AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಲ್ಲಿ ಹೀರೋ ಯಾರು? ವಿಲನ್ ಯಾರು? ಸ್ಪರ್ಧಿಗಳು ಆರಿಸಿದ್ದು ಯಾರನ್ನು?

Bigg Boss 10: ಮೊದಲ ವಾರ ಬಿಗ್​ಬಾಸ್ ಮನೆಯಲ್ಲಿ 17 ಮಂದಿ ಇದ್ದರು. ಒಬ್ಬೊಬ್ಬರು ಒಂದೊಂದು ರೀತಿ. ಭಿನ್ನ-ಭಿನ್ನ ವ್ಯಕ್ತಿತ್ವ. ಆ ಹದಿನೇಳು ಮಂದಿಯಲ್ಲಿ ಹೀರೋ ಯಾರು? ವಿಲನ್ ಯಾರು? ಮನೆಯ ಸದಸ್ಯರೇ ಆರಿಸಿದ್ದಾರೆ ನೋಡಿ...

ಬಿಗ್​ಬಾಸ್ ಮನೆಯಲ್ಲಿ ಹೀರೋ ಯಾರು? ವಿಲನ್ ಯಾರು? ಸ್ಪರ್ಧಿಗಳು ಆರಿಸಿದ್ದು ಯಾರನ್ನು?
ಮಂಜುನಾಥ ಸಿ.
|

Updated on: Oct 16, 2023 | 8:32 AM

Share

ಬಿಗ್​ಬಾಸ್ (Bigg Boss) ಕನ್ನಡ 10ರ ಮನೆಯಲ್ಲಿ ಹಲವು ಭಿನ್ನ-ಭಿನ್ನ ವ್ಯಕ್ತಿತ್ವದ ಜನರಿದ್ದಾರೆ. ಬಿಗ್​ಬಾಸ್ ಆರಂಭವಾದಾಗ ಬರೋಬ್ಬರಿ 17 ಜನ ಬಿಗ್​ಬಾಸ್ ಮನೆ ಸೇರಿದ್ದರು. ಜನರಿಂದ ಹೆಚ್ಚು ಮತಗಳನ್ನು ಪಡೆದುಕೊಂಡವರು ಸಮರ್ಥರೆಂದು, ಸ್ವಲ್ಪ ಕಡಿಮೆ ಮತ ಪಡೆದುಕೊಂಡವರನ್ನು ಅಸಮರ್ಥರೆಂದು ಗುರುತಿಸಲಾಯ್ತು. ಆದರೆ ಸಮರ್ಥರಿಗೆ ಹೋಲಿಸಿದರೆ ಅಸಮರ್ಥರೇ ಹೆಚ್ಚು ಕ್ರಿಯಾಶೀಲವಾಗಿ ಮನೆಯಲ್ಲಿ ಮೊದಲ ವಾರ ಕಾಣಿಸಿಕೊಂಡರು. ವಾರಾಂತ್ಯದ ಪಂಚಾಯಿತಿಗೆ ಬಂದ ಸುದೀಪ್, ಅಪರೂಪದ ಆಟವೊಂದನ್ನು ಮನೆಯ ಸದಸ್ಯರಿಂದ ಆಡಿಸಿದರು. ಪ್ರತಿಯೊಬ್ಬ ಸದಸ್ಯನೂ, ಈ ಮನೆಯ ಹೀರೋ ಯಾರು? ವಿಲನ್ ಯಾರು? ಮನೆಯ ಖಾಲಿ ಡಬ್ಬ ಯಾರು? ಎಂಬುದನ್ನು ಹೆಸರಿಸಬೇಕಿತ್ತು.

