ಎರಡು ಭಾಗವಾಯ್ತು ಬಿಗ್​ ಬಾಸ್​ ಮನೆ; ಟಾಸ್ಕ್​ ಮಾಡುತ್ತಾ ದ್ವೇಷ ಕಟ್ಟಿಕೊಂಡ ಸ್ಪರ್ಧಿಗಳು

ಟಾಸ್ಕ್​ನ ನೆಪದಿಂದಲೇ ಗುಂಪುಗಾರಿಕೆ ಉಂಟಾದ ಉದಾಹರಣೆ ಸಾಕಷ್ಟಿದೆ. ಬಿಗ್​ ಬಾಸ್​ ಮನೆಯಲ್ಲಿ ಒಮ್ಮೆ ಗುಂಪುಗಾರಿಕೆ ಶುರುವಾದರೆ ಅದರ ಪರಿಣಾಮ ಎಲ್ಲದರ ಮೇಲೂ ಆಗುತ್ತದೆ. ಸದ್ಯಕ್ಕೆ ದೊಡ್ಮನೆಯಲ್ಲಿ ಈಗ ಕಾರ್ತಿಕ್​ ಮಹೇಶ್​ ಹಾಗೂ ವಿನಯ್​ ಗೌಡ ಅವರು ಎರಡು ಬೇರೆ ಬೇರೆ ಗುಂಪುಗಳ ಮುಂದಾಳತ್ವ ವಹಿಸಿಕೊಂಡಿದ್ದಾರೆ.

ಎರಡು ಭಾಗವಾಯ್ತು ಬಿಗ್​ ಬಾಸ್​ ಮನೆ; ಟಾಸ್ಕ್​ ಮಾಡುತ್ತಾ ದ್ವೇಷ ಕಟ್ಟಿಕೊಂಡ ಸ್ಪರ್ಧಿಗಳು
ರಕ್ಷಕ್​, ವಿನಯ್​
Follow us
ಮದನ್​ ಕುಮಾರ್​
|

Updated on: Oct 17, 2023 | 9:44 PM

ಬಿಗ್​ ಬಾಸ್ (Bigg Boss Kannada)​ ಮನೆಯಲ್ಲಿ ಎಲ್ಲ ರೀತಿಯ ವ್ಯಕ್ತಿಗಳೂ ಇರುತ್ತಾರೆ. ಎಲ್ಲ ರೀತಿಯ ಭಾವನೆಗಳೂ ಇರುತ್ತವೆ. ಪ್ರತಿ ಹಂತದಲ್ಲೂ ಪರಿಸ್ಥಿತಿ ಬದಲಾಗುತ್ತದೆ. ಒಂದು ಕ್ಷಣ ಸ್ನೇಹಿತರಾಗಿದ್ದರು ಮುರುಕ್ಷಣವೇ ದುಷ್ಮನ್​ಗಳಾಗುತ್ತಾರೆ. ಟಾಸ್ಕ್​ ಇದ್ದರಂತೂ ಪೈಪೋಟಿ ಜೋರಾಗುತ್ತದೆ. ಆಗ ಯಾವ ಸ್ನೇಹವೂ ಲೆಕ್ಕಕ್ಕೆ ಬರುವುದಿಲ್ಲ. ಬಿಗ್​ ಬಾಸ್​ (BBK) ಮನೆಯಲ್ಲಿ ಬದುಕಬೇಕು ಎಂದರೆ ನಿಷ್ಠುರ ಕಟ್ಟಿಕೊಳ್ಳದೇ ಬೇರೆ ದಾರಿ ಇಲ್ಲ. ಎಲ್ಲರ ಜೊತೆಗೂ ಫ್ರೆಂಡ್ಶಿಪ್​ ನಿಭಾಯಿಸಲು ಹೋದರೆ ಟಾಸ್ಕ್​ ಆಡೋಕಾಗಲ್ಲ. ಇಂಥ ಸಂದಿಗ್ಧ ಪರಿಸ್ಥಿತಿ ಈಗ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋನಲ್ಲಿ ಎದುರಾಗಿದೆ. ಎರಡನೇ ವಾರದಲ್ಲಿ ಪೈಪೋಟಿ ಹೆಚ್ಚಿದೆ.

