AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಸಿನಿಮಾದಲ್ಲಿ ಜೂ. ಎನ್​ಟಿಆರ್​, ಶಾರುಖ್​ ಖಾನ್​, ಸಲ್ಮಾನ್​, ಹೃತಿಕ್​ ರೋಷನ್​?

ಹೃತಿಕ್​ ರೋಷನ್​ ಅವರು ಸದ್ಯ ‘ಫೈಟರ್​’ ಸಿನಿಮಾದ ಶೂಟಿಂಗ್​ ಸಲುವಾಗಿ ಇಟಲಿಗೆ ತೆರಳಿದ್ದಾರೆ. ಅವರು ವಾಪಸ್​ ಬರಲು ಇನ್ನೂ ಸಮಯ ಹಿಡಿಯಲಿದೆ. ಹಾಗಾಗಿ, ‘ವಾರ್​ 2’ ಸಿನಿಮಾದ ಚಿತ್ರೀಕರಣವನ್ನು ಜೂನಿಯರ್​ ಎನ್​ಟಿಆರ್​ ಅವರ ದೃಶ್ಯಗಳ ಮೂಲಕ ಆರಂಭಿಸಲು ಅಯಾನ್​ ಮುಖರ್ಜಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಒಂದೇ ಸಿನಿಮಾದಲ್ಲಿ ಜೂ. ಎನ್​ಟಿಆರ್​, ಶಾರುಖ್​ ಖಾನ್​, ಸಲ್ಮಾನ್​, ಹೃತಿಕ್​ ರೋಷನ್​?
ಶಾರುಖ್​ ಖಾನ್​, ಹೃತಿಕ್​ ರೋಷನ್​, ಸಲ್ಮಾನ್​ ಖಾನ್​, ಜೂನಿಯರ್​ ಎನ್​ಟಿಆರ್​
ಮದನ್​ ಕುಮಾರ್​
|

Updated on: Oct 04, 2023 | 4:21 PM

Share

2023ರಲ್ಲಿ ಬಾಲಿವುಡ್​ (Bollywood) ಮಾರುಕಟ್ಟೆ ಹೊಸ ಚೈತನ್ಯ ಪಡೆದುಕೊಂಡಿದೆ. ‘ಪಠಾಣ್​’, ‘ಗದರ್​ 2’, ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’, ‘ಜವಾನ್​’, ‘ಒಎಂಜಿ 2’ ಸಿನಿಮಾಗಳು ಉತ್ತಮವಾಗಿ ಕಲೆಕ್ಷನ್​ ಮಾಡಿವೆ. ಹಾಗಾಗಿ ಮುಂಬರುವ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಬೇರೆ ಬೇರೆ ತಂತ್ರಗಳನ್ನು ಬಳಸಿ ಪ್ರೇಕ್ಷಕರನ್ನು ಸೆಳೆಯಲು ಬಾಲಿವುಡ್​ ಮಂದಿ ಪ್ರಯತ್ನಿಸುತ್ತಿದ್ದಾರೆ. ಆ ಪೈಕಿ ಬಹುತಾರಾಗಣದ ಸಿನಿಮಾ ಕೂಡ ಒಂದು ಪ್ರಯತ್ನ. ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ‘ವಾರ್​ 2’ (War 2) ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್​, ಸಲ್ಮಾನ್​ ಖಾನ್​, ಹೃತಿಕ್​ ರೋಷನ್​, ಶಾರುಖ್​ ಖಾನ್​ (Shah Rukh Khan) ಅವರು ಒಟ್ಟಿಗೆ ನಟಿಸಲಿದ್ದಾರೆ. ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ.

ಯಶ್​ ರಾಜ್​ ಫಿಲ್ಮ್ಸ್​ ಬ್ಯಾನರ್​ ಮೂಲಕ ‘ವಾರ್​ 2’ ಸಿನಿಮಾ ಸಿದ್ಧವಾಗಲಿದೆ. ಈ ಚಿತ್ರಕ್ಕೆ ಅಯಾನ್​ ಮುಖರ್ಜಿ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಮುಹೂರ್ತ ನಡೆದಿದೆ. ಅಕ್ಟೋಬರ್​ನಲ್ಲಿ ಈ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ. ಒಂದೇ ಸಿನಿಮಾದಲ್ಲಿ ಶಾರುಖ್​ ಖಾನ್​, ಸಲ್ಮಾನ್​ ಖಾನ್​, ಹೃತಿಕ್​ ರೋಷನ್​, ಜೂನಿಯರ್​ ಎನ್​ಟಿಆರ್​ ಅವರು ತೆರೆ ಹಂಚಿಕೊಳ್ಳುವ ಸಾಧ್ಯತೆ ಇದೆ ಎಂಬ ವಿಷಯ ತಿಳಿದು ಈ ಸೂಪರ್​ ಸ್ಟಾರ್​ ನಟರ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

