ಬಿಗ್​ಬಾಸ್ ಸೀಸನ್ 10ರ ಮೊದಲ ಎಲಿಮಿನೇಷನ್: ಹೊರ ಬಂದ ಸ್ಪರ್ಧಿ ಯಾರು?

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ಎಲಿಮಿನೇಷನ್ ಆಗಿದೆ. ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಅವರು, ಮನೆಯಿಂದ ಹೊರಹೋಗುವ ಸ್ಪರ್ಧಿಯನ್ನು ಘೋಷಣೆ ಮಾಡಿದ್ದಾರೆ.

ಬಿಗ್​ಬಾಸ್ ಸೀಸನ್ 10ರ ಮೊದಲ ಎಲಿಮಿನೇಷನ್: ಹೊರ ಬಂದ ಸ್ಪರ್ಧಿ ಯಾರು?
ಬಿಗ್ ಬಾಸ್
Follow us
ಮಂಜುನಾಥ ಸಿ.
|

Updated on:Oct 15, 2023 | 11:00 PM

ಬಿಗ್​ಬಾಸ್ (Bigg Boss) ಸೀಸನ್ 10ರ ಮೊದಲ ಎಲಿಮಿನೇಷನ್ ಮುಗಿದಿದೆ. ಬಹಳ ಜೋಷ್​ನಲ್ಲಿ ಬಿಗ್​ಬಾಸ್ ಒಳಗೆ ಹೋಗಿದ್ದ ಪ್ರಾಣಿ ಪ್ರೇಮಿ, ಉರಗ ರಕ್ಷಕ, ಸ್ನೇಕ್ ಶ್ಯಾಮ್ ಅವರು ಬಿಗ್​ಬಾಸ್​ನ ತಮ್ಮ ಜರ್ನಿಯನ್ನು ಕೇವಲ ಒಂದು ವಾರಕ್ಕೆ ಮುಗಿಸಿದ್ದಾರೆ. ಸ್ನೇಕ್ ಶ್ಯಾಮ್ ಮೊದಲ ವಾರವೇ ಎಲಿಮಿನೇಟ್ ಆಗಿದ್ದಾರೆ. ಆ ಮೂಲಕ ಬಿಗ್​ಬಾಸ್ ಮನೆ ಹಿರಿಯ ಸದಸ್ಯರಿಗಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬಿಗ್​ಬಾಸ್ ಮನೆ ಸೇರಿರುವ ಹಿರಿಯ ಸದಸ್ಯರು ಹೆಚ್ಚು ಸಮಯ ಮನೆಯಲ್ಲಿ ಉಳಿದಿರುವುದು ಬಹಳ ಅಪರೂಪ. ಸ್ನೇಕ್ ಶ್ಯಾಮ್ ಮೊದಲ ವಾರವೇ ಹೊರ ಕಳಿಸಲ್ಪಟ್ಟಿದ್ದಾರೆ.

ಸುಮಾರು 58 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವ ಪರಿಸರ ಪ್ರೇಮಿ, ಉರಗ ರಕ್ಷಕ ಸ್ನೇಕ್ ಶ್ಯಾಮ್ ಬಹಳ ಉತ್ಸಾಹದಿಂದ ಬಿಗ್​ಬಾಸ್ ಮನೆ ಸೇರಿದ್ದರು. ತಮಗಿರುವ ಪರಿಸರದ ಜ್ಞಾನವನ್ನು, ಉರಗ ರಕ್ಷಣೆ ಸಮಯದಲ್ಲಿ ತಾವು ಎದುರಿಸಿದ ಹಲವು ರೋಮಾಂಚಕಾರಿ ಕತೆಗಳನ್ನು ಬಿಗ್​ಬಾಸ್ ಮನೆಯಲ್ಲಿ ಸ್ನೇಕ್ ಶ್ಯಾಮ್ ಹಂಚಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಲ್ಲದೆ, ವಯಸ್ಸಿನ ಕಾರಣದಿಂದಾಗಿ ಟಾಸ್ಕ್​ಗಳಲ್ಲಿಯೂ ಸರಿಯಾಗಿ ತೊಡಗಿಕೊಳ್ಳಲಾಗಲಿಲ್ಲ. ಹೆಚ್ಚು ಅಗ್ರೆಸ್ಸಿವ್ ಸಹ ಅಲ್ಲದ ಅವರನ್ನು ಮನೆಯ ಇತರೆ ಸದಸ್ಯರು ನಾಮಿನೇಟ್ ಮಾಡಲು, ಕಳಪೆ ನೀಡಲು, ಅಸಮರ್ಥ ಘೋಷಣೆ ಮಾಡುವ ಸಮಯದಲ್ಲಿ ಈಸಿ ಟಾರ್ಗೆಟ್ ಮಾಡಿಕೊಂಡರು.