ಸುದೀಪ್ ಸೂಚನೆಯಂತೆ ಮನೆಯ ಎಲ್ಲ ಸದಸ್ಯರು, ತಮಗೆ ಹೀರೋ, ವಿಲನ್ ಹಾಗೂ ಖಾಲಿ ಡಬ್ಬ ಎನಿಸಿದ ಸ್ಪರ್ಧಿಗಳಿಗೆ ಸ್ಟಿಕ್ಕರ್​ಗಳನ್ನು ನೀಡಿದರು. ವಿನಯ್ ಅವರು ಕಾರ್ತಿಕ್​ಗೆ ಹೀರೋ, ತುಕಾಲಿ ಸಂತು ವಿಲನ್, ನೀತು ಖಾಲಿ ಡಬ್ಬ ಎಂದರು. ಕ್ಯಾಪ್ಟನ್ ಸ್ನೇಹಿತ್, ತನಿಷಾಗೆ ಹೀರೋ, ಸಂತು ವಿಲನ್, ಸ್ನೇಕ್ ಶ್ಯಾಮ್ ಡಬ್ಬ ಎಂದು ಸ್ಟಿಕ್ಕರ್ ನೀಡಿದರು. ಬಳಿಕ ಬಂದ ಕಾರ್ತಿಕ್, ಸಂಗೀತ ಹೀರೋ ಎಂದು, ವಿನಯ್ ವಿಲನ್, ಸಂತು ಡಬ್ಬ ಎಂದರು. ಸಿರಿ, ಕಾರ್ತಿಕ್ ಹೀರೋ, ತುಕಾಲಿ ಸಂತೋಶ್ ವಿಲನ್, ಸ್ನೇಕ್ ಶ್ಯಾಮ್ ಖಾಲಿ ಡಬ್ಬ ಎಂದರು. ವಿನಯ್​ಗೆ ನಾಯಕ ಪಟ್ಟ, ಸ್ನೇಹಿತ್ ವಿಲನ್, ತುಕಾಲಿ ಸಂತು ಡಬ್ಬ ಎಂದು ಸ್ಟಿಕ್ಕರ್ ಕೊಟ್ಟವರು ಮೈಖಲ್.

ತುಕಾಲಿ ಸಂತು ಮುಂದೆ ಬಂದು ವರ್ತೂರು ಸಂತೋಶ್​ಗೆ ಹೀರೋ ಎಂದು, ಕಾರ್ತಿಕ್ ವಿಲನ್, ವಿನಯ್ ಡಬ್ಬ ಎಂದು ಸ್ಟಿಕ್ಕರ್ ನೀಡಿದರು. ಸಂಗೀತ ಅವರು ಕಾರ್ತಿಕ್​ಗೆ ಹೀರೋ, ವಿನಯ್ ವಿಲನ್, ಸ್ನೇಕ್ ಶ್ಯಾಮ್ ಅವರಿಗೆ ಖಾಲಿ ಡಬ್ಬ ಸ್ಟಿಕ್ಕರ್ ನೀಡಿದರು. ಇನ್ನು ಭಾಗ್ಯಶ್ರೀ ಅವರು ಡ್ರೋನ್ ಪ್ರತಾಪ್ ಹೀರೋ, ವಿನಯ್ ವಿಲನ್, ನೀತು ಖಾಲಿ ಡಬ್ಬ ಎಂದರು. ಇಶಾನಿ ಮುಂದೆ ಬಂದು ವಿನಯ್ ಹೀರೋ, ತುಕಾಲಿ ಸಂತೋಶ್ ವಿಲನ್, ಸ್ನೇಕ್ ಶ್ಯಾಮ್ ಖಾಲಿ ಡಬ್ಬ ಎಂದರು. ಗೌರೀಶ್ ಅಕ್ಕಿ ಅವರ ಪ್ರಕಾರ ಸಂಗೀತ ಹೀರೋ, ವಿನಯ್ ವಿಲನ್, ನೀತು ಖಾಲಿ ಡಬ್ಬ. ತನಿಷಾ ಪ್ರಕಾರ ಸಂಗೀತ ಹೀರೋ, ಭಾಗ್ಯಶ್ರೀ ವಿಲನ್, ಸ್ನೇಕ್ ಶ್ಯಾಮ್ ಖಾಲಿ ಡಬ್ಬ. ನಮ್ರತಾ ಹೀರೋ, ಸಂತೋಶ್ ವಿಲನ್, ಮೈಖಲ್ ಖಾಲಿ ಡಬ್ಬ ಎಂದು ಮತ ಹಾಕಿದ್ದು ಡ್ರೋನ್ ಪ್ರತಾಪ್. ಇನ್ನು ನೀತು ಬಂದು ಸಂಗೀತ ಅವರಿಗೆ ಹೀರೋ, ವಿನಯ್ ಅವರಿಗೆ ವಿಲನ್ ಹಾಗೂ ಗೌರೀಶ್ ಅವರಿಗೆ ಖಾಲಿ ಡಬ್ಬ ಸ್ಟಿಕ್ಕರ್ ನೀಡಿದರು. ನಮ್ರತಾ ಅವರು ವಿನಯ್ ಅವರಿಗೆ ಹೀರೋ, ಸಂತು ಅವರಿಗೆ ವಿಲನ್, ಗೌರೀಶ್ ಅಕ್ಕಿ ಅವರಿಗೆ ಡಬ್ಬ ಎಂದರು. ಸ್ನೇಕ್ ಶ್ಯಾಮ್ ಅವರು ಸಂಗೀತ ಅವರು ಹೀರೋ, ಸ್ನೇಹಿತ್ ವಿಲನ್, ತುಕಾಲಿ ಸಂತು ಡಬ್ಬ ಎಂದರು. ರಕ್ಷಕ್ ಪ್ರಕಾರ ಸಂಗೀತ ಹೀರೋ, ಸ್ನೇಹಿತ್ ವಿಲನ್, ಶ್ಯಾಮ್ ಡಬ್ಬ ಕೊನೆಯದಾಗಿ ಮತ ಹಾಕಿದ ವರ್ತೂರು, ಸಂಗೀತ ಹೀರೋ, ಶ್ಯಾಮ್ ವಿಲನ್, ರಕ್ಷಕ್ ಡಬ್ಬಾ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಮೊದಲ ಎಲಿಮಿನೇಷನ್: ಹೊರ ಬಂದ ಸ್ಪರ್ಧಿ ಯಾರು?

