AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NTR 30: ಜೂನಿಯರ್​ ಎನ್​ಟಿಆರ್​ ಸಿನಿಮಾದಲ್ಲಿ​ ವಿಲನ್​ ಆಗ್ತಾರಾ ಬಾಲಿವುಡ್​ ಹೀರೋ?

Saif Ali Khan | Jr NTR: ‘ಎನ್​ಟಿಆರ್​ 30’ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಲಿದೆ. ಅದಕ್ಕೆ ತಕ್ಕಂತೆಯೇ ಸ್ಕ್ರಿಪ್ಟ್​ ಸಿದ್ಧವಾಗಿದೆ. ಪಾತ್ರವರ್ಗದ ಆಯ್ಕೆ ಬಗ್ಗೆಯೂ ಸಾಕಷ್ಟು ಕಾಳಜಿ ವಹಿಸಲಾಗುತ್ತಿದೆ.

NTR 30: ಜೂನಿಯರ್​ ಎನ್​ಟಿಆರ್​ ಸಿನಿಮಾದಲ್ಲಿ​ ವಿಲನ್​ ಆಗ್ತಾರಾ ಬಾಲಿವುಡ್​ ಹೀರೋ?
ಜೂನಿಯರ್​ ಎನ್​ಟಿಆರ್​
ಮದನ್​ ಕುಮಾರ್​
|

Updated on:Feb 17, 2023 | 4:24 PM

Share

ನಟ ಜೂನಿಯರ್​ ಎನ್​ಟಿಆರ್​ (Jr NTR) ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಫೇಮಸ್​ ಆಗಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಇದಕ್ಕೆಲ್ಲ ಕಾರಣ ಆಗಿರುವುದು ‘ಆರ್​ಆರ್​ಆರ್​’ ಸಿನಿಮಾದ ಗೆಲುವು. ಕಳೆದ ವರ್ಷ ತೆರೆಕಂಡ ಈ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಅಷ್ಟೇ ಅಲ್ಲದೇ ಜಾಗತಿಕ ಮಟ್ಟದ ಪ್ರಶಸ್ತಿಗಳು ಕೂಡ ಹರಿದು ಬಂದವು. ಈಗ ಅವರ ಹೊಸ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ‘ಎನ್​ಟಿಆರ್​ 30’ (NTR 30) ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ವಿಲನ್​ ಪಾತ್ರ ಮಾಡಲು ಬಾಲಿವುಡ್​ನ ಖ್ಯಾತ ನಟ ಸೈಫ್​ ಅಲಿ ಖಾನ್ (Saif Ali Khan)​ ಅವರಿಗೆ ಆಫರ್​ ನೀಡಲಾಗಿದೆ ಎಂದು ಸುದ್ದಿ ಆಗಿದೆ.

ಸೈಫ್​ ಅಲಿ ಖಾನ್​ ಅವರು ಬಾಲಿವುಡ್​ನಲ್ಲಿ ಹೀರೋ ಆಗಿ ಮಿಂಚಿದ್ದಾರೆ. ಅದೇ ರೀತಿ ನೆಗೆಟಿವ್​​ ಪಾತ್ರ ಮಾಡಿಯೂ ಸೈ ಎನಿಸಿಕೊಂಡಿದ್ದಾರೆ. ‘ಆದಿಪುರುಷ್​’ ಚಿತ್ರದಲ್ಲಿ ಪ್ರಭಾಸ್​ ಎದುರು ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಅಬ್ಬರಿಸಲಿದ್ದಾರೆ. ಅವರು ‘ಎನ್​ಟಿಆರ್​ 30’ ಚಿತ್ರಕ್ಕೂ ವಿಲನ್​ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡದ ಯಾರೊಬ್ಬರೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: Mrunal Thakur: ‘ಎನ್​ಟಿಆರ್​ 30’ ಚಿತ್ರಕ್ಕೆ ಮೃಣಾಲ್​ ಠಾಕೂರ್​ ನಾಯಕಿ? ‘ಸೀತಾ ರಾಮಂ’ ಸುಂದರಿಗೆ ಭರ್ಜರಿ ಆಫರ್​

