ಸಂಗೀತಾ ಗೆಳೆತನದಿಂದ ಕಾರ್ತಿಕ್​ಗೆ ಹಿನ್ನೆಡೆ ಆಗುತ್ತಿದೆಯೇ? ಬಿಗ್​ಬಾಸ್ ಮನೆಯಲ್ಲಿ ಹೀಗೊಂದು ಅನುಮಾನ

Bigg Boss: ಕಾರ್ತಿಕ್ ಹಾಗೂ ಸಂಗೀತಾರ ಆಟದ ಮೇಲೆ ಅವರ ಗೆಳೆತನ ಪ್ರಭಾವ ಬೀರುತ್ತಿದೆಯೇ? ಕಾರ್ತಿಕ್ ತಮ್ಮ ಸಹಜ ವ್ಯಕ್ತಿತ್ವ ಪ್ರದರ್ಶಿಸಲು ಸಂಗೀತಾರ ಗೆಳೆತನ ಅಡ್ಡಿ ಮಾಡುತ್ತಿದ್ದೆಯೇ?

ಸಂಗೀತಾ ಗೆಳೆತನದಿಂದ ಕಾರ್ತಿಕ್​ಗೆ ಹಿನ್ನೆಡೆ ಆಗುತ್ತಿದೆಯೇ? ಬಿಗ್​ಬಾಸ್ ಮನೆಯಲ್ಲಿ ಹೀಗೊಂದು ಅನುಮಾನ
Follow us
ಮಂಜುನಾಥ ಸಿ.
|

Updated on:Oct 18, 2023 | 11:37 PM

ಬಿಗ್​ಬಾಸ್ 10 (Bigg Boss) ಮನೆ ತುಸು ಹೆಚ್ಚೇ ಬಿಸಿಯಾಗಿದೆ. ಮನೆಯಲ್ಲಿ ಈಗಾಗಲೇ ಎರಡು ಬಣಗಳಾಗಿದ್ದು, ಪರಸ್ಪರ ಟಾಸ್ಕ್​ನ ಜೊತೆಗೆ ಕಾಳಗಗಳೂ ನಡೆದಿವೆ. ಪ್ರಸ್ತುತ ಆಗಿರುವ ಎರಡು ತಂಡಗಳಲ್ಲಿ ಒಂದನ್ನು ವಿನಯ್ ಮುನ್ನಡೆಸುತ್ತಿದ್ದರೆ ಮತ್ತೊಂದನ್ನು ಕಾರ್ತಿಕ್ ಮುನ್ನಡೆಸುತ್ತಿದ್ದಾರೆ. ಆದರೆ ಕಾರ್ತಿಕ್ ಹಾಗೂ ಸಂಗೀತಾ ನಡುವಿನ ಗೆಳೆತನದಿಂದ ಕಾರ್ತಿಕ್​ಗೆ ಹಿನ್ನಡೆ ಆಗುತ್ತಿದೆ ಎಂದು ಮನೆಯಲ್ಲಿರುವ ಕೆಲ ಸದಸ್ಯರ ಆರೋಪ.

ಬಿಗ್​ಬಾಸ್ ಆರಂಭವಾದಾಗಿನಿಂದಲೂ ಸಂಗೀತಾ ಹಾಗೂ ಕಾರ್ತಿಕ್ ಪರಸ್ಪರ ಹತ್ತಿರದ ಗೆಳೆಯರು. ಗೆಳೆತನವನ್ನು ಮೀರಿದ ನಂಟು ಆ ಇಬ್ಬರಲ್ಲಿ ಇದೆ ಎಂಬುದು ಪ್ರೇಕ್ಷಕರಿಗೂ ಇರುವ ಗುಮಾನಿ, ಅಷ್ಟು ಹತ್ತಿರ ಸಂಗೀತಾ ಹಾಗೂ ಕಾರ್ತಿಕ್. ಸಂಗೀತಾರನ್ನು ನಾಮಿನೇಷನ್​ನಿಂದ ಉಳಿಸಲು ಕಾರ್ತಿಕ್ ಅಖಾಡಕ್ಕೂ ಇಳಿದಿದ್ದರು. ಸಂಗೀತಾ ಸಹ ಕಾರ್ತಿಕ್ ಪರ ವಹಿಸಿ ಹಲವು ಬಾರಿ ಇತರರೊಂದಿಗೆ ಮಾತನಾಡಿದ್ದೂ ಇದೆ.

ಇದನ್ನೂ ಓದಿ:ಬಿಗ್​ಬಾಸ್ 10ರ ‘ಹೀರೋ’ ಸಂಗೀತಾ ಶೃಂಗೇರಿ ಯಾರು? ಅವರ ಹಿನ್ನೆಲೆ ಏನು?

