ಸಂಗೀತಾ ಕಾರಣಕ್ಕೆ ವಿನಯ್-ಕಾರ್ತಿಕ್ ನಡುವೆ ಮನಸ್ತಾಪ; ಬಿಗ್ ಬಾಸ್ನಲ್ಲಿ ಇದು ನಿರ್ಣಾಯಕ ಹಂತ
Bigg Boss Kannada: ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋನಲ್ಲಿ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ನಡುವೆ ಬಿರುಕು ಉಂಟಾಗಿದೆ. ಇವರಿಬ್ಬರ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಂದಿಗ್ಧ ಪರಿಸ್ಥಿತಿ ಕಾರ್ತಿಕ್ಗೆ ಎದುರಾಗಿದೆ. ಈ ಮೂವರ ನಡುವಿನ ಸಂಭಾಷಣೆಗಳ ಝಲಕ್ ಈ ವಿಡಿಯೋದಲ್ಲಿ ಇದೆ.
ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೂ ಅವರು ಕಾರ್ತಿಕ್ ಮಹೇಶ್ ಜೊತೆ ಆಪ್ತವಾಗಿದ್ದಾರೆ. ಅವರಿಬ್ಬರ ನಡುವೆ ಬಾಂಧವ್ಯ ಬೆಳೆದಿದೆ. ಆದರೆ ವಿನಯ್ ಗೌಡ (Vijay Gowda) ಜೊತೆ ಸಂಗೀತಾ ಕಿರಿಕ್ ಮಾಡಿಕೊಂಡಿದ್ದಾರೆ. ಈಗ ಈ ಕಿರಿಕ್ ಬೇರೊಂದು ಹಂತಕ್ಕೆ ಹೋಗಿದೆ. ಸಂಗೀತಾ ಜೊತೆ ಕಾರ್ತಿಕ್ ಆಪ್ತವಾಗಿ ಇರುವುದರ ಬಗ್ಗೆ ವಿನಯ್ ಅವರು ತಕರಾರು ತೆಗೆದಿದ್ದಾರೆ. ‘ನಾನಾ ಅಥವಾ ಅವಳಾ’ ಎಂದು ಕಾರ್ತಿಕ್ಗೆ ವಿನಯ್ ಅವರು ಆಯ್ಕೆ ನೀಡಿದ್ದಾರೆ. ಅತ್ತ ಸಂಗೀತಾ ಅವರು ಗಟ್ಟಿನಿರ್ಧಾರಕ್ಕೆ ಬಂದಿದ್ದಾರೆ. ಒಂದು ವೇಳೆ ಕಾರ್ತಿಕ್ (Karthik Mahesh) ಕಡೆಯಿಂದ ಬೆಂಬಲ ಸಿಗದಿದ್ದರೂ ಕೂಡ ತಾವು ವಿನಯ್ ವಿರುದ್ಧ ಒಂಟಿಯಾಗಿ ಹೋರಾಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಕಾರ್ತಿಕ್ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಮೂವರ ನಡುವಿನ ಸಂಭಾಷಣೆಗಳ ಝಲಕ್ ಈ ವಿಡಿಯೋದಲ್ಲಿ ಇದೆ. ಜಿಯೋ ಸಿನಿಮಾ ಮೂಲಕ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಕಾರ್ಯಕ್ರಮವನ್ನು 24 ಗಂಟೆಯೂ ಉಚಿತವಾಗಿ ನೋಡಬಹುದು. ಪ್ರತಿ ದಿನದ ಸಂಚಿಕೆಗಳು ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Oct 18, 2023 05:25 PM
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು

