೆ ಇದಕ್ಕೆ ಕಾರಣ ಎಂದು ಅನೇಕರು ಊಹಿಸಿದ್ದಾರೆ. ಬಿಗ್ ಬಾಸ್ ನೀಡುತ್ತಿರುವ ಶಿಕ್ಷೆಗೂ ಅವರು ಹೆದರಿದ್ದಾರೆ.

ಬಿಗ್ ಬಾಸ್​ನಲ್ಲಿ ಎರಡು ತಂಡ ಮಾಡಲಾಗಿದೆ. ಒಂದು ತಂಡಕ್ಕೆ ಕಾರ್ತಿಕ್ ಹಾಗೂ ಮತ್ತೊಂದು ತಂಡಕ್ಕೆ ವಿನಯ್ ಕ್ಯಾಪ್ಟನ್. ಕಾರ್ತಿಕ್ ತಂಡದಲ್ಲಿ ಸಂಗೀತಾ ಇದ್ದಾರೆ. ಟಾಸ್ಕ್​ನಲ್ಲಿ ಕಾರ್ತಿಕ್ ತಂಡ ಸೋತಿದ್ದರಿಂದ ಅವರಲ್ಲಿ ಒಬ್ಬರು ಶಿಕ್ಷೆ ಅನುಭವಿಸಬೇಕಿತ್ತು. ವಿನಯ್ ತಂಡದವರು ಸಂಗೀತಾ ಅವರನ್ನು ಶಿಕ್ಷೆಗೆ ಆಯ್ಕೆ ಮಾಡಿದರು. ಶಿಕ್ಷೆಯಾಗಿ ಸಗಣಿ ನೀರಲ್ಲಿ ಸ್ನಾನ ಮಾಡಿಸಲಾಯಿತು. ಇದಲ್ಲದೆ ವಿನಯ್ ಜೊತೆ ಜಗಳ ಕೂಡ ಆಗಿದೆ. ಇದು ಸಂಗೀತಾಗೆ ಸಾಕಷ್ಟು ಬೇಸರ ಮೂಡಿಸಿದೆ.

ಮಧ್ಯರಾತ್ರಿ ಸಂಗೀತಾ ಹಾಗೂ ಕಾರ್ತಿಕ್ ಮಾತನಾಡುತ್ತಿದ್ದರು. ಈ ವೇಳೆ ಸಂಗೀತಾ ಕಣ್ಣೀರು ಹಾಕಿದ್ದಾರೆ. ‘ನಾನು ಇಲ್ಲಿ ಬಂದು ತಪ್ಪು ಮಾಡಿದೆ ಅನಿಸುತ್ತಿದೆ. ಇದು ನನ್ನ ತಪ್ಪು ನಿರ್ಧಾರ. ಅವರ ಬಳಿ ಉಗಿಸಿಕೊಳ್ಳೋದು, ಈ ರೀತಿ ಶಿಕ್ಷೆ ಅನುಭವಿಸೋದು ಯಾರಿಗೆ ಬೇಕು? ನಮ್ಮ ತಂಡ ನಾಳೆಯೂ ಗೆಲ್ಲಲ್ಲ’ ಎಂದು ಕಣ್ಣೀರು ಹಾಕಿದ್ದಾರೆ ಸಂಗೀತಾ.

ಇದನ್ನೂ ಓದಿ: ಸಂಗೀತಾ ಗೆಳೆತನದಿಂದ ಕಾರ್ತಿಕ್​ಗೆ ಹಿನ್ನೆಡೆ ಆಗುತ್ತಿದೆಯೇ? ಬಿಗ್​ಬಾಸ್ ಮನೆಯಲ್ಲಿ ಹೀಗೊಂದು ಅನುಮಾನ

ಮರುದಿನ ಕಾರ್ತಿಕ್ ಅವರು ಸಂಗೀತಾ ಅವರನ್ನು ಮಾತನಾಡಿಸಿದ್ದಾರೆ. ‘ಈಗ ಬೆಟರ್ ಎನಿಸುತ್ತಿದೆ. ಆದರೆ, ಹೊರ ಹೊಗಲೇಬೇಕು ಎನಿಸುತ್ತಿದೆ’ ಎಂದಿದ್ದಾರೆ. ‘ಅಯ್ಯೋ ಹೀಗೆ ಹೇಳಬೇಡ. ಕುಳಿತು ಮಾತನಾಡೋ. ಎಲ್ಲವೂ ಸರಿ ಆಗುತ್ತದೆ’ ಎಂದು ಬುದ್ಧಿವಾದ ಹೇಳಿದ್ದಾರೆ ಕಾರ್ತಿಕ್. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ನೋಡಲು ಅವಕಾಶ ಇದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Thu, 19 October 23

ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?