ಇದೀಗ ಕಾರ್ತಿಕ್ ನಾಯಕನಾಗಿದ್ದು, ಕಾರ್ತಿಕ್ ತಂಡದಲ್ಲಿ ಸಂಗೀತಾ ಸಹ ಇದ್ದಾರೆ. ಇದರ ನಡುವೆ ವಿನಯ್ ಹಾಗೂ ಸಂಗೀತಾ ನಡುವೆ ಆರಂಭದಿಂದಲೂ ನಡೆದು ಬರುತ್ತಿರುವ ಜಗಳ ಇದೀಗ ಇನ್ನೂ ಹೆಚ್ಚಾಗಿದೆ. ವಿನಯ್ ನನ್ನನ್ನು ಬೇಕೆಂದೇ ಟಾರ್ಗೆಟ್ ಮಾಡುತ್ತಿದ್ದಾನೆಂದು ಸಂಗೀತಾ ಪದೇ ಪದೇ ಕಾರ್ತಿಕ್ ಬಳಿ ದೂರು ಹೇಳಿದ್ದಾರೆ. ಕಾರ್ತಿಕ್ ಸಹ ಈ ವಿಷಯವಾಗಿ ವಿನಯ್ ಬಳಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಬಹುತೇಕ ವಿಫಲವಾಗಿದ್ದಾರೆ.

ಇವುಗಳ ನಡುವೆ ವಿನಯ್, ಸೂಚ್ಯವಾಗಿ ಕಾರ್ತಿಕ್​ಗೆ ಬುದ್ಧಿವಾದ ಹೇಳಿದ್ದು, ಇಲ್ಲಿ ಆಟ ಆಡಲು ಬಂದಿದ್ದೀಯ? ಬೇರೆ ಏನೋ ಆಗಲು ಅಥವಾ ಮಾಡಲು ಅಲ್ಲ. ನೀನು ಹೀಗಿರಲಿಲ್ಲ ಎಂಬಿತ್ಯಾದಿಯಾಗಿ ಹೇಳಿದ್ದು, ಸೂಚ್ಯವಾಗಿ ನೀನು ಸಂಗೀತಾ ಪ್ರಭಾವದಲ್ಲಿದ್ದೀಯ, ಸಂಗೀತಾರನ್ನು ಮೆಚ್ಚಿಸಲು ಹೆಚ್ಚು ಗಮನ ವಹಿಸುತ್ತಿದ್ದೀಯ ಎಂದಿದ್ದಾರೆ. ವಿನಯ್ ಮಾತು ಅರ್ಥವಾದರೂ ಅರ್ಥವಾದಂತಿದ್ದಾರೆ ಕಾರ್ತಿಕ್.

ಇನ್ನು ತುಕಾಲಿ ಸಂತೋಶ್ ಅಂತೂ ಹಳ್ಳಿಕಾರ್ ಸಂತೋಶ್ ಬಳಿ, ”ನಿಮ್ಮ ತಂಡದ ಹೆಸರು ರಣಚಂಡಿ ಅಲ್ಲ ಬದಲಿಗೆ ‘ಅವಳ ನೆರಳು’ ಎಂದಾಗಬೇಕು. ಸಂಗೀತಾ ಹೇಳಿದಂತೆ ನಿಮ್ಮ ಕ್ಯಾಪ್ಟನ್ ಕಾರ್ತಿಕ್ ಕೇಳುತ್ತಾನೆ” ಎಂದಿದ್ದಾರೆ. ತುಕಾಲಿ ಸಂತೋಶ್ ಹೇಳಿದ ಮಾತನ್ನು ಹಳ್ಳಿಕಾರ್ ಸಂತೋಶ್ ಸಹ ಒಪ್ಪಿದ್ದಾರೆ. ಕಾರ್ತಿಕ್ ತಂಡದಿಂದ ವಿನಯ್ ತಂಡಕ್ಕೆ ಕಳಿಸಲ್ಪಟ್ಟ ಭಾಗ್ಯಶ್ರೀ ಸಹ ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ.

ಅಲ್ಲದೆ, ಕಾರ್ತಿಕ್ ಸಹ ಬಹುತೇಕ ನಿರ್ಣಯವನ್ನು ಸಂಗೀತಾರನ್ನು ಕೇಳಿಯೇ, ಸಂಗೀತಾರ ಮಾತಿನಂತೆಯೇ ತೆಗೆದುಕೊಂಡಿದ್ದಾರೆ ಸಹ. ಸಂಗೀತಾ ಹಾಗೂ ಕಾರ್ತಿಕ್ ಗೆಳೆತನ ಯಾರಿಗೆ ಸಹಾಯವಾಗಲಿದೆ, ಯಾರಿಗೆ ದುಬಾರಿಯಾಗಲಿದೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30 ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ದಿನದ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:35 pm, Wed, 18 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