‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​

Hridayam Hindi Remake: ಸೈಫ್​ ಅಲಿ ಖಾನ್​ ಅವರ ಇಡೀ ಕುಟುಂಬವೇ ಸಿನಿಮಾರಂಗದಲ್ಲಿ ಸಕ್ರಿಯವಾಗಿದೆ. ಸೈಫ್​ ಪುತ್ರ ಇಬ್ರಾಹಿಂ ಅಲಿ ಖಾನ್​ ಅವರ ಚೊಚ್ಚಲ ಸಿನಿಮಾ ಬಗ್ಗೆ ಹಲವು ಬಗೆಯ ಟಾಕ್​ ಸೃಷ್ಟಿ ಆಗಿದೆ.

‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​
‘ಹೃದಯಂ’ ಪೋಸ್ಟರ್​, ಇಬ್ರಾಹಿಂ​ ಅಲಿ ಖಾನ್​
TV9kannada Web Team

| Edited By: Madan Kumar

May 30, 2022 | 10:04 AM

ದಕ್ಷಿಣ ಭಾರತದ ಸಿನಿಮಾಗಳನ್ನು ರಿಮೇಕ್​ ಮಾಡಿಕೊಂಡು ಬಾಲಿವುಡ್​ನ ಅನೇಕ ಹೀರೋಗಳು ಯಶಸ್ಸು ಕಂಡಿದ್ದಾರೆ. ಸೂಪರ್​ ಹಿಟ್​ ಚಿತ್ರಗಳ ರಿಮೇಕ್​ ಮೂಲಕವೇ ಬಿ-ಟೌನ್​ಗೆ ಕಾಲಿಟ್ಟ ಸ್ಟಾರ್​ ಕಿಡ್​ಗಳೂ ಇದ್ದಾರೆ. ಈಗ ನಟ ಸೈಫ್​ ಅಲಿ ಖಾನ್​  (Saif Ali Khan) ಅವರ ಪುತ್ರ ಇಬ್ರಾಹಿಂ ಅಲಿ ಖಾನ್​ ಅವರನ್ನು ಲಾಂಚ್​ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಮೊದಲ ಪ್ರಾಜೆಕ್ಟ್​ ಆಯ್ಕೆ ಸೂಕ್ತವಾಗಿದ್ದರೆ ಅರ್ಧ ಗೆದ್ದಂತೆಯೇ ಸರಿ. ಹಾಗಾಗಿ ಅವರು ಒಳ್ಳೆಯ ಸಿನಿಮಾ ಆಯ್ಕೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೂಡ ರಿಮೇಕ್​ ಮೂಲಕ ಪ್ರೇಕ್ಷಕರ ಎದುರು ಬರುವ ಸಾಧ್ಯತೆ ದಟ್ಟವಾಗಿದೆ. ಇತ್ತೀಚೆಗೆ ಬಿಡುಗಡೆ ಆಗಿರುವ ಮಲಯಾಳಂನ ‘ಹೃದಯಂ’ (Hridayam) ಸಿನಿಮಾಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ಅದೇ ಚಿತ್ರ ಈಗ ಹಿಂದಿಯಲ್ಲಿ ರಿಮೇಕ್​ ಆಗುತ್ತಿದೆ. ಆ ಚಿತ್ರದಲ್ಲಿ ಇಬ್ರಾಹಿಂ ಅಲಿ ಖಾನ್ (Ibrahim Ali Khan)​ ನಟಿಸುವ ಸಾಧ್ಯತೆ ಇದೆ ಎಂದು ‘ಬಾಲಿವುಡ್​ ಹಂಗಾಮ’ ವರದಿ ಮಾಡಿದೆ. ಈ ಸಿನಿಮಾವನ್ನು ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ಅವರು ನಿರ್ಮಾಣ ಮಾಡಲಿದ್ದಾರೆ. ಈ ಸುದ್ದಿ ಕೇಳಿ ಇಬ್ರಾಹಿಂ ಅಲಿ ಖಾನ್​ ಫ್ಯಾನ್ಸ್​ ಖುಷಿ ಆಗಿದ್ದಾರೆ.

