ಬೆಳ್ಳಂಬೆಳಿಗ್ಗೆ ಬಿಗ್​ಬಾಸ್ ಶಾಕ್, ಜಗಳಕ್ಕೆ ಕಾರಣವಾದ ನಾಮಿನೇಷನ್

Bigg Boss 10: ಬಿಗ್​ಬಾಸ್ 10ರ ಎರಡನೇ ವಾರದ ಮೊದಲ ದಿನ ಬಿಗ್​ಬಾಸ್ ಮನೆಯ ಸದಸ್ಯರಿಗೆ ಶಾಕ್ ನೀಡಿದ್ದು, ಏಳುತ್ತಿದ್ದಂತೆ ಎಲ್ಲರೂ ಬೆಡ್​ ಮೇಲೆ ಕುಳಿತುಕೊಂಡೆ ನಾಮಿನೇಷನ್ ಪ್ರಕ್ರಿಯೆ ಮುಗಿಸುವಂತೆ ಸೂಚಿಸಲಾಯ್ತು. ಆದರೆ ನಾಮಿನೇಷನ್ ಪ್ರಕ್ರಿಯೆ ಜಗಳಕ್ಕೆ ಕಾರಣವಾಯ್ತು.

ಬೆಳ್ಳಂಬೆಳಿಗ್ಗೆ ಬಿಗ್​ಬಾಸ್ ಶಾಕ್, ಜಗಳಕ್ಕೆ ಕಾರಣವಾದ ನಾಮಿನೇಷನ್
ಕಾರ್ತಿಕ್-ಸ್ನೇಹಿತ್
Follow us
ಮಂಜುನಾಥ ಸಿ.
|

Updated on:Oct 16, 2023 | 11:33 PM

ವೀಕೆಂಡ್ ಎಪಿಸೋಡ್​ನಲ್ಲಿ ಸ್ನೇಕ್​ ಶ್ಯಾಮ್​ರ (Snake Shyam) ಎಲಿಮಿನೇಷನ್​ ಕಂಡು ಭಾವುಕರಾಗಿ ಮಲಗಿದ್ದ ಮನೆಯ ಸದಸ್ಯರಿಗೆ ಬಿಗ್​ಬಾಸ್ ಬೆಳ್ಳಂಬೆಳಿಗ್ಗೆ ಶಾಕ್ ನೀಡಿತು. ಸಿಹಿ ನಿದ್ದೆಯಲ್ಲಿದ್ದ ಸ್ಪರ್ಧಿಗಳನ್ನು ಎಬ್ಬಿಸಿ, ಹಾಸಿಗೆ ಮೇಲೆ ಕುಳಿತುಕೊಂಡೇ ಈ ವಾರದ ನಾಮಿನೇಷನ್​ ಅನ್ನು ಮಾಡುವಂತೆ ಸೂಚಿಸಿತು. ಮಾತ್ರವಲ್ಲದೆ, ನಾಮಿನೇಷನ್ ಆದವರಿಂದ ಆ ಬಗ್ಗೆ ಅಭಿಪ್ರಾಯವನ್ನು ಪಡೆದುಕೊಂಡಿತು.