ಇದನ್ನೂ ಓದಿ
Image
‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​
Image
ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋಗ್ತಾರೆ ಅಂತ ಭಾವಿಸಿದ್ದ ನಟಿ
Image
ಗಣೇಶನಿಗೆ ಕೈ ಮುಗಿದ ಸೈಫ್​ ಅಲಿ ಖಾನ್​ ವಿರುದ್ಧ ಒಂದು ವರ್ಗದ ನೆಟ್ಟಿಗರು ಗರಂ; ಹಬ್ಬದ ನಡುವೆ ಟ್ರೋಲ್​​
Image
‘ಕೂದಲು ಮುಟ್ಟಿದ್ರೆ ಕರೀನಾ ನನ್ನ ಕೊಂದುಬಿಡ್ತಾಳೆ’; ಸಂಸಾರದ ಗುಟ್ಟು ತೆರೆದಿಟ್ಟ ಸೈಫ್​ ಅಲಿ ಖಾನ್​

‘ಆರ್​ಆರ್​ಆರ್​’ ಸೂಪರ್​ ಹಿಟ್​ ಆದ ಬಳಿಕ ಜೂನಿಯರ್​ ಎನ್​ಟಿಆರ್​ ನಟನೆಯ ಮುಂದಿನ ಎಲ್ಲ ಸಿನಿಮಾಗಳನ್ನೂ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಾಡಬೇಕು ಎಂಬುದು ಅಲಿಖಿತ ನಿಯಮದಂತಾಗಿದೆ. ಅದಕ್ಕೆ ತಕ್ಕಂತೆಯೇ ಸ್ಕ್ರಿಪ್ಟ್​ನಲ್ಲಿ ಒಂದಷ್ಟು ಬದಲಾವಣೆ ಮಾಡುವಂತೆ ನಿರ್ದೇಶಕರಿಗೆ ಸೂಚಿಸಲಾಗಿದೆ. ಪಾತ್ರವರ್ಗದ ಆಯ್ಕೆ ಬಗ್ಗೆಯೂ ಸಾಕಷ್ಟು ಕಾಳಜಿ ವಹಿಸಲಾಗುತ್ತಿದೆ. ಒಂದು ವೇಳೆ ಸೈಫ್​ ಅಲಿ ಖಾನ್​ ಅವರು ವಿಲನ್​ ಆಗಿ ನಟಿಸಿದರೆ ಉತ್ತರ ಭಾರತದಲ್ಲಿ ಈ ಸಿನಿಮಾಗೆ ಹೆಚ್ಚು ಪ್ರಚಾರ ಸಿಗಲಿದೆ ಎಂಬುದು ತಂಡದ ಆಲೋಚನೆ.

ಇದನ್ನೂ ಓದಿ: ಜೂ.ಎನ್​ಟಿಆರ್​ ಕುಟುಂಬಕ್ಕೆ ಮತ್ತೊಂದು ಆಘಾತ; ನಂದಮೂರಿ ರಾಮಕೃಷ್ಣಗೆ ಕಾರು ಅಪಘಾತ

ಇನ್ನು ನಾಯಕಿ ಬಗ್ಗೆಯೂ ಸಾಕಷ್ಟು ಗಾಸಿಪ್​ ಹರಿದಾಡಿದೆ. ವರದಿಗಳ ಪ್ರಕಾರ, ಜಾನ್ವಿ ಕಪೂರ್​ ಅವರು ಜೂನಿಯರ್​ ಎನ್​ಟಿಆರ್​ ಜೊತೆ ನಟಿಸಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಫೋಟೋಶೂಟ್​ ಕೂಡ ನಡೆದಿದೆ ಎಂಬ ಸುದ್ದಿ ಕೇಳಿಬಂದಿದೆ. ಆದರೆ ಆ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

ಫೆಬ್ರವರಿಯಲ್ಲೇ ‘ಎನ್​ಟಿಆರ್​ 30’ ಸೆಟ್ಟೇರಲಿದೆ. ಮಾರ್ಚ್​ 20ರ ವೇಳೆಗೆ ಶೂಟಿಂಗ್​ ಶುರುವಾಗುವ ನಿರೀಕ್ಷೆ ಕೂಡ ಇದೆ. ಅದಾದ ಬಳಿಕ ಪ್ರಶಾಂತ್​ ನೀಲ್​ ಜೊತೆಗಿನ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್​ ಬ್ಯುಸಿ ಆಗಲಿದ್ದಾರೆ. ಈ ಎಲ್ಲ ಪ್ರಾಜೆಕ್ಟ್​ಗಳ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:23 pm, Fri, 17 February 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