ಸೈಫ್​ ಅಲಿ ಖಾನ್​ ಅವರ ಇಡೀ ಕುಟುಂಬವೇ ಸಿನಿಮಾರಂಗದಲ್ಲಿ ಸಕ್ರಿಯವಾಗಿದೆ. ಸೈಫ್​ ಪುತ್ರಿ ಸಾರಾ ಅಲಿ ಖಾನ್​ ಅವರು ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಬ್ರಾಹಿಂ ಅಲಿ ಖಾನ್​ ಅವರ ಚೊಚ್ಚಲ ಸಿನಿಮಾ ಬಗ್ಗೆ ಹಲವು ಬಗೆಯ ಟಾಕ್​ ಸೃಷ್ಟಿ ಆಗಿದೆ. ಅವರ ಇಮೇಜ್​ಗೆ ಸೂಕ್ತ ಆಗುವ ರೀತಿಯಲ್ಲಿ ‘ಹೃದಯಂ’ ಚಿತ್ರದ ಕಥೆ ಇದೆ ಎಂಬುದು ನಿರ್ಮಾಪಕರ ಲೆಕ್ಕಾಚಾರ. ಹಾಗಾಗಿ ಅದರ ಹಿಂದಿ ರಿಮೇಕ್​ನಲ್ಲಿ ಇಬ್ರಾಹಿಂ ಅಲಿ ಖಾನ್​ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಭಿಕ್ಷುಕರಿಗೆ 1 ರೂಪಾಯಿಯೂ ಕೊಡದೇ ಮುಂದೆ ಸಾಗಿದ ಸೈಫ್​ ಮಗ ಇಬ್ರಾಹಿಂ ಅಲಿ ಖಾನ್; ವಿಡಿಯೋ ವೈರಲ್​

ಬಾಲಿವುಡ್​ನಲ್ಲಿ ನೆಪೋಟಿಸಂ ಇದೆ ಎಂಬುದು ಹಲವರ ವಾದ. ಫಿಲ್ಮಿ ಕುಟುಂಬದ ಮಕ್ಕಳಿಗೆ ಬಹುಬೇಗನೆ ಅವಕಾಶ ಸಿಗುತ್ತವೆ. ಸ್ಟಾರ್​ ನಟ-ನಟಿಯರ ಮಕ್ಕಳನ್ನು ಲಾಂಚ್​ ಮಾಡುವಲ್ಲಿ ಕರಣ್​ ಜೋಹರ್​ ಫೇಮಸ್​. ಅವರ ಬಗ್ಗೆ ಅನೇಕರು ಟೀಕೆ ಮಾಡಿದ್ದುಂಟು. ಆದರೆ ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಂಡಿಲ್ಲ. ಈಗ ಅವರು ಸೈಫ್​ ಅಲಿ ಖಾನ್​ ಪುತ್ರನನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸುವ ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ಸೈಫ್ ಮಗನನ್ನು ಕಂಡು ​ಶಾರುಖ್ ಪುತ್ರ ಅಂತ ಕರೆದ ಫ್ಯಾನ್ಸ್​​; ಇಬ್ರಾಹಿಂ ಅಲಿ ಖಾನ್​ ಪ್ರತಿಕ್ರಿಯೆ ಹೇಗಿತ್ತು?

ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಇಬ್ರಾಹಿಂ ಅಲಿ ಖಾನ್​ ಆಗಾಗ ಸುದ್ದಿ ಆಗುತ್ತಾರೆ. ಅವರ ಖಾಸಗಿ ಜೀವನದ ವಿಷಯಗಳು ಕೂಡ ಹೆಚ್ಚು ಹೈಲೈಟ್​ ಆಗುತ್ತಿವೆ. ಇತ್ತೀಚೆಗೆ ಅವರು ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಜಾಸ್ತಿ ಆಗಿದೆ. ನಟಿ ಪಲಕ್​ ತಿವಾರಿ ಜೊತೆ ಅವರ ಸುತ್ತಾಟ ಹೆಚ್ಚಾಗಿದೆ. ಅವರ ಕೆಲವು ವಿಡಿಯೋಗಳು ಕೂಡ ವೈರಲ್​ ಆಗುತ್ತಿವೆ. ಈ ಜೋಡಿಯ ಮಧ್ಯೆ ಏನೋ ನಡೆಯುತ್ತಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada