‘ಇಲ್ಲಿ ಬಂದಿರೋರು ಬಿಕಾರಿಗಳಾ?’; ರೌಡಿ ತರ ಆಡಿದ ವಿನಯ್​ಗೆ ತಿರುಗೇಟು ಕೊಟ್ಟ ತನಿಷಾ

ವಿನಯ್ ಗೌಡ ಅವರು ಮೊದಲು ಕಿತ್ತಾಟ ಮಾಡಿಕೊಂಡಿದ್ದು ಸಂಗೀತಾ ಶೃಂಗೇರಿ ಜೊತೆ. ಸಂಗೀತಾ ಹಾಗೂ ವಿನಯ್ ಒಂದೇ ಧಾರಾವಾಹಿಯಲ್ಲಿ ನಟಿಸಿದ ಹೊರತಾಗಿಯೂ ಇಬ್ಬರೂ ಜಗಳ ಮಾಡಿಕೊಂಡಿದ್ದರು. ಈಗ ಈ ದ್ವೇಷದ ಕಿಡಿ ಕಾಡ್ಗಿಚ್ಚಿನಂತಾಗಿದೆ.

‘ಇಲ್ಲಿ ಬಂದಿರೋರು ಬಿಕಾರಿಗಳಾ?’; ರೌಡಿ ತರ ಆಡಿದ ವಿನಯ್​ಗೆ ತಿರುಗೇಟು ಕೊಟ್ಟ ತನಿಷಾ
ತನಿಷಾ-ವಿನಯ್
Follow us
ರಾಜೇಶ್ ದುಗ್ಗುಮನೆ
|

Updated on:Oct 18, 2023 | 10:05 AM

ವಿನಯ್ ಗೌಡ (Vinay Gowda) ಅವರು ಬಿಗ್ ಬಾಸ್ ಮನೆಯಲ್ಲಿ ರೌಡಿ ತರ ಆಡುತ್ತಿದ್ದಾರೆ ಎಂಬುದು ಹಲವರ ಆರೋಪ. ಸೋಶಿಯಲ್ ಮೀಡಿಯಾದಲ್ಲೂ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಅವರ ಆ್ಯಟಿಟ್ಯೂಡ್ ಸರಿ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಕ್ಟೋಬರ್ 17ರ ಎಪಿಸೋಡ್​ನಲ್ಲಿ ಮನೆಯಲ್ಲಿ ದೊಡ್ಡ ಜಗಳ ಆಗಿತ್ತು. ಇದರಲ್ಲಿ ವಿನಯ್ ಪಾಲೂ ಇದೆ. ಇಂದಿನ (ಅಕ್ಟೋಬರ್ 18) ಎಪಿಸೋಡ್​ನಲ್ಲಿ ಅವರು ತನಿಷಾಗೆ (Tanisha) ಅವಾಜ್ ಹಾಕಲು ಬಂದಿದ್ದಾರೆ. ಈ ವೇಳೆ ತನಿಷಾ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

ವಿನಯ್ ಗೌಡ ಅವರು ಮೊದಲು ಕಿತ್ತಾಟ ಮಾಡಿಕೊಂಡಿದ್ದು ಸಂಗೀತಾ ಶೃಂಗೇರಿ ಜೊತೆ. ಸಂಗೀತಾ ಹಾಗೂ ವಿನಯ್ ಒಂದೇ ಧಾರಾವಾಹಿಯಲ್ಲಿ ನಟಿಸಿದ ಹೊರತಾಗಿಯೂ ಇಬ್ಬರೂ ಜಗಳ ಮಾಡಿಕೊಂಡಿದ್ದರು. ಈಗ ಈ ದ್ವೇಷದ ಕಿಡಿ ಕಾಡ್ಗಿಚ್ಚಿನಂತಾಗಿದೆ. ವಿನಯ್ ಹಾಗೂ ಸಂಗೀತಾ ಸಣ್ಣ ವಿಚಾರಕ್ಕೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಾರದ ಟಾಸ್ಕ್ ಆರಂಭ ಆಗಿದ್ದು, ಎರಡು ಟೀಂ ಮಾಡಲಾಗಿದೆ. ಒಂದಕ್ಕೆ ವಿನಯ್ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂನ ಕಾರ್ತಿಕ್ ಅವರು ಮುನ್ನಡೆಸುತ್ತಿದ್ದಾರೆ. ಮಂಗಳವಾರದ (ಅಕ್ಟೋಬರ್ 18) ಟಾಸ್ಕ್​ನ ವಿನಯ್ ತಂಡ ಗೆದ್ದಿದೆ.

ಬುಧವಾರದ (ಅಕ್ಟೋಬರ್ 19) ಎಪಿಸೋಡ್​ನ ಪ್ರೋಮೋ ರಿಲೀಸ್ ಮಾಡಲಾಗಿದೆ. ಎರಡೂ ತಂಡದವರಿಗೆ ಹೊಸ ಟಾಸ್ಕ್ ನೀಡಲಾಗಿತ್ತು. ಆಗ ತನಿಷಾ ಅವರು ಮಾತನಾಡಲು ಹೋಗಿದ್ದಾರೆ. ‘ಬೇಡದೆ ಇಲ್ಲದವರ ಮಾತು ಕೇಳಬೇಡಿ’ ಎಂದು ವಿನಯ್ ಹೇಳಿದ ಮಾತು ತನಿಷಾಗೆ ಕೋಪ ತರಿಸಿದೆ. ‘ಬೇಡದೆ ಇದ್ದವರು ಯಾರೂ ಇಲ್ಲ. ನಾವೇನು ಬಿಕಾರಿಗಳಾ’ ಎಂದು ಪ್ರಶ್ನೆ ಮಾಡಿದ್ದಾರೆ ತನಿಷಾ. ಅವರ ಖಡಕ್ ಉತ್ತರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ಫೋಟೋಶೂಟ್​​ನಲ್ಲಿ ಬಿಗ್ ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್

‘ಬಿಗ್ ಬಾಸ್ ಕನ್ನಡ ಸೀಸನ್ 10’ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:58 am, Wed, 18 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