ಕೆಲವು ಟಾಸ್ಕ್​ಗಳನ್ನು ಸಿಂಗಲ್​ ಆಗಿ ಆಡಬೇಕು. ಇನ್ನುಳಿದ ಟಾಸ್ಕ್​ಗಳನ್ನು ಗುಂಪುಗಳಲ್ಲಿ ಆಡಬೇಕು. ಟಾಸ್ಕ್​ನ ನೆಪದಿಂದಲೇ ಗುಂಪುಗಾರಿಕೆ ಉಂಟಾದ ಉದಾಹರಣೆ ಸಾಕಷ್ಟಿದೆ. ಬಿಗ್​ ಬಾಸ್​ ಮನೆಯಲ್ಲಿ ಒಮ್ಮೆ ಗುಂಪುಗಾರಿಕೆ ಶುರುವಾದರೆ ಅದರ ಪರಿಣಾಮ ಎಲ್ಲದರ ಮೇಲೂ ಆಗುತ್ತದೆ. ಸದ್ಯಕ್ಕೆ ದೊಡ್ಮನೆಯಲ್ಲಿ ಈಗ ಕಾರ್ತಿಕ್​ ಮಹೇಶ್​ ಹಾಗೂ ವಿನಯ್​ ಗೌಡ ಅವರು ಎರಡು ಬೇರೆ ಬೇರೆ ಗುಂಪುಗಳ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಪರಸ್ಪರ ದ್ವೇಷ ಬೆಳೆಯುವ ಮಟ್ಟಕ್ಕೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಉಂಟಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಯಾವ ಪರಿಸ್ಥಿತಿ ಕೂಡ ಯೂಸರ್​ ಮ್ಯಾನ್ಯುಯಲ್​ ಜೊತೆಗೆ ಬರುವುದಿಲ್ಲ. ಹೆಚ್ಚೇನೂ ಮುನ್ಸೂಚನೆ ನೀಡದೇ ಹೊಸ ಹೊಸ ಟಾಸ್ಕ್​ಗಳನ್ನು ನೀಡಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ಟಾಸ್ಕ್​ನ ನಿಯಮವನ್ನು ಒಬ್ಬೊಬ್ಬರು ಒಂದೊಂದು ರೀತಿ ಅರ್ಥ ಮಾಡಿಕೊಂಡ ಘಟನೆಗಳೂ ನಡೆಯುತ್ತವೆ. ಅಂಥ ಸಂದರ್ಭದಲ್ಲಿ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗುತ್ತದೆ. ಈಗ ಬಿಗ್ ಬಾಸ್​ ಮನೆಯಲ್ಲಿ ಆಗಿರುವ ಎರಡು ಗುಂಪುಗಳು ಇದೇ ಸವಾಲನ್ನು ಎದುರಿಸುತ್ತಿವೆ.

ಬೆಳಗ್ಗೆ ಕಣ್ಣು ಬಿಡೋದಕ್ಕೂ ಮುನ್ನವೇ ಬಿಗ್​ ಬಾಸ್​ ಮನೆಯಲ್ಲಿ ಜಗಳ; 2ನೇ ವಾರದ ಆಟ ಅಷ್ಟು ಸುಲಭವಿಲ್ಲ

ಮೊದಲ ವಾರ ಸ್ನೇಕ್​ ಶ್ಯಾಮ್​ ಎಲಿಮಿನೇಟ್​ ಆದರು. ಎರಡನೇ ವಾರಕ್ಕೆ ಹಲವರ ಹೆಸರುಗಳು ನಾಮಿನೇಟ್​ ಆಗಿವೆ. ಎಲಿಮಿನೇಷನ್​ನಿಂದ ತಪ್ಪಿಸಿಕೊಳ್ಳಬೇಕು ಎಂದರೆ ಟಫ್​ ಸ್ಪರ್ಧೆ ನೀಡಲೇಬೇಕು. ಕಾರ್ತಿಕ್​ ಮಹೇಶ್​, ವಿನಯ್​ ಗೌಡ, ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​, ರಕ್ಷಕ್​, ಸ್ನೇಹಿತ್​, ಸಿರಿ, ಗೌರೀಶ್​ ಅಕ್ಕಿ, ನೀತೂ ವನಜಾಕ್ಷಿ, ಭಾಗ್ಯಶ್ರೀ, ಮೈಕೆಲ್​ ಅಜಯ್​, ಈಶಾನಿ, ತುಕಾಲಿ ಸಂತೋಷ್​, ನಮ್ರತಾ ಗೌಡ, ವರ್ತೂರು ಸಂತೋಷ್​, ತನಿಶಾ ಕುಪ್ಪಂಡ ಅವರು ಸ್ಪರ್ಧೆ ನಡೆಸುತ್ತಿದ್ದಾರೆ. ಬಿಗ್​ ಬಾಸ್​ ಸಂಚಿಕೆ ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ಟಿವಿಯಲ್ಲಿ ಪ್ರಸಾರ ಆಗುತ್ತದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಈ ಕಾರ್ಯಕ್ರಮವನ್ನು ಉಚಿತವಾಗಿ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