ಸಂಗೀತ ಅವರು ತುಕಾಲಿ ಸಂತೋಶ್ ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದರು. ಇದಕ್ಕೆ ತುಕಾಲಿ ಸಂತೋಶ್ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಗೌರೀಶ್ ಅಕ್ಕಿ ಅವರು ಸಿರಿ ಹಾಗೂ ಮೈಖಲ್ ಅನ್ನು ನಾಮಿನೇಟ್ ಮಾಡಿದರು. ನೀತು ಅವರು ಗೌರೀಶ್ ಅಕ್ಕಿ ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದರು. ಬಳಿಕ ತುಕಾಲಿ ಸಂತು ಅವರು ಸಂಗೀತ ಹಾಗೂ ಮೈಖಲ್ ಅನ್ನು ನಾಮಿನೇಟ್ ಮಾಡಿದರು. ಇದಕ್ಕೆ ಸಂಗೀತಾ ಆಕ್ಷೇಪ ವ್ಯಕ್ತಪಡಿಸಿದರು. ನಮ್ರತಾ ಅವರು ವರ್ತೂರು ಸಂತೋಶ್ ಹಾಗೂ ರಕ್ಷಕ್ ಅವರನ್ನು ನಾಮಿನೇಟ್ ಮಾಡಿದರು. ವಿನಯ್ ಅವರು ತುಕಾಲಿ ಸಂತು ಹಾಗೂ ಭಾಗ್ಯಶ್ರೀಯನ್ನು ನಾಮಿನೇಟ್ ಮಾಡಿದರು. ಭಾಗ್ಯಶ್ರೀ ಅವರು ನೀತು ಹಾಗೂ ಸಂಗೀತ ಅವರನ್ನು ನಾಮಿನೇಟ್ ಮಾಡಿದರು. ಈ ಸಮಯದಲ್ಲಿ ಸಂಗೀತ ಹಾಗೂ ಭಾಗ್ಯಶ್ರೀ ನಡುವೆ ಮಾತಿನಚಕಮಕಿಗೆ ಕಾರಣವಾಯ್ತು. ಬಳಿಕ ಮೈಖಲ್ ಅವರು ಭಾಗ್ಯಶ್ರೀ ಹಾಗೂ ತುಕಾಲಿ ಅವರನ್ನು ನಾಮಿನೇಟ್ ಮಾಡಿದರು. ರಕ್ಷಕ್ ಅವರು ಮೈಖಲ್ ಹಾಗೂ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರು. ಇಶಾನಿ ಅವರು ತುಕಾಲಿ ಸಂತು ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದರು. ಡ್ರೋನ್ ಪ್ರತಾಪ್, ತುಕಾಲಿ ಸಂತು ಹಾಗೂ ತನಿಷಾ ಅವರನ್ನು ನಾಮಿನೇಟ್ ಮಾಡಿದರು. ತನಿಷಾ ಅವರು ಭಾಗ್ಯಶ್ರೀ ಹಾಗೂ ಗೌರೀಶ್ ಅವರನ್ನು ನಾಮಿನೇಟ್ ಮಾಡಿದರು. ಹಳ್ಳೀಕಾರ್ ಸಂತೋಶ್, ತಮ್ಮನ್ನು ನಾಮಿನೇಟ್ ಮಾಡಿದ್ದ ನಮ್ರತಾ ಹಾಗೂ ಗೌರೀಶ್ ಅಕ್ಕಿ ಅವರನ್ನು ನಾಮಿನೇಟ್ ಮಾಡಿದರು. ಸಿರಿ ಅವರು ಮೈಖಲ್ ಹಾಗೂ ಗೌರೀಶ್ ಅವರನ್ನು ನಾಮಿನೇಟ್ ಮಾಡಿದರು. ಕಾರ್ತಿಕ್ ಅವರು ತುಕಾಲಿ ಸಂತೋಶ್ ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದರು. ಸ್ನೇಹಿತ್ ಅವರಿಗೆ ನೇರ ನಾಮಿನೇಷನ್ ಅಧಿಕಾರನ್ನು ಬಿಗ್​ಬಾಸ್ ನೀಡಿದರು ಆಗ ತನಿಷಾ ಹಾಗೂ ಕಾರ್ತಿಕ್ ಅನ್ನು ಸ್ನೇಹಿತ್ ನಾಮಿನೇಟ್ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಹೀರೋ ಯಾರು? ವಿಲನ್ ಯಾರು? ಸ್ಪರ್ಧಿಗಳು ಆರಿಸಿದ್ದು ಯಾರನ್ನು?

ತನಿಷಾ ಹಾಗೂ ಕಾರ್ತಿಕ್ ಅವರು ಟೊಮೆಟೊ ಹೆಚ್ಚಿ ಬಿಗ್​ಬಾಸ್ ನಿಯಮ ಮುರಿದಿದ್ದಾರೆ ಎಂಬ ಕಾರಣ ನೀಡಿ ಸ್ನೇಹಿತ್, ಕಾರ್ತಿಕ್ ಅನ್ನು ನಾಮಿನೇಟ್ ಮಾಡಿದರು. ಆದರೆ ಕಾರ್ತಿಕ್​ಗೆ ಇದು ಇಷ್ಟವಾಗಲಿಲ್ಲ, ನಾನು ಟೊಮೆಟೊ ಹೆಚ್ಚಿರಲಿಲ್ಲ, ಸುಮ್ಮನೆ ನಾಮಿನೇಟ್ ಮಾಡಿದೆ. ನಾಮಿನೇಟ್ ಸಣ್ಣ ವಿಷಯವಲ್ಲ, ನೀನು ಕ್ಯಾಪ್ಟನ್ ಆಗಲು ಯೋಗ್ಯನೇ ಅಲ್ಲ ಎಂದು ಮೂದಲಿಸಿದರು. ಆದರೆ ಕೆಲವೇ ಹೊತ್ತಿನ ಬಳಿಕ ಸ್ನೇಹಿತ್ ಅನ್ನು ಜೊತೆಗೆ ಕರೆದುಕೊಂಡು ಬಂದು ಲಾನ್ ಏರಿಯಾನಲ್ಲಿ ಡ್ಯಾನ್ಸ್ ಮಾಡಿದರು.

ಅಂತಿಮವಾಗಿ ಭಾಗ್ಯಶ್ರೀ, ತುಕಾಲಿ, ಮೈಖಲ್, ಗೌರೀಶ್, ಸಂಗೀತ, ತನಿಷಾ, ಕಾರ್ತಿಕ್ ಅವರುಗಳು ಸ್ಪರ್ಧಿಗಳಿಂದ ನಾಮಿನೇಟ್ ಆದರೆ ತನಿಷಾ ಹಾಗೂ ಕಾರ್ತಿಕ್ ಅವರುಗಳು ಕ್ಯಾಪ್ಟನ್ ಆಗಿರುವ ಸ್ನೇಹಿತ್ ಇಂದ ನೇರವಾಗಿ ನಾಮಿನೇಟ್ ಆದರು. ಒಟ್ಟು ಒಂಬತ್ತು ಜನ ನಾಮಿನೇಟ್ ಆಗಿದ್ದು, ಇವರಲ್ಲಿ ಒಬ್ಬರು ಈ ವಾರಾಂತ್ಯಕ್ಕೆ ಮನೆಯಿಂದ ಹೊರಗೆ ಹೋಗಲಿದ್ದಾರೆ. ಬಿಗ್​ಬಾಸ್ ಕನ್ನಡ 10 ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:31 pm, Mon, 16 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