ಅಲ್ಲಿಗೆ ಅತಿ ಹೆಚ್ಚು ಮತಗಳನ್ನು ಪಡೆದ ಸಂಗೀತಾ ಶೃಂಗೇರಿ ಮನೆಯ ಹೀರೋ ಆಗಿ ಹೊರ ಹೊಮ್ಮಿದರು. ಬರೋಬ್ಬರಿ ಏಳು ಮಂದಿ ಸಂಗೀತಾ ಅವರನ್ನು ಹೀರೋ ಎಂದು ಒಪ್ಪಿ ಹೃದಯದ ಸ್ಟಿಕ್ಕರ್ ನೀಡಿದ್ದರು. ಮತ್ತೊಂದು ವಿಶೇಷವೆಂದರೆ ಸಂಗೀತಾಗೆ ಹೀರೋ ಬಿಟ್ಟರೆ ಇನ್ಯಾವುದೇ ಸ್ಟಿಕ್ಕರ್ ಬಂದಿರಲಿಲ್ಲ. ಕೇವಲ ಹೀರೋ ಸ್ಟಿಕ್ಕರ್ ಮಾತ್ರವೇ ಬಂದಿತ್ತು. ಸುದೀಪ್ ಅವರು ಸಂಗೀತಾಗೆ ಅಭಿನಂದನೆ ಸಲ್ಲಿಸಿದಾಗ ಸಂಗೀತಾ ಭಾವುಕರಾಗಿ ಅತ್ತರು. ತಮ್ಮ ಶ್ರಮ ಗುರುತಿಸಿದ ಮನೆಯ ಸದಸ್ಯರಿಗೆ ಧನ್ಯವಾದ ಹೇಳಿದರು.

ಅತಿ ಹೆಚ್ಚು ವಿಲನ್ ಸ್ಟಿಕ್ಕರ್ ಬಂದಿದ್ದು ತುಕಾಲಿ ಸಂತೋಶ್​ಗೆ ಅದಕ್ಕಿಂತಲೂ ಒಂದು ಕಡಿಮೆ ಬಂದಿದ್ದು ವಿನಯ್ ಗೌಡಗೆ. ಆದರೆ ವಿನಯ್​ಗೆ ಎರಡು ಹೀರೋ ಸ್ಟಿಕ್ಕರ್ ಸಹ ಬಂದಿತ್ತು. ಅದರೆ ತುಕಾಲಿ ಸಂತುಗೆ ಯಾವುದೇ ಹೀರೋ ಸ್ಟಿಕ್ಕರ್ ಬರಲಿಲ್ಲ. ವಿಲನ್ ಸ್ಟಿಕ್ಕರ್ ಕೊಟ್ಟ ಎಲ್ಲರೂ ಎಚ್ಚರಿಕೆ ಕೊಟ್ಟು, ಬುದ್ಧಿವಾದ ಹೇಳಿದಂತಾಯಿತು, ನನ್ನನ್ನು ನಾನು ತಿದ್ದಿಕೊಳ್ಳುತ್ತೇನೆ ಎಂದರು ತುಕಾಲಿ ಸಂತು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ರಾತ್ರಿ 9ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ದಿನದ 24 ಗಂಟೆಯೂ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