AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ನಲ್ಲಿ ನಿರೂಪಕ ಸಲ್ಮಾನ್ ಖಾನ್ ಹಾಗೂ ಸ್ಪರ್ಧಿಗಳು ಪಡೆದ ಸಂಭಾವನೆ ಎಷ್ಟು ಕೋಟಿ ರೂಪಾಯಿ?

ಪ್ರತಿ ಬಾರಿ ಬಿಗ್ ಬಾಸ್ ನಡೆಸಿಕೊಡಲು ಸಲ್ಮಾನ್ ಖಾನ್ ಅವರು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಾರೆ. ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಪಡೆಯುವ ಈ ಹೀರೋ ಬಿಗ್​ ಬಾಸ್​ಗೂ ದೊಡ್ಡ ಮೊತ್ತ ಚಾರ್ಜ್ ಮಾಡುತ್ತಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಬಿಗ್ ಬಾಸ್’ನಲ್ಲಿ ನಿರೂಪಕ ಸಲ್ಮಾನ್ ಖಾನ್ ಹಾಗೂ ಸ್ಪರ್ಧಿಗಳು ಪಡೆದ ಸಂಭಾವನೆ ಎಷ್ಟು ಕೋಟಿ ರೂಪಾಯಿ?
ಸಲ್ಮಾನ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 15, 2023 | 9:33 AM

Share

‘ಹಿಂದಿ ಬಿಗ್ ಬಾಸ್’ ಈವರೆಗೆ 16 ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಇತ್ತೀಚೆಗಷ್ಟೇ ‘ಹಿಂದಿ ಬಿಗ್ ಬಾಸ್ ಒಟಿಟಿ’ಯ ಎರಡನೇ ಸೀಸನ್ ಪೂರ್ಣಗೊಂಡಿದೆ. ಈಗ ‘ಬಿಗ್ ಬಾಸ್ ಹಿಂದಿ ಸೀಸನ್ 17’ (Bigg Boss 17) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಇಂದು (ಅಕ್ಟೋಬರ್ 15) ಅದ್ದೂರಿಯಾಗಿ ಬಿಗ್ ಬಾಸ್ (Bigg Boss) ಆರಂಭ ಆಗಲಿದೆ. ಯಾವ ಯಾವ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಒಳಗೆ ಬರುತ್ತಾರೆ ಎನ್ನುವ ಬಗ್ಗೆ ವೀಕ್ಷಕರಿಗೆ ಕುತೂಹಲ ಮೂಡಿದೆ. ಪ್ರತಿ ಬಾರಿ ಬಿಗ್ ಬಾಸ್ ನಡೆಸಿಕೊಡಲು ಸಲ್ಮಾನ್ ಖಾನ್ (Salman Khan) ಅವರು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಾರೆ. ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಪಡೆಯುವ ಈ ಹೀರೋ ಬಿಗ್​ ಬಾಸ್​ಗೂ ದೊಡ್ಡ ಮೊತ್ತ ಚಾರ್ಜ್ ಮಾಡುತ್ತಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಈ ವರ್ಷದ ಸಂಭಾವನೆ ಎಷ್ಟು?

ಕಳೆದ ಹಲವು ಸೀಸನ್​ಗಳಿಂದ ಸಲ್ಮಾನ್ ಖಾನ್ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಸಲ್ಮಾನ್ ಖಾನ್ ಬರುವುದಕ್ಕೂ ಮೊದಲು ಕೆಲವು ಸೆಲೆಬ್ರಿಟಿಗಳು ಇದನ್ನು ನಡೆಸಿಕೊಟ್ಟಿದ್ದರು. ಸಲ್ಮಾನ್ ಖಾನ್ ಆಗಮಿಸಿದ ಬಳಿಕ ಅವರೇ ಸ್ಯೂಟೆಬಲ್ ಆ್ಯಂಕರ್ ಎಂದು ಎಲ್ಲರಿಗೂ ಅನಿಸಿದೆ. ಈ ಕಾರಣಕ್ಕೆ ಅವರನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಅವರು ಖಡಕ್ ಆಗಿ ಸ್ಪರ್ಧಿಗಳನ್ನು ನಿರ್ವಹಿಸುತ್ತಾರೆ. ಅಷ್ಟೇ ಅಲ್ಲ ಅವರು ಕೇಳಿದಷ್ಟು ಸಂಭಾವನೆ ಕೊಡಲು ವಾಹಿನಿಯವರು ರೆಡಿ ಇದ್ದಾರೆ.