ಸ್ನೇಕ್ ಶ್ಯಾಮ್ ಅವರು ಸಹ ಮನೆಯ ಇತರ ಸದಸ್ಯರ ಬಳಿ, ನಾನು ಪ್ರಾಣಿಗಳನ್ನು ಬಿಟ್ಟು ಬಂದಿದ್ದೇನೆ, ಅದು ನನಗೆ ಬೇಸರ ತರುತ್ತಿದೆ. ಹೋಗಿ ಬಿಡೋಣ ಅನ್ನಿಸುತ್ತಿದೆ ಎಂದು ಸಹ ಹೇಳಿಕೊಂಡಿದ್ದರು. ಇದೂ ಸಹ ಅವರ ನಾಮಿನೇಶನ್ ಹಾಗೂ ಎಲಿಮಿನೇಷನ್​ಗೆ ಕಾರಣ ಆಗಿರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಇದ್ದ ಒಂದು ವಾರ ಯಾರೊಟ್ಟಿಗೆ ಭಿನ್ನಾಭಿಪ್ರಾಯ ಮಾಡಿಕೊಳ್ಳದೆ, ಜಗಳ ಮಾಡಿಕೊಳ್ಳದೆ, ಯಾರಿಂದಲೂ ಕಪಟಿ ಇನ್ನಿತರೆಗಳನ್ನು ಅನ್ನಿಸಿಕೊಳ್ಳದಿದ್ದ ಸ್ನೇಕ್ ಶ್ಯಾಮ್ ಮನೆಯಿಂದ ಹೊರಗೆ ಬಂದಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ 10ರ ಸ್ಪರ್ಧಿ ತನಿಷಾ ಕುಪ್ಪಂಡ ಬಗ್ಗೆ ನಿಮಗೆಷ್ಟು ಗೊತ್ತು?

ಸಾಕಷ್ಟು ಉತ್ಸಾಹದಿಂದಲೇ ನಾನು ಮನೆಯ ಒಳಗೆ ಬಂದೆ. ಮನೆ, ಮನೆಯ ಸದಸ್ಯರು ನನಗೆ ಬಹಳ ಹಿಡಿಸಿದ್ದರು. ಮನೆಗೆ ಬಂದ ಒಂದೆರಡು ದಿನದಲ್ಲೇ ನನ್ನ ಆರೋಗ್ಯ ಸ್ವಲ್ಪ ಕೈಕೊಟ್ಟಿತು ಹಾಗಾಗಿ ನಾನು ಹೆಚ್ಚು ಸಕ್ರಿಯನಾಗಿ ಮನೆಯಲ್ಲಿ ಇರಲು ಆಗಲಿಲ್ಲ. ಅಲ್ಲದೆ ನಾನು ಪ್ರಾಣಿಗಳನ್ನು ಬಿಟ್ಟು ಬಂದಿದ್ದೀನಿ, ಅವುಗಳ ಸೆಳೆತ ನನಗೆ ಹೆಚ್ಚಾಗಿದೆ. ಈ ಕಾರಣಕ್ಕೂ ಸಹ ನಾನು ಮನೆಯಲ್ಲಿ ಸಕ್ರಿಯನಾಗಿರಲು ಆಗಲಿಲ್ಲ ಅನ್ನಿಸುತ್ತದೆ ಎಂದರು ಸ್ನೇಕ್ ಶ್ಯಾಮ್. ಒಂದೇ ವಾರಕ್ಕೆ ಮನೆಯಿಂದ ಹೊರಗೆ ಬಂದ ಸ್ನೇಕ್ ಶ್ಯಾಮ್ ಅವರನ್ನು ವೇದಿಕೆ ಕರೆಸಿ, ಅಪ್ಪುಗೆ ನೀಡಿ, ಕಿರು ವಿಡಿಯೋ ಒಂದನ್ನು ತೋರಿಸಿ ಬೀಳ್ಕೊಟ್ಟರು ಸುದೀಪ್.

ಈ ವಾರ ಸ್ನೇಕ್ ಶ್ಯಾಮ್ ಹೊರಗೆ ಬಂದಿದ್ದಾರೆ. ಮುಂದಿನ ವಾರ ಯಾರು ಹೊರಬರುತ್ತಾರೆ? ಮೇಖಲ್, ಭಾಗ್ಯಶ್ರೀ, ಸಿರಿ ಅಥವಾ ಇನ್ಯಾರು? ಮುಂದಿನ ವಾರ ಗೊತ್ತಾಗಲಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ 24 ಗಂಟೆ ಕಾಲ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Sun, 15 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