ಇದನ್ನೂ ಓದಿ: Tiger 3 Teaser: ದೇಶದ ವಿರುದ್ಧವೇ ತಿರುಗಿ ನಿಂತ ಟೈಗರ್​; ಭರ್ಜರಿ ಟ್ವಿಸ್ಟ್​ ನೀಡಿದ ಸಲ್ಮಾನ್​ ಖಾನ್​

ಹೃತಿಕ್​ ರೋಷನ್​ ಅವರು ಸದ್ಯ ‘ಫೈಟರ್​’ ಸಿನಿಮಾದ ಶೂಟಿಂಗ್​ ಸಲುವಾಗಿ ಇಟಲಿಗೆ ತೆರಳಿದ್ದಾರೆ. ಅಲ್ಲಿ ಅವರು ನಟಿ ದೀಪಿಕಾ ಪಡುಕೋಣೆ ಜೊತೆ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅವರು ವಾಪಸ್​ ಬರಲು ಇನ್ನೂ ಸಮಯ ಹಿಡಿಯಲಿದೆ. ಹಾಗಾಗಿ, ‘ವಾರ್​ 2’ ಸಿನಿಮಾದ ಚಿತ್ರೀಕರಣವನ್ನು ಜೂನಿಯರ್​ ಎನ್​ಟಿಆರ್​ ಅವರ ದೃಶ್ಯಗಳ ಮೂಲಕ ಆರಂಭಿಸಲು ಅಯಾನ್​ ಮುಖರ್ಜಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಹೃತಿಕ್​ ರೋಷನ್​ ಅವರು ಶೂಟಿಂಗ್​ ಸೆಟ್​​ ಸೇರಿಕೊಳ್ಳಲಿದ್ದಾರೆ. ಇದು ಭರ್ಜರಿ ಆ್ಯಕ್ಷನ್​ ಸಿನಿಮಾ ಆಗಿರಲಿದೆ.

ಇದನ್ನೂ ಓದಿ: Hrithik Roshan: ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ಗೆ 85 ಕೋಟಿ ರೂ. ಸಂಭಾವನೆ; ದೀಪಿಕಾ ಪಡುಕೋಣೆ ಸಂಬಳ ಎಷ್ಟು?

‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆಯ ಮೂಲಕ ನಿರ್ಮಾಣ ಆದ ‘ಟೈಗರ್​ ಜಿಂದಾ ಹೈ’, ‘ಪಠಾಣ್​’ ಸಿನಿಮಾಗಳ ನಡುವೆ ಸ್ಪೈ ಯೂನಿವರ್ಸ್​ ಸೃಷ್ಟಿ ಆಗಿದೆ. ಅಂದರೆ, ಒಂದು ಸಿನಿಮಾದ ಪಾತ್ರಕ್ಕೆ ಇನ್ನೊಂದು ಸಿನಿಮಾದ ಕಥೆಯಲ್ಲಿ ಲಿಂಕ್​ ನೀಡಲಾಗುತ್ತಿದೆ. ‘ಪಠಾಣ್​’ ಚಿತ್ರದಲ್ಲಿ ಕಥಾನಾಯಕನಿಗೆ ಸಹಾಯ ಮಾಡಲು ಸಲ್ಮಾನ್​ ಖಾನ್​ ಅವರ ಟೈಗರ್​ ಪಾತ್ರ ಎಂಟ್ರಿ ನೀಡಿತ್ತು. ಈಗ ‘ಟೈಗರ್​ 3’ ಚಿತ್ರದಲ್ಲಿ ಶಾರುಖ್​ ಖಾನ್​ ಅವರು ಪಠಾಣ್​ ಆಗಿ ಅತಿಥಿ ಪಾತ್ರ ಮಾಡಲಿದ್ದಾರೆ. ಹಾಗೆಯೇ ಟೈಗರ್​ ಮತ್ತು ಪಠಾಣ್​ ಪಾತ್ರಗಳು ‘ವಾರ್​ 2’ ಚಿತ್ರದಲ್ಲಿ ಕಾಣಿಸಿಕೊಳ್ಳಲಿವೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್