ಇದನ್ನೂ ಓದಿ: ‘ಘೋಸ್ಟ್​’ನ ಭೇಟಿ ಮಾಡಿದ ‘ಟೈಗರ್’; ಶಿವಣ್ಣ ಜೊತೆ ಪೋಸ್​ ಕೊಟ್ಟ ಸಲ್ಮಾನ್ ಖಾನ್    

ಸೀಸನ್ 17ರ ನಿರೂಪಣೆಗೆ​ ಸಲ್ಮಾನ್ ಖಾನ್ ಅವರು ಪ್ರತಿ ವಾರಕ್ಕೆ 12 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಅಂದರೆ ಒಂದು ಎಪಿಸೋಡ್​ಗೆ ಅವರು ಪಡೆಯೋದು 6 ಕೋಟಿ ರೂಪಾಯಿ. ಕೆಲವೇ ಗಂಟೆಗಳ ಶೂಟ್​ಗೆ ಅವರು ಇಷ್ಟು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ಒಟ್ಟಾರೆ ಲೆಕ್ಕ ಸೇರಿದರೆ ಒಂದು ಸೀಸನ್​ಗೆ ಅವರ ರೆಮ್ಯುನರೇಷನ್ 200 ಕೋಟಿ ರೂಪಾಯಿ ದಾಟಲಿದೆ. ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ನಡೆಸಿಕೊಡಲು ತಮ್ಮ ಕಾಲ್​ಶೀಟ್​ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಈ ಕಾರಣದಿಂದ ಅವರು ಇಷ್ಟು ದೊಡ್ಡ ಮೊತ್ತದ ಹಣ ಪಡೆಯುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಹುಡುಗಿ ಪರಿಚಯಿಸಲು ಮುಂದಾದ ಸಲ್ಮಾನ್​ ಖಾನ್​; ಭಾಯ್​ ಮದುವೆ ಅಂತ ಖುಷಿಪಟ್ಟ ಫ್ಯಾನ್ಸ್​

ಸಲ್ಮಾನ್ ಖಾನ್ ಅವರು ನಾಲ್ಕರಿಂದ ಆರನೇ ಸೀಸನ್ ನಡೆಸಿಕೊಡಲು ಪ್ರತಿ ವಾರಕ್ಕೆ 2.5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಏಳು ಹಾಗೂ ಎಂಟನೇ ಆವೃತ್ತಿ ನಡೆಸಿಕೊಡಲು ಸಲ್ಮಾನ್ ಖಾನ್ ಅವರು ಪ್ರತಿ ವಾರಕ್ಕೆ 5 ಕೋಟಿ ರೂಪಾಯಿ ಹಣ ಪಡೆದರು. ಒಂಭತ್ತು ಹಾಗೂ ಹತ್ತನೇ ಸೀಸನ್ ನಡೆಸಿಕೊಡಲು 7-8 ಕೋಟಿ ರೂಪಾಯಿ (ಪ್ರತಿ ವಾರಕ್ಕೆ), ಸೀಸನ್ 11 ಹಾಗೂ 12 ಸೀಸನ್ ನಿರೂಪಣೆಗೆ ಪ್ರತಿ ವಾರಕ್ಕೆ 12-14 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ. ಹೊಸ ಸೀಸನ್ ಸಂಭಾವನೆಯಲ್ಲಿ ಕೊಂಚ ಇಳಿಕೆ ಮಾಡಿಕೊಂಡಿದ್ದಾರೆ.

ಸ್ಪರ್ಧಿಗಳಿಗೂ ನೀಡಲಾಗಿದೆ ದೊಡ್ಡ ಸಂಭಾವನೆ:

ಪಾಮೆಲ್ ಆ್ಯಂಡ್ರೂಸನ್​ ಅವರು ಕೆನಡಿಯನ್​-ಅಮೆರಿಕನ್ ನಟಿ ಹಾಗೂ ಮಾಡೆಲ್. ಇವರು ಬಿಗ್ ಬಾಸ್ ಮನೆಯಲ್ಲಿ ಮೂರು ದಿನ ಮಾತ್ರ ಇದ್ದರು. ಇವರಿಗೆ 2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಜೂ. ಎನ್​ಟಿಆರ್​, ಶಾರುಖ್​ ಖಾನ್​, ಸಲ್ಮಾನ್​, ಹೃತಿಕ್​ ರೋಷನ್​?

ಸಿದ್ದಾರ್ಥ್ ಶುಕ್ಲಾ ಅವರು ಪ್ರತಿ ವಾರ 9 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಅವರು ‘ಬಿಗ್ ಬಾಸ್ 13’ರ ವಿನ್ನರ್ ಆಗಿದ್ದರು. ದೀಪಿಕಾ ಕಕ್ಕರ್ ಅವರು ಪ್ರತಿ ವಾರಕ್ಕೆ ಪಡೆದಿದ್ದು 15 ಲಕ್ಷ ರೂಪಾಯಿ. ಇನ್ನು, ಬಿಗ್ ಬಾಸ್ ಸೀಸನ್ 15ರ ವಿನ್ನರ್ ತೇಜಸ್ವಿ ಪ್ರಕಾಶ್ ಅವರು ಒಟ್ಟಾರೆ 1.7 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.

ಕ್ರಿಕೆಟರ್ ಶ್ರೀಶಾಂತ್ ಕೂಡ ದುಬಾರಿ ಸ್ಪರ್ಧಿ ಎನಿಸಿಕೊಂಡಿದ್ದರು. ಅವರು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಪ್ರತಿ ವಾರಕ್ಕೆ ಪಡೆದಿದ್ದು 50 ಲಕ್ಷ ರೂಪಾಯಿ. ಅವರು 12ನೇ ಸೀಸನ್​ಗೆ ಬಿಗ್ ಬಾಸ್​ಗೆ ಬಂದಿದ್ದರು. ಇನ್ನು, ಗ್ರೇಟ್ ಖಲಿ ಕೂಡ ಇಷ್ಟೇ ಮೊತ್ತದ ಸಂಭಾವನೆ ಪಡೆದಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.